ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಬಾಕ್ಸ್ ಆಫೀಸ್ನಲ್ಲಿ ಭಾರೀ ಮೊತ್ತದ ಹಣ ಕಲೆಕ್ಷನ್ ಮಾಡಿದೆ. ಬಿಡುಗಡೆಯಾಗಿ ಎರಡು ದಿನದಲ್ಲೇ ಹಿಟ್ ಟಾಕ್ ಜೊತೆಗೆ ಕೋಟಿ ಹಣ ಲೂಟಿ ಮಾಡಿದೆ. ಮೊದಲ ದಿನ 38 ಕೋಟಿ ಕಲೆಕ್ಷನ್ ಮಾಡಿದ ದಸರಾ, ಎರಡನೇ ದಿನ ಸುಮಾರು 15 ಕೋಟಿ ಗಳಿಕೆ ಮಾಡಿದೆ. ಹೀಗಾಗಿ ಎರಡೇ ದಿನದಲ್ಲಿ ಒಟ್ಟು 53 ಕೋಟಿ ರೂಪಾಯಿ ಸಂಪಾದಿಸಿದೆ.
ಎರಡು ತೆಲುಗು ರಾಜ್ಯಗಳಲ್ಲಿ ಸುಮಾರು 20.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟಾರೆ 34.45 ಕೋಟಿ ಗಳಿಸಿದೆ. ವಿದೇಶದಲ್ಲಿ 5.60 ಕೋಟಿ ಶೇರ್ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 23.08 ಕೋಟಿ ಪಡೆದುಕೊಂಡಿದೆ. ಹೀಗಾಗಿ 52.40 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದ ನಾನಿ ಮಾಸ್, ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಹೀಗಾಗಿಯೇ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡಿದೆ.
ಪ್ರೀ ರಿಲೀಸ್ಗೂ ಮುನ್ನ ಬ್ಯುಸಿನೆಸ್:ದಸರಾ ಸಿನಿಮಾ ಬಿಡುಗಡೆಗೂ ಮುನ್ನವೇ 48 ಕೋಟಿ ರೂಪಾಯಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಈ ಚಿತ್ರವು ವಿದೇಶದಲ್ಲಿಯೂ ಜಾದೂ ಮಾಡಿದ್ದು, ಅಮೆರಿಕದಲ್ಲಿ ಭರ್ಜರಿ ಓಪನಿಂಗ್ ಪಡೆದಿದೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆ ಈ ವಾರಾಂತ್ಯದಲ್ಲಿ 20 ಕೋಟಿಗಿಂತಲೂ ಹೆಚ್ಚು ಗಳಿಸುವ ಸಾಧ್ಯತೆ ಇದೆ. ಏನಿಲ್ಲವೆಂದರೂ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ:ರಾಜಕೀಯ ಎಂಟ್ರಿ ಬಗ್ಗೆ ವದಂತಿ... April 1st ಹೀಗೆ ಹೇಳಿ ಎಂದ ರಿಷಬ್ ಶೆಟ್ಟಿ