ಕರ್ನಾಟಕ

karnataka

ETV Bharat / entertainment

Matte maduve: ನರೇಶ್​- ಪವಿತ್ರಾ ನಟನೆಯ​ 'ಮತ್ತೆ ಮದುವೆ' ಓಟಿಟಿಗೂ ಎಂಟ್ರಿ: ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮಿಂಗ್‌ - ಟಾಲಿವುಡ್‌ ನಟ ನರೇಶ್‌

'ಮತ್ತೆ ಮದುವೆ' ಸಿನಿಮಾ ಇದೇ ತಿಂಗಳ 23 ರಿಂದ ಓಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ.

matte maduve
ನರೇಶ್​ ಮತ್ತು ಪವಿತ್ರಾ

By

Published : Jun 20, 2023, 6:31 PM IST

ಟಾಲಿವುಡ್‌ ನಟ ನರೇಶ್‌ ಹಾಗೂ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಅಭಿನಯದ 'ಮತ್ತೆ ಮದುವೆ' ಸಿನಿಮಾ ಜೂನ್​ 9 ರಂದು ತೆರೆ ಕಂಡಿತ್ತು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬಂದಿದ್ದ ಈ ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮತ್ತೆ 'ಮದುವೆ ಸಿನಿಮಾ' ಓಟಿಟಿಗೆ ಬರಲಿದೆ. ಇದೇ ತಿಂಗಳ 23 ರಿಂದ ಓಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ.

ತೆಲುಗು ಭಾಷೆಯಲ್ಲಿ ಈ ಚಿತ್ರ ಮಳ್ಳಿ ಪೆಲ್ಲಿ ಎಂಬ ಶೀರ್ಷಿಕೆಯಡಿ ಮೇ 26 ರಂದು ಬಿಡುಗಡೆಯಾಗಿತ್ತು. ಟಾಲಿವುಡ್​ನಲ್ಲಿ ಒಳ್ಳೆಯ ರೆಸ್ಪಾನ್ಸ್​ ಸಿಕ್ಕ ಬೆನ್ನಲ್ಲೇ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಟೈಟಲ್​ನಲ್ಲಿ ಸಿನಿಮಾವನ್ನು ರಿಲೀಸ್​ ಮಾಡಲಾಯಿತು. ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿದ್ದ ನರೇಶ್​ ಹಾಗೂ ಪವಿತ್ರಾ ಲವ್​ ಸ್ಟೋರಿ ಇದೀಗ ಓಟಿಟಿ ಮೂಲಕ ನಿಮ್ಮ ಕೈಗೆ ಸಿಗಲಿದೆ.

ನರೇಶ್​ ಅವರ ತಾಯಿ, ಹಿರಿಯ ನಟಿ ಮತ್ತು ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973 ರಲ್ಲಿ ಸೂಪರ್ ಸ್ಟಾರ್‌ ಕೃಷ್ಣ ಅವರ ಜೊತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಈ ಬ್ಯಾನರ್​ಗೆ ಭರ್ತಿ 50 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇದೇ ಬ್ಯಾನರ್​ ಮೂಲಕ ನರೇಶ್​ ಅವರು ಮತ್ತೆ ಮದುವೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರಕ್ಕೆ ಎಂ.ಎಸ್​ ರಾಜು ಕಥೆ ಬರೆದು ಆಕ್ಷನ್​ ಕಟ್​ ಹೇಳಿದ್ದಾರೆ. ಜಯಸುಧಾ ಹಾಗೂ ಶರತ್​ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್​ ಜೋಡಿಯ ಫ್ಯಾಮಿಲಿ ಎಂಟರ್ಟೈನ್​ಮೆಂಟ್​ ಕಹಾನಿಯನ್ನು ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಅಮೆಜಾನ್​ನಲ್ಲಿ ನೋಡಬಹುದು.

ಇದನ್ನೂ ಓದಿ:Sathish Ninasam: ನಟ ಸತೀಶ್​ ನೀನಾಸಂ ಹುಟ್ಟುಹಬ್ಬ- ಹೊಸ ಪೋಸ್ಟರ್‌ ಮೂಲಕ 'ಮ್ಯಾಟ್ನಿ' ಚಿತ್ರತಂಡದಿಂದ ಶುಭಾಶಯ

ನರೇಶ್-ಪವಿತ್ರಾ ರಿಲೇಶನ್​ಶಿಪ್​: 'ಸಮ್ಮೋಹನಂ’ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದ ನರೇಶ್-ಪವಿತ್ರಾ ಆ ನಂತರ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ಆತ್ಮೀಯರಾದರು. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿತ್ರರಂಗವು ಸೇರಿದಂತೆ ಜಾಲತಾಣಗಳಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು.

ನರೇಶ್ ಅವರ ಮೂರನೇ ಪತ್ನಿ ರಮ್ಯಾ ಕೂಡ ಇವರಿಬ್ಬರ ಸಂಬಂಧದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇತ್ತೀಚೆಗೆ ಮೈಸೂರಿನ ಹೋಟೆಲ್​ವೊಂದರಲ್ಲಿ ಇಬ್ಬರೂ ಜೊತೆಯಾಗಿ ತಂಗಿರುವ ಸುದ್ದಿ ತಿಳಿದು ರಮ್ಯಾ ರಘುಪತಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ಅವರನ್ನು ಹೋಟೆಲ್​ನಿಂದ ಹೊರಗೆ ಕರೆಯುವಂತೆ ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಭದ್ರತೆಯಲ್ಲಿ ನರೇಶ್ ಮತ್ತು ಪವಿತ್ರಾ ಅವರನ್ನು ಹೊರಗೆ ಕರೆತಂದು ಕಾರಲ್ಲಿ ಕಳುಹಿಸಿದ್ದರು.

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಈ ಜೋಡಿ ಸಾಕಷ್ಟು ವಿಷಯ ಹಂಚಿಕೊಂಡಿತ್ತು. ಈ ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂಕೋರ್ಟ್‌ ಲಿವ್‌ ಇನ್‌ ರಿಲೇಶನ್‌ಶಿಪ್‌ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತಹದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ?. ನಾನಂತೂ ಸಿಂಗಲ್‌ ಅಲ್ಲ. ಪವಿತ್ರಾ ಹಾಗೂ ನಾನು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ನರೇಶ್​ ಬಹಿರಂಗವಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ:'ಗುಂಟೂರ್ ಕಾರಂ'ನಿಂದ ಹೊರಬಂದ ಪೂಜಾ ಹೆಗ್ಡೆ​​: ಮಹೇಶ್ ಬಾಬು ಜೊತೆ ಸ್ಕ್ರೀನ್​ ಶೇರ್ ಮಾಡಿಲಿರುವ ನಟಿ ಯಾರು?

ABOUT THE AUTHOR

...view details