'ದಸರಾ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ನಂತರ ನ್ಯಾಚುರಲ್ ಸ್ಟಾರ್ ನಾನಿ ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಅಂಟೆ ಸುಂದರಾನಿಕಿ'ಯಂತಹ ಕಾಮಿಡಿ ಎಮೋಷನಲ್ ಸಿನಿಮಾವನ್ನು ನಿರ್ದೇಶಿಸಿದ್ದ ವಿವೇಕ್ ಆತ್ರೇಯ ಅವರು ನಾನಿಯ 31ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರವನ್ನು ಡಿವಿವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಿರ್ಮಿಸಲಿದೆ. ದಸರಾ ಹಬ್ಬದ ಅಂಗವಾಗಿ ಹೈದರಾಬಾದ್ನಲ್ಲಿ ಸಿನಿಮಾ ಸೆಟ್ಟೇರಿದೆ.
ಚಿತ್ರಕ್ಕೆ ಶೀರ್ಷಿಕೆ ಫೈನಲ್: ನಾನಿಯ 31ನೇ ಸಿನಿಮಾಗೆ 'ಸರಿಪೋದಾ ಶನಿವಾರಂ' ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರವು ನವರಾತ್ರಿಯ ಶುಭ ಸಂದರ್ಭದಲ್ಲಿ ಸೆಟ್ಟೇರಿದೆ. ಈ ವೇಳೆ ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮರಾಗೆ ಚಾಲನೆ ನೀಡಿದರು. ವಿ.ವಿ.ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
'ಸರಿಪೋದಾ ಶನಿವಾರಂ' ಪಕ್ಕ ಮಾಸ್ ಆ್ಯಕ್ಷನ್ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ತಮಿಳು ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಿಯಾಂಕಾ ಮೋಹನ್ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಡಿ.ವಿ.ವಿ.ದಾನಯ್ಯ ನಿರ್ಮಾಣದ ಮತ್ತೊಂದು ಚಿತ್ರವಾದ ಪವನ್ ಕಲ್ಯಾಣ್ ಅವರ 'ಓಜಿ'ಗೂ ಇವರೇ ಹೀರೋಯಿನ್. ಒಂದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಪ್ರಿಯಾಂಕಾ ಮೋಹನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ.ಜಿ. ಛಾಯಾಗ್ರಹಣವಿರಲಿದೆ.
ಇದನ್ನೂ ಓದಿ:ನ್ಯಾಚುರಲ್ ಸ್ಟಾರ್ ನಾನಿಗೆ ಕಿಚ್ಚ ಸುದೀಪ್ ಸಾಥ್: 'ಹಾಯ್ ನಾನ್ನ' ಸಿನಿಮಾ ಸಾಂಗ್ ರಿಲೀಸ್