ಮುಂಬೈ (ಮಹಾರಾಷ್ಟ್ರ): ದಕ್ಷಿಣದ ಸೂಪರ್‌ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಎರಡು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದರು. ಆಗ ಮದುವೆ ಫೋಟೋಗಳನ್ನಷ್ಟೇ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳು ಇದೀಗ ಸಂಪೂರ್ಣ ವಿವಾಹ ಸಮಾರಂಭವನ್ನು ಆನ್ಲೈನ್ನಲ್ಲಿ ನೋಡಬಹುದು. ಓಟಿಟಿ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಶೀಘ್ರದಲ್ಲೇ ಮದುವೆ ವಿಡಿಯೋ ಸಾಕ್ಷ್ಯಚಿತ್ರ ರೂಪದಲ್ಲಿ ಪ್ರಸಾರವಾಗಲಿದೆ.
'Nayanthara: Beyond the Fairytale' ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್ ಇಂಡಿಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದು, ವಿಡಿಯೋಗೆ "ನಯನತಾರಾ ಮತ್ತು ವಿಘ್ನೇಶ್ ಅವರ ಕನಸಿನ ವಿವಾಹದ ಕುರಿತ ಮಾಂತ್ರಿಕ ಸಾಕ್ಷ್ಯಚಿತ್ರ.. BRB, ಇದಕ್ಕಾಗಿ ನಮ್ಮ ಒಬ್ಬ ಚಂದಾದಾರರು ನೀವಾಗಿ ಎಂದು ವಿನಂತಿಸುತ್ತೇವೆ. ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ನೆಟ್‌ಫ್ಲಿಕ್ಸ್‌ಗೆ ಬರುತ್ತಿದೆ!" ಎಂದು ಶೀರ್ಷಿಕೆಯನ್ನೂ ನೀಡಿದೆ.