ಕರ್ನಾಟಕ

karnataka

HBD Mahesh Babu: ಜನ್ಮದಿನ ಸಂಭ್ರಮದಲ್ಲಿರುವ ಮಹೇಶ್​ ಬಾಬುಗೆ ಪತ್ನಿಯಿಂದ ಪ್ರೀತಿಯ ಸುರಿಮಳೆ

By

Published : Aug 9, 2023, 12:25 PM IST

Mahesh Babu Birthday: 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಹೇಶ್​ ಬಾಬು ಅವರಿಗೆ ನಮ್ರತಾ ಶಿರೋಡ್ಕರ್ ವಿಶೇಷವಾಗಿ ಶುಭ ಕೋರಿದ್ದಾರೆ.

namrata shirodkar birthday wish for mahesh Babu
ಮಹೇಶ್​ ಬಾಬುಗೆ ಪತ್ನಿಯಿಂದ ಪ್ರೀತಿಯ ಮಹಾಪೂರ

ಟಾಲಿವುಡ್​​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಜನಪ್ರಿಯ ನಟನಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಗಣ್ಯರೂ ಸೇರಿದಂತೆ ಚಿತ್ರರಂಗದವರು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ನಟಿ, ಪತ್ನಿ ನಮ್ರತಾ ಶಿರೋಡ್ಕರ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುಂದರ ಫೋಟೋ ಶೇರ್ ಮಾಡಿ, ವಿಶೇಷವಾಗಿ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟನ ಹೆಸರು ಟ್ರೆಂಡಿಂಗ್​​ನಲ್ಲಿದೆ.

ನಮ್ರತಾ ಶಿರೋಡ್ಕರ್ ಮಹೇಶ್​ ಬಾಬು ರೊಮ್ಯಾಂಟಿಕ್​ ಫೋಟೋ: ನಮ್ರತಾ ಶಿರೋಡ್ಕರ್ ಇನ್​ಸ್ಟಾಗ್ರಾಮ್​ನಲ್ಲಿ ರೊಮ್ಯಾಂಟಿಕ್​ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಪ್ರತಿಭಾನ್ವಿತ ನಟ ಪತ್ನಿ ನಮ್ರತಾ ಮಡಿಲಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಫೋಟೋವನ್ನು ದಂಪತಿಯ ಇಬ್ಬರು ಮುದ್ದು ಮಕ್ಕಳಾದ ಗೌತಮ್​ ಘಟ್ಟಮನೇನಿ, ಸಿತಾರಾ​ ಘಟ್ಟಮನೇನಿ ಕ್ಲಿಕ್ಕಿಸಿರುವಂತೆ ತೋರುತ್ತಿದೆ. ಸಿಡಿಯುತ್ತಿರುವ ಪಟಾಕಿಯನ್ನು ಈ ಪ್ರೇಮಪಕ್ಷಿಗಳು ಆನಂದಿಸುತ್ತಿದ್ದು, ಫೋಟೋ ಬಹಳ ಸುಂದರವಾಗಿದೆ.

ನೀವು ಇಂದಿಗೂ ಎಂದೆಂದಿಗೂ.... ತಮ್ಮ ಸುಂದರ ಕ್ಷಣ ಹಂಚಿಕೊಂಡ ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್, ''ಹುಟ್ಟುಹಬ್ಬದ ಶುಭಾಶಯಗಳು ಮಹೇಶ್​ ಬಾಬು, ನೀವು ಇಂದಿಗೂ ಎಂದೆಂದಿಗೂ'' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಆಗುತ್ತಿದ್ದಂತೆ ಸಿನಿ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​​ನಲ್ಲಿ ಸದ್ದು ಮಾಡಲು ಪ್ರಾರಂಭಿಸಿದ್ದಾರೆ. ಬಹುಬೇಡಿಕೆ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಶುರು ಮಾಡಿದ್ದಾರೆ.

ನಮ್ರತಾ ಶಿರೋಡ್ಕರ್ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಹುಟ್ಟುಹಬ್ಬದ ಶುಭಾಶಯಗಳು ಎಂಬಿ ಸರ್​​, ದೇವರು ನಿಮಗೆ ಉತ್ತಮ ಆರೋಗ್ಯ, ಸಂತೋಷ ಆಶೀರ್ವದಿಸಲಿ' ಎಂದು ಬರೆದಿದ್ದಾರೆ. ನಟನ ಜನ್ಮದಿನಕ್ಕೆ ಶುಭ ಹಾರೈಸಿದ ಮತ್ತೋರ್ವ ಕಟ್ಟಾ ಅಭಿಮಾನಿ, 'ಸೂಕ್ತ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡುವುದು ಕೂಡ ಜೀವನದಲ್ಲಿ ಒಂದು ದೊಡ್ಡ ಸಾಧನೆ. ನಮ್ರತಾ ಶಿರೋಡ್ಕರ್, ನೀವು ಅರ್ಹರು ಮತ್ತು ಸಾಧಿಸಿ ತೋರಿಸಿದ್ದೀರಿ' ಎಂದು ಗುಣಗಾನ ಮಾಡಿದ್ದಾರೆ.​ ರಾಜಕುಮಾರ ಮಹೇಶ್​ ಬಾಬು ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ:DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್! ಸಿಂಗ್​ ಜೊತೆ ಕಿಯಾರಾ ಅಭಿನಯ

ಮಹೇಶ್​ ಬಾಬು ಮತ್ತು ನಮ್ರತಾ ಶಿರೋಡ್ಕರ್​​ ತೆಲುಗು ಚಿತ್ರರಂಗದ ಮಾದರಿ ದಂಪತಿ. ಅಭಿಮಾನಿಗಳು ಮಾತ್ರವಲ್ಲ ಇತರ ಸೆಲೆಬ್ರಿಟಿಗಳು ಕೂಡ ಈ ಜನಪ್ರಿಯ ಜೋಡಿ ಮೇಲೆ ಪ್ರೀತಿಯ ಧಾರೆ ಎರೆಯುತ್ತಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಇತರರಿಗೆ ಮಾದರಿ ಎಂಬಂತೆ ಜೀವನ ನಡೆಸುತ್ತಿದ್ದಾರೆ. ಮಹೇಶ್​ ಬಾಬು ಸದ್ಯ ಮತ್ನಿ ನಮ್ರತಾ ಮತ್ತು ಮಕ್ಕಳಾದ ಗೌತಮ್​, ಸಿತಾರಾ ಜೊತೆ ಸ್ಕಾಟ್ಲೆಂಡ್​ ಪ್ರವಾಸದಲ್ಲಿದ್ದಾರೆ. ಇಂದು ಅಲ್ಲೇ ತಮ್ಮ ಬರ್ತ್ ಡೇ ಸೆಲೆಬ್ರೇಟ್​ ಮಾಡಿಕೊಳ್ಳಲಿದ್ದಾರೆ. ಆಗಸ್ಟ್ 16ರಂದು ದೇಶಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:ರಜಿನಿಕಾಂತ್​ ಜೈಲರ್​​​ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!

ABOUT THE AUTHOR

...view details