ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ದಂಪತಿಯ ಪುತ್ರಿ ಸಿತಾರಾ ಘಟ್ಟಮನೇನಿ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪುಟಾಣಿ ಚೆಲುವೆ 11ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗಳ ಬರ್ತ್ಡೇಗೆ ಮಹೇಶ್ ದಂಪತಿ ನಿನ್ನೆ ರಾತ್ರಿ ಮನೆಯಲ್ಲಿಯೇ ಪಾರ್ಟಿ ಆಯೋಜಿಸಿದ್ದರು. ಹೆಚ್ಚಾಗಿ ಸ್ಟಾರ್ ನಟರು ತಮ್ಮ ಕುಟುಂಬದಲ್ಲಿ ಯಾರದ್ದೇ ಹುಟ್ಟುಹಬ್ಬವಿದ್ದರೂ ವಿದೇಶದಲ್ಲಿ ಅಥವಾ ಇನ್ಯಾವುದೋ ಫೇಮಸ್ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪಾರ್ಟಿ ಆಯೋಜಿಸುತ್ತಾರೆ.
ಆದರೆ ಮಹೇಶ್ ತಮ್ಮ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಿದ್ದಾರೆ. ಆಯೋಜಿಸಿದ್ದ ಪಾರ್ಟಿಯಲ್ಲಿ ಸಿತಾರಾ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ಮಹೇಶ್ ಪ್ರಿನ್ಸೆಸ್ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಬರ್ತ್‌ಡೇ ಸೆಲೆಬ್ರೇಷನ್ ವಿಡಿಯೋ ಮತ್ತು ಫೋಟೋಗಳನ್ನು ನಮ್ರತಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪಾರ್ಟಿಯ ಅಲಂಕಾರ ಮತ್ತು ಸಿತಾರಾ ಹುಟ್ಟುಹಬ್ಬ ಹೇಗೆ ಆಚರಿಸಿದರು ಎಂಬುದನ್ನು ವಿಡಿಯೋ ಮತ್ತು ಫೋಟೋದಲ್ಲಿ ಕಾಣಬಹುದು. ಸಿತಾರಾ ಗರ್ಲ್ಸ್ ಗ್ಯಾಂಗ್ ಬರ್ತ್‌ಡೇ ಸಂಭ್ರಮವನ್ನು ಹೆಚ್ಚಿಸಿದ್ದರು.
ವಿಡಿಯೋದಲ್ಲಿ ಸಭಾಂಗಣವನ್ನು ಒಂದು ಬದಿಯಲ್ಲಿ ಹೊಳೆಯುವ ದೀಪಗಳಿಂದ ಅಲಂಕರಿಸಲಾಗಿತ್ತು. ಇನ್ನೊಂದು ಬದಿಯಲ್ಲಿ ಗೋಲ್ಡನ್ ಬಣ್ಣದಲ್ಲಿ ಡೆಕೋರೇಟ್ ಮಾಡಲಾಗಿತ್ತು. 'ಹ್ಯಾಪಿ ಬರ್ತ್‌ಡೇ ಸಿತಾರಾ' ಎಂದು ಗೋಡೆಯಲ್ಲಿ ಅಕ್ಷರಗಳನ್ನು ಜೋಡಿಸಲಾಗಿತ್ತು. ಸುತ್ತಲೂ ಕಲರ್ಫುಲ್ ಆಗಿ ಬಲೂನ್ಗಳನ್ನು ಜೋಡಿಸಲಾಗಿತ್ತು. ಡಿಸ್ಕೋ ದೀಪಗಳು ಪಾರ್ಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.
ನಮ್ರತಾ ಅವರು ಸಿತಾರಾಗೆ ಕೇಕ್ ತಿನ್ನಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಸಿತಾರಾ ಅವರ ಅಣ್ಣ ಗೌತಮ್ ಘಟ್ಟಮನೇನಿ ಕೇಕ್ ತಿನ್ನಿಸುತ್ತಿರುವುದು ಕಂಡು ಬಂದಿದೆ. ಗ್ರೂಪ್ ಫೋಟೋದಲ್ಲಿ ಸಿತಾರಾ ಅವರು ಸ್ನೇಹಿತರೊಂದಿಗೆ ಸೇರಿದಂತೆ ಎಲ್ಲರೂ ಜೊತೆಯಾಗಿ ಪೋಸ್ ನೀಡಿದ್ದಾರೆ. "ಕ್ಯೂಟೀಸ್ ಮತ್ತು ನನ್ನ ಲಿಟಲ್ ಬಿಗ್ ಬಾರ್ಬಿ" ಎಂದು ನಮ್ರತಾ ಫೋಟೋ ಕ್ಯಾಪ್ಶನ್ ಕೊಟ್ಟಿದ್ದಾರೆ. ಸಿತಾರಾ ತಮ್ಮ ಬರ್ತ್‌ಡೇ ಸೆಲೆಬ್ರೇಷನ್ಗಾಗಿ ಗುಲಾಬಿ ಬಣ್ಣದ ಕ್ರಾಪ್ ಟಾಪ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು.