ಕರ್ನಾಟಕ

karnataka

ETV Bharat / entertainment

ರಷ್ಯಾ ಟೀಕಿಸಿದ 'ನವಲ್ನಿ'ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಆಸ್ಕರ್‌ ಪ್ರಶಸ್ತಿ - ರಷ್ಯಾದ ನವಲ್ನಿ ಚಿತ್ರ ಅತ್ಯುತ್ತಮ ಸಾಕ್ಷ್ಯ ಚಿತ್ರ

ರಷ್ಯಾದ ರಾಜಕೀಯ ನಾಯಕ ಅಲೆಕ್ಸಿ ನವೆಲ್ನಿ. ಇವರ ಸಾವಿನ ಪ್ರಯತ್ನದ ಹಿಂದಿನ ಕಥೆಯನ್ನು ನವೆಲ್ನಿ ಸಾಕ್ಷ್ಯಚಿತ್ರ ಹೊಂದಿದೆ.

Navalny won the Best Documentary Award in Oscars
Navalny won the Best Documentary Award in Oscars

By

Published : Mar 13, 2023, 12:21 PM IST

Updated : Mar 13, 2023, 5:35 PM IST

ಲಾಸ್ ಏಂಜಲಿಸ್: ರಾಜಕೀಯ ಕಥಾಧಾರಿತ 'ನವಲ್ನಿ' ಅತ್ಯುತ್ತಮ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಗಳಿಸಿದೆ. ರಷ್ಯಾ ವಿರೋಧ ಪಕ್ಷದ ನಾಯಕನ ಹತ್ಯೆ ಆರೋಪಿನ ಸಂಚಿನ ಕಥೆಯನ್ನು ಇದು ಹೊಂದಿದೆ. ಡೇನಿಯಲ್​ ರೋಹರ್​ ನಿರ್ದೇಶನ ಮಾಡಿದ್ದಾರೆ. ಅಲೆಕ್ಸಿ ನವೆಲ್ನಿ ವಿಷಾಹಾರ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಗಂಭೀರ ಅನಾರೋಗ್ಯಕ್ಕೀಡಾಗಿ ಕೋಮಾಕ್ಕೆ ಜಾರಿದ್ದರು. ಅವರ ಈ ಸ್ಥಿತಿಗೆ ಕಾರಣದ ಸತ್ಯ ಹುಡುಕುವ ಪತ್ರಕರ್ತರು, ರಾಯಕೀಯ ಪಿತೂರಿ ಮತ್ತು ಸೋವಿಯತ್ ಯುಗದ ವಿಷಯಗಳನ್ನು ಸಾಕ್ಷ್ಯಚಿತ್ರ ಹೊಂದಿದೆ.

ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ರೋಹರ್​, ಇದನ್ನು ನವೆಲ್ನಿ ಮತ್ತು ಜಗತ್ತಿನೆಲ್ಲೆಡೆಯ ರಾಜಕೀಯ ಕೈದಿಗಳಿಗೆ ಸಮರ್ಪಣೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಲೆಕ್ಸಿ ಮಾತನಾಡಿ, ನಿಮ್ಮ ಸಂದೇಶವನ್ನು ನಾವು ಮರೆತಿಲ್ಲ. ಸರ್ವಾಧಿಕಾರಿಗಳು ಮತ್ತು ನಿರಂಕುಶಾಧಿಕಾರವನ್ನು ಚಿತ್ರ ಎತ್ತಿ ತೋರಿಸಿದ್ದು, ಅದನ್ನು ವಿರೋಧಿಸಲು ನಾವು ಭಯಪಡಬಾರದು ಎಂದರು. ನವೆಲ್ನಿ ಹೆಂಡತಿ ಯುಲಿಯಾ ಮಾತನಾಡಿ, ಅಲೆಕ್ಸಿ, ನಾನು ನೀವು ಮತ್ತು ನಮ್ಮ ದೇಶ ಸ್ವತಂತ್ರರಾಗುವುದರ ಕನಸು ಕಾಣುತ್ತಿದ್ದೇನೆ. ಗಟ್ಟಿಯಾಗಿರಿ ಎಂದರು.

ಯಾರಿದು ನವಲ್ನಿ?: ನವಲ್ನಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಇವರು ಹಲವು ವರ್ಷಗಳಿಂದ ತಲೆನೋವಾಗಿದ್ದಾರೆ. ಸಮಾನ ಮನಸ್ಕರನ್ನು ಒಟ್ಟುಗೂಡಿಸಿ ರಷ್ಯಾ ಮತ್ತು ಪುಟಿನ್ ಆಡಳಿತದಲ್ಲಿ ಭ್ರಷ್ಟಾಚಾರದ ಬಗ್ಗೆ ಹಲವಾರು ವರದಿಗಳನ್ನು ಬಿಡುಗಡೆ ಮಾಡಿದ್ದರು.

2020 ಮತ್ತು 2021ರಲ್ಲಿ ಬರ್ಲಿನ್​ನಲ್ಲಿ ನವೆಲ್ನಿ ಚೇತರಿಕೆ ಕಾಣುತ್ತಿದ್ದ ವೇಳೆ ಅವರ ಜೊತೆ ಸಮಯ ಕಳೆದ ನಿರ್ದೇಶಕ ರೋಹರ್​ ಈ ವೇಳೆ ಅವರನ್ನು ಹತ್ಯೆ ಮಾಡುವ ಯತ್ನಗಳು, ಅದರ ಹಿಂದಿನ ಕಥೆ ಕುರಿತು ಮಾತುಕತೆ ನಡೆಸಿದ್ದರು. ನವಲ್ನಿ ಅವರನ್ನು ರಷ್ಯಾ ಸರ್ಕಾರ ಕ್ರೆಮ್ಲಿನ್‌ನ ತೀವ್ರ ಟೀಕಾಕಾರ ಎಂದು ಕರೆದಿದ್ದರು.

ಹಲವು ಪ್ರಶಸ್ತಿ: ಈ ಚಿತ್ರ ಸನ್​ಡ್ಯಾನ್ಸ್ ಫಿಲ್ಮ್​ ಫೆಸ್ಟಿವಲ್​ನಲ್ಲೂ ಪ್ರಸಾರಗೊಂಡಿತ್ತು. ಇಲ್ಲೂ ಕೂಡ ಈ ಸಾಕ್ಷ್ಯಚಿತ್ರ ಆಡಿಯನ್ಸ್​ ಅವಾರ್ಡ್​ ಮತ್ತು ಫೆಸ್ಟಿವಲ್​ ಫೆವರೇಟ್​ ಅವಾರ್ಡ್​​ ಗೆದ್ದಿತು. ಚಿತ್ರವನ್ನು ಸಿಎನ್​ಎನ್​ ಫಿಲ್ಮ್​ ಮತ್ತು ಎಚ್​ಬಿಒ ಮ್ಯಾಕ್ಸ್​ ನಿರ್ಮಿಸಿದೆ.

ಇದನ್ನೂ ಓದಿ:RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಗರಿ!

Last Updated : Mar 13, 2023, 5:35 PM IST

ABOUT THE AUTHOR

...view details