ಕರ್ನಾಟಕ

karnataka

ETV Bharat / entertainment

ಅತಿರೇಕ ತೋರಿದ ಅಭಿಮಾನಿಗಳ ವಿರುದ್ಧ ನಯನತಾರಾ ಗರಂ: ವಿಡಿಯೋ - etv bharat kannada

ನಟಿ ನಯನತಾರಾ ತಮ್ಮ ಅಭಿಮಾನಿಯೊಬ್ಬನಿಗೆ ಮೊಬೈಲ್​ ಒಡೆದು ಹಾಕುವುದಾಗಿ ಎಚ್ಚರಿಕೆ ನೀಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

Nayanthara
ನಟಿ ನಯನತಾರಾ

By

Published : Apr 10, 2023, 3:38 PM IST

ತಮಿಳುನಾಡಿನ ದೇವಸ್ಥಾನವೊಂದಕ್ಕೆ ನಟಿ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ದಂಪತಿ ಭೇಟಿ ನೀಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೃಶ್ಯದಲ್ಲಿ, ನಯನತಾರಾ ಅವರು ದೇವಸ್ಥಾನದಲ್ಲಿದ್ದಾಗ, ನೀವು ಹಾಗೆ ಮಾಡಬೇಡಿ ಎಂದು ಮನವಿ ಮಾಡಿದರೂ ತನ್ನ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುತ್ತಿದ್ದ ಅಭಿಮಾನಿಯ ವಿರುದ್ಧ ಅಸಮಾಧಾನದ ವ್ಯಕ್ತಪಡಿಸಿದ ನಟಿ, ಕ್ಲಾಸ್ ತೆಗೆದುಕೊಂಡರು.

ಆಗಿದ್ದೇನು?:ಕೆಲವು ದಿನಗಳ ಹಿಂದೆ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್​ ಶಿವನ್​ ಜೊತೆ ಕುಂಭಕೋಣಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪಂಗುನಿ ಉತ್ತಿರಂ ಸಲುವಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ಬಳಿಕ ಅಲ್ಲಿಂದ ತೆರಳಿ, ವಿಘ್ನೇಶ್​ ಅವರ ಪೂರ್ವಜರ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ, ನಯನತಾರಾ ಅವರನ್ನು ಕಂಡ ಅಭಿಮಾನಿಗಳು ಅವರ ಸುತ್ತ ಗುಂಪುಗೂಡಿದರು. ಕೆಲವರು ಅವರ ಫೋಟೋ ಮತ್ತು ವಿಡಿಯೋ ತೆಗೆಯಲು ಪ್ರಾರಂಭಿಸಿದರು. ತಮ್ಮನ್ನು ಚಿತ್ರೀಕರಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಮೊಬೈಲ್​ ಫೋನ್​ ಒಡೆದು ಹಾಕುವುದಾಗಿ ನಟಿ ಎಚ್ಚರಿಕೆ ನೀಡಿದರು.

ವಿಡಿಯೋದಲ್ಲೇನಿದೆ?: ನಯನತಾರಾ ಆ ವ್ಯಕ್ತಿಗೆ, "ಇನ್ನೊಂದು ಬಾರಿ ನನ್ನನ್ನು ಚಿತ್ರೀಕರಿಸಲು ಪ್ರಯತ್ನಿಸಿದರೆ, ನಿಮ್ಮ ಮೊಬೈಲ್​ ಒಡೆದು ಹಾಕುತ್ತೇನೆ" ಎಂದು ಹೇಳುತ್ತಿರುವುದು ಕೇಳಿಬಂದಿದೆ. ಕೂಡಲೇ ಅಲ್ಲಿಗೆ ಬಂದ ಅವರ ಸಿಬ್ಬಂದಿ ಜನರನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾದರು. ಫೋಟೋಗಳು ಮತ್ತು ವಿಡಿಯೋ ತೆಗೆಯದಂತೆ ಅವರಲ್ಲಿ ವಿನಂತಿ ಮಾಡಿದರು. ಮತ್ತೊಂದು ವಿಡಿಯೋದಲ್ಲಿ ಅಭಿಮಾನಿಯೊಬ್ಬರು ನಟಿಯ ಭುಜ ಮುಟ್ಟುವ ಮೂಲಕ ಅಸಭ್ಯ ವರ್ತನೆ ತೋರಿದ್ದಾರೆ.

ಇದನ್ನೂ ಓದಿ:ಮಹೇಶ್​ ಬಾಬು ಕಿಲ್ಲಿಂಗ್​ ಲುಕ್​ಗೆ ಹೆಂಡತಿ ನಮ್ರತಾ ಕಮೆಂಟ್​; 'ಟಾಲಿವುಡ್​ನ ಗ್ರೀಕ್​ ದೇವತೆ' ಎಂದ ಅಭಿಮಾನಿ

ನಿರ್ಗತಿಕರಿಗೆ ಅಗತ್ಯ ವಸ್ತು ವಿತರಿಸಿದ ದಂಪತಿ: ನಯನತಾರಾ ಮತ್ತು ವಿಘ್ನೇಶ್ ಶಿವನ್ ಶುಕ್ರವಾರ ರಾತ್ರಿ ಭಾರಿ ಮಳೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಈ ಜೋಡಿ ರಸ್ತೆಯಲ್ಲಿರುವ ಜನರಿಗೆ ಬ್ಯಾಗ್ ಹಂಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಯನತಾರಾ ಮತ್ತು ವಿಘ್ನೇಶ್ ಬೀದಿ ಬದಿಯ ಕೆಲವು ಅಂಗಡಿಗಳ ಬಳಿ ಆಶ್ರಯ ಪಡೆದ ಕೆಲವು ಜನರ ಕಡೆಗೆ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಅವರ ಔದಾರ್ಯಕ್ಕೆ ಇಬ್ಬರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ ನಯನತಾರಾ ಬಾಲಿವುಡ್​ ನಟ ಶಾರುಖ್​ ಖಾನ್​ ಜೊತೆ ಜವಾನ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಅಟ್ಲಿ ಆ್ಯಕ್ಷನ್​ ಕಟ್​ ಹೇಳಿದ್ದು, ಜೂನ್​ನಲ್ಲಿ ಸಿನಿಮಾ ರಿಲೀಸ್​ ಆಗಲಿದೆ. ಮತ್ತೊಂದೆಡೆ, ನಯನತಾರಾ ಅವರು ಲೇಡಿ ಸೂಪರ್​ ಸ್ಟಾರ್​ 75 ನೇ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ನೀಲೇಶ್​ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮೊದಲು ಹಾರರ್​ ಥ್ರಿಲ್ಲರ್​ ಚಿತ್ರ ಕನೆಕ್ಟ್​ನಲ್ಲಿ ಕೊನೆಯದಾಗಿ ನಯನತಾರಾ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಶಾರುಖ್​ ಖಾನ್​ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್​ ಬ್ಯೂಟಿ ನಯನತಾರಾ

ABOUT THE AUTHOR

...view details