ಕರ್ನಾಟಕ

karnataka

ETV Bharat / entertainment

ಕಾಣೆಯಾಗಿರುವ ನವೀನ್ ಕೃಷ್ಣ ಪತ್ನಿಯ ಅಕ್ಕ: ಕಂಡಲ್ಲಿ ಮಾಹಿತಿ ನೀಡುವಂತೆ ಮನವಿ - ನವೀನ್ ಕೃಷ್ಣ ಸಂಬಂಧಿ ಆನಂದ್

ನಟ ನವೀನ್ ಕೃಷ್ಣ ಅವರ ಹೆಂಡತಿಯ ಅಕ್ಕ ಕಾಣೆಯಾಗಿದ್ದಾರಂತೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ.

Naveen Krishna wife sister Missing
ನವೀನ್ ಕೃಷ್ಣ

By

Published : Jan 20, 2023, 9:24 PM IST

ಕನ್ನಡ ಚಿತ್ರರಂಗದ ನಟ, ನಿರ್ದೇಶಕ ನವೀನ್ ಕೃಷ್ಣ ಅವರ ಸಹೋದರಿ ನೀತಾ ಪವರ್ ನಾಲ್ಕು ದಿನಗಳ ಮನೆ ಬಿಟ್ಟು ಹೋಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ‌ ನಂಬರ್​ಗೆ ತಿಳಿಸಿ ಅಂತಾ ಹಿಂದೆ ಸ್ವತಃ ನವೀನ್ ಕೃಷ್ಣ ಅವರೇ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯ ಫೋಟೋ ಮತ್ತು ಮಾಹಿತಿಯನ್ನೂ ಪೋಸ್ಟ್ ಮಾಡಿರುವ ಅವರು,'ಕಂಡರೆ ಕೂಡಲೆ ತಿಳಿಸಿ ನನ್ನ ಹೆಂಡತಿ ಅಕ್ಕ' ಎಂದು ಬರೆದುಕೊಂಡಿದ್ದಾರೆ.

ಕಾಣೆಯಾಗಿರುವ ನವೀನ್ ಕೃಷ್ಣ ಅವರ ಹೆಂಡತಿಯ ಅಕ್ಕನ ಮಾಹಿತಿ

ನವೀನ್ ಕೃಷ್ಣ ಅವರು ಪೋಸ್ಟ್ ಮಾಡಿರುವ ಪೋಸ್ಟರ್​ನಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ಹಾಗಾಗಿ ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ, ನಿಮಗೆ ಮಾಹಿತಿ ಸಿಕ್ಕರೆ ಕೂಡಲೇ ಸಂಪರ್ಕಿಸಿ ಎಂದು ಹಲವು ನಂಬರ್​ಗಳನ್ನು ಅವರು ನೀಡಿದ್ದಾರೆ.

ಕುಟುಂಬ ಕಲಹಕ್ಕೆ ಮನೆ ಬಿಟ್ಟಿದ್ದಾರೆ:ಇನ್ನು ನವೀನ್ ಕೃಷ್ಣ ಸಂಬಂಧಿ ಆನಂದ್ ಅವರು ಹೇಳುವ ಹಾಗೇ ನೀತಾ ಕುಟುಂಬದಲ್ಲಿ ಕೆಲ ವಿಚಾರಗಳಿಗೆ ಆಗಾಗ ಗಂಡ ಮತ್ತು ನೀತಾ ಅವರ ನಡುವೆ ಮನಸ್ತಾಪ ಉಂಟಾಗಿತ್ತು‌. ಈ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ಮನನೊಂದಿದ್ದ ನೀತಾ ಪವರ್ ಮನೆಗೆ ಯಾರಿಗೂ ಹೇಳದೇ ಜನವರಿ 17ರಂದು ಮನೆ ಬಿಟ್ಟು ಹೋಗಿದ್ದಾರೆ ಅಂತಾ ಈಟಿವಿ ಭಾರತಕ್ಕೆ ನವೀನ್ ಕೃಷ್ಣ ಸಂಬಂಧಿ ತಿಳಿಸಿದ್ದಾರೆ.

ನವೀನ್​ ಕೃಷ್ಣ ಕುಟುಂಬ ಮತ್ತು ಸಿನಿ ಜೀವನ:ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ಪೋಷಕ ಪಾತ್ರದಲ್ಲಿ ಹಲವಾರು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕನ್ನಡ ಎಲ್ಲ ಹೀರೋಗಳ ಜೊತೆ ಶ್ರೀನಿವಾಸ್​ ಮೂರ್ತಿ ತೆರೆ ಹಂಚಿ ಕೊಂಡಿದ್ದಾರೆ. ಇವರು ರಂಗ ಭೂಮಿಯಿಂದ ಬಂದ ಕಲಾವಿದರಾಗಿದ್ದಾರೆ. ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರ ಹೆಂಡತಿ ಪುಷ್ಪ ಶ್ರೀನಿವಾಸ್ ಮೂರ್ತಿ. ದಂಪತಿಗಳಿಗೆ ಇಬ್ಬರು ಮಕ್ಕಳು ನವೀನ ಕೃಷ್ಣ, ಯೋಗೀತಾ ನಾಗ್.

ಶ್ರೀನಿವಾಸ್ ಮೂರ್ತಿ ಅವರ ಪುತ್ರನಾದ ನವೀನ್ ಕೃಷ್ಣ ನಾಯಕ ನಟರಾಗುವ ಮೊದಲು ಚಿತ್ರರಂಗದಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಧಿಮಾಕು ಅವರಿಗೆ ಹೆಸರು ತಂದು ಕೊಟ್ಟ ಸಿನಿಮಾಗಳಲ್ಲೊಂದು. ಸ್ಟಾರ್ ನಟರ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ವತಃ ನಿರ್ದೇಶಕರಾಗಿ ಹಲವು ಧಾರಾವಾಹಿಗನ್ನು ನಿರ್ದೇಶನ ಮಾಡಿದ್ದಾರೆ. ಕಿರುತೆರೆಯಲ್ಲಿ ಕಿರಿಜಾ ಕಲ್ಯಾಣ, ಪತ್ತೆದಾರಿ ಪ್ರತಿಭಾ, ಕಮಲಿ, ಉಘೇ ಉಘೆ ಮಾದೇಶ್ವರ, ರಾಧಾಕೃಷ್ಣ ಮತ್ತು ಯಡಿಯೂರು ಶ್ರೀ ಸಿದ್ದಲಿಂಗೇಶ್ವರದಲ್ಲಿ ಬಣ್ಣ ಹಚ್ಚಿದ್ದರು.

ಸದ್ಯ ಮತ್ತೊಂದು ಹೊಸ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಸಂಕಷ್ಟ ಜೊತೆಗೆ ದೇವರು ಮತ್ತು ಮನುಷ್ಯನ ನಡುವಿನ ನಂಟಿನ ರೀತಿಯ ಕಥೆಗೆ ಪಾತ್ರವಾಗಿದ್ದಾರೆ. ಝೀ ಕನ್ನಡದಲ್ಲಿ ಭೂಮಿಗೆ ಬಂದ ಭಗವಂತ ಎಂಬ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು ಸದ್ಯದಲ್ಲೇ ಪ್ರಸಾರ ಆಗಲಿದೆ.

ಇದನ್ನೂ ಓದಿ:ತಾಯಿ ಮಕ್ಕಳ ಆತ್ಮಹತ್ಯೆ: ಮಾನಸಿಕ ಖಿನ್ನತೆಯೇ ಸಾವಿಗೆ ಕಾರಣವಾ..?

ABOUT THE AUTHOR

...view details