ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಜವಾನ್' ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಯಾಗಿ ಟ್ರೆಂಡಿಂಗ್ನಲ್ಲಿದೆ. ಲೇಡಿ ಸೂಪರ್ಸ್ಟಾರ್ ನಯನತಾರಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ ಪ್ರಿವ್ಯೂನಲ್ಲಿ ನಯನತಾರಾ ಹಾಗೂ ವಿಜಯ್ ಸೇತುಪತಿ ಅವರನ್ನು ಒಮ್ಮೆ ಮಾತ್ರ ತೋರಿಸಲಾಗಿದೆ. ಇದೀಗ ಚಿತ್ರ ತಯಾರಕರು ನಯನತಾರಾ ಅವರ ಫೋಟೋವನ್ನು ಪ್ರಮುಖವಾಗಿರಿಸಿ ಪೋಸ್ಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ.
ಜವಾನ್‌ನ ನಯನತಾರಾ ಅವರ ಉಬರ್-ಸ್ಟೈಲಿಶ್ ಪೋಸ್ಟರ್ ಅನ್ನು ಹಂಚಿಕೊಳ್ಳಲು ನಟ ಶಾರುಖ್ ಖಾನ್ ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಗನ್ ಹಿಡಿದುಕೊಂಡು ಸಮವಸ್ತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ. "ಅವಳು ಚಂಡಮಾರುತದ ಮೊದಲು ಬರುವ ಗುಡುಗು! #Nayanthara #JawanPrevue Out Now! #Jawan ಸೆಪ್ಟೆಂಬರ್ 7, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಕಿಂಗ್ ಖಾನ್ ಪೋಸ್ಟರ್ಗೆ ಕ್ಯಾಪ್ಶನ್ ನೀಡಿದ್ದಾರೆ.
ಜವಾನ್ ಪ್ರಿವ್ಯೂ ಮತ್ತು ಇತ್ತೀಚಿನ ಪೋಸ್ಟರ್‌ನಲ್ಲಿ ನೋಡಿದಂತೆ, ಈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ನಯನತಾರಾ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಿಜಯ್ ಸೇತುಪತಿ ಕೂಡ ಚಿತ್ರಕ್ಕೆ ಸ್ಟಾರ್ ಪವರ್ ಅನ್ನು ಸೇರಿಸುತ್ತಾರೆ ಎಂದು ವದಂತಿಗಳಿವೆ. ಕಿಂಗ್ ಖಾನ್ ಅವರ ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.