ಕರ್ನಾಟಕ

karnataka

ETV Bharat / entertainment

'ನಾನಿ 30' ಫಸ್ಟ್​ ಪೋಸ್ಟರ್​ ರಿಲೀಸ್​: ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​

'ನಾನಿ 30' ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಮೊದಲ ಪೋಸ್ಟರ್ ಅನಾವರಣ ಮಾಡಲಾಗಿದೆ.

nani
'ನಾನಿ 30'

By

Published : Apr 16, 2023, 5:34 PM IST

ನ್ಯಾಚುರಲ್​ ಸ್ಟಾರ್​ ನಾನಿ ಮುಖ್ಯಭೂಮಿಕೆಯ ಮೊದಲ ಪ್ಯಾನ್​ ಇಂಡಿಯಾ ಚಿತ್ರ 'ದಸರಾ'​ ಹಿಟ್​ ಆಗಿದೆ. ಕೇವಲ ಆರೇ ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಾನಿ ಮುಂದಿನ ಚಿತ್ರಕ್ಕಾಗಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದೀಗ ನಟ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ. ಚಿತ್ರದಲ್ಲಿ ನಾನಿ ಜೊತೆ ಮೃಣಾಲ್​ ಠಾಕೂರ್​ ನಟಿಸುತ್ತಿದ್ದು, ಸಿನಿಮಾವನ್ನು ಸದ್ಯ 'ನಾನಿ 30' ಎಂದೇ ಕರೆಯಲಾಗುತ್ತಿದೆ.

ಶೌರ್ಯುವ್​ ನಿರ್ದೇಶಿಸುತ್ತಿರುವ ಚಿತ್ರದ ಬಿಡುಗಡೆ ದಿನಾಂಕ ಮತ್ತು ಮೊದಲ ಪೋಸ್ಟರ್​ ಅನ್ನು ನಾನಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಡಿಸೆಂಬರ್​ 21 ರಂದು ಹೆಸರಿಡದ ನಾನಿ 30 ಸಿನಿಮಾ ಥಿಯೇಟರ್​ಗೆ ಬರಲು ಸಜ್ಜಾಗಿದೆ. ಸಿನಿಮಾದ ಮೊದಲ ಪೋಸ್ಟರ್​ ಅನ್ನು ನಾನಿ ಶೇರ್​ ಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ನಾನಿ ಪುಟ್ಟ ಬಾಲಕಿಯನ್ನು ತಬ್ಬಿಕೊಂಡು ನಿಂತಿರುವುದನ್ನು ಕಾಣಬಹುದು. ಹುಡುಗಿಯ ಮುಖದಲ್ಲಿ ಆತಂಕದ ಭಾವವಿದೆ. ಚಿತ್ರಕ್ಕೆ ಸಾನು ಜಾನ್​ ವರ್ಗೀಸ್​ ಛಾಯಾಗ್ರಹಣ, ಮಲಯಾಳಂನ ಜನಪ್ರಿಯ ಸಂಗೀತ ಸಂಯೋಜಕ ಹೇಶಮ್​ ಅಬ್ದುಲ್​ ವಜಾಬ್​ ಅವರ ಸಂಗೀತ ಮತ್ತು ಪ್ರವೀಣ್​ ಅಂತೋನಿ ಸಂಕಲನವಿದೆ. ಅವಿನಾಶ್​ ಕೊಲ್ಲ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್​ ಭೂಮಿ ಮೇಲಿರಲು ಇವರೇ ಕಾರಣ

ನಾನಿ 'ದಸರಾ' ಸೂಪರ್​ ಹಿಟ್​: ಮಾರ್ಚ್​ 30 ರಂದು ಐದು ಭಾಷೆಗಳಲ್ಲಿ ತೆರೆ ಕಂಡ ದಸರಾ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ತೆಲುಗು ಸ್ಟಾರ್​ ನಾನಿ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ಆರೇ ದಿನಗಳಲ್ಲಿ ಚಿತ್ರ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ಸೂಪರ್​ ಹಿಟ್​ ಆಗಿದ್ದಲ್ಲದೇ ಕಲೆಕ್ಷನ್​ ವಿಚಾರದಲ್ಲೂ ಓಟ ಮುಂದುವರಿಸಿದೆ. ಈ ಚಿತ್ರದಲ್ಲಿ ನಾನಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಕೀರ್ತಿ ಸುರೇಶ್​ ನಾಯಕ ನಟಿಯಾಗಿ ಗಮನ ಸೆಳೆದಿದ್ದಾರೆ.

ಕಥೆಯನ್ನು ತೆರೆ ಮೇಲೆ ರವಾನಿಸಿರುವ ರೀತಿಗೆ ಶ್ರೀಕಾಂತ್​ ಒಡೆಲಾ ಮೆಚ್ಚುಗೆ ಸಂಪಾದಿಸಿದ್ದಾರೆ. ಚಿತ್ರವನ್ನು ಸುಧಾಕರ್​ ಚೆರುಕುರಿ ಅವರು ಶ್ರೀ ಲಕ್ಷೀ ವೆಂಕಟೇಶ್ವರ ಸಿನಿಮಾಸ್​ ಬ್ಯಾನರ್​ ಅಡಿ ನಿರ್ಮಿಸಿದ್ದಾರೆ. ದೀಕ್ಷಿತ್​ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್​, ಜರೀನಾ ವಹಾಬ್​ ಸೇರಿದಂತೆ ಹಲವರು ನಟಿಸಿದ್ದಾರೆ. ಸತ್ಯನ್​ ಸೂರ್ಯನ್​ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನ್ಬರಿವ್​ ಸಾಹಸ ನಿರ್ದೇಶನ ಮಾಡಿದ್ದಾರೆ. ಸಂತೋಷ್​ ನಾರಾಯಣನ್​ ಸಂಗೀತವಿದೆ. ತೆಲಂಗಾಣ ರಾಜ್ಯದ ವೀರ್ಲಪಲ್ಲಿ, ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಮಾಸ್​ ಆ್ಯಕ್ಷನ್​ ಸಬ್ಜೆಕ್ಟ್​ ಮೂಲಕ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ:ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್​ ಫಿಕ್ಸ್​​

ABOUT THE AUTHOR

...view details