ಮುಂಬೈ (ಮಹಾರಾಷ್ಟ್ರ): 'ದಿಸೀರಿಯಸ್ ಮೆನ್' ಸಿನಿಮಾದ ನಟ ನವಾಜುದ್ದೀನ್ ಸಿದ್ದಿಕಿ ಗುರುವಾರ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಕಾನ್ ಚಲನಚಿತ್ರೋತ್ಸವದಲ್ಲಿ ನಟ ಭಾರತೀಯ ನಿಯೋಗದ ಭಾಗವಾಗಿದ್ದಾರೆ. ಈ ಸಂಭ್ರಮದಲ್ಲಿರುವ ನಟ ಏಳನೇ ಬಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
2012 ರಲ್ಲಿ ಬಿಡುಗಡೆಯಾದ 'ಮಿಸ್ ಲವ್ಲಿ' ಮತ್ತು 'ಗ್ಯಾಂಗ್ಸ್ ಆಫ್ ವಾಸೇಪುರ್' ನಂತರ 2013 ರಲ್ಲಿ 'ಮಾನ್ಸೂನ್ ಶೂಟೌಟ್', 'ದಿ ಲಂಚ್‌ಬಾಕ್ಸ್', 'ಬಾಂಬೆ ಟಾಕೀಸ್' ಬಳಿಕ 2016 ರಲ್ಲಿ ಬಿಡುಗಡೆಯಾದ ರಮಣ್ ರಾಘವ್ 2.0 ಮತ್ತು 2018 ರಲ್ಲಿ ಬಿಡುಗಡೆಯಾದ ಮಾಂಟೊ - ಎಲ್ಲವನ್ನೂ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ.