ಹೌಸ್ಫುಲ್ ಹಾಗೂ ನಿಂಬೆ ಹುಳಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಂಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಮತ್ತು ನಿರ್ದೇಶಕ ಹೇಮಂತ್ ಹೆಗ್ಡೆ. ಬಹಳ ವರ್ಷಗಳ ಬಳಿಕ ನಮ್ ನಾಣಿ ಮದ್ವೆ ಪ್ರಸಂಗ ಎಂಬ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
'ನಮ್ ನಾಣಿ ಮದ್ವೆ ಪ್ರಸಂಗ' ತಂಡ ಹೌದು, ಹೇಮಂತ್ ಹೆಗ್ಡೆ ನಿರ್ದೇಶನ ಮಾಡಿ ಅಭಿನಯಿಸಿರುವ ಚಿತ್ರವೇ 'ನಮ್ ನಾಣಿ ಮದ್ವೆ ಪ್ರಸಂಗ'. ಶೀರ್ಷಿಕೆಯಿಂದ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಮ್ ನಾಣಿ ಮದ್ವೆ ಪ್ರಸಂಗ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆ ನಟ ಕಮ್ ನಿರ್ದೇಶಕ ಹೇಮಂತ್ ಹೆಗ್ಡೆ ಅವರು ನಮ್ ನಾಣಿ ಮದ್ವೆ ಪ್ರಸಂಗ ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ಅನ್ನು ಇತ್ತೀಚೆಗೆ ನಡೆಸಿಕೊಟ್ಟರು. ಸಂಗೀತ ನಿರ್ದೇಶಕ ವಿ. ಮನೋಹರ್ ಹವ್ಯಕ ಭಾಷೆಯ ಈ ಹಾಡನ್ನು ಬಿಡುಗಡೆ ಮಾಡಿದರು. ಹೇಮಂತ್ ಹೆಗ್ಡೆ ಅವರೆ ಬರೆದಿರುವ ಈ ಹಾಡಿಗೆ ರವಿ ಮುರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
'ನಮ್ ನಾಣಿ ಮದ್ವೆ ಪ್ರಸಂಗ' ತಂಡ ಈ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಹೇಮಂತ್ ಹೆಗ್ಡೆ, 'ನಮ್ ನಾಣಿ ಮದ್ವೆ ಪ್ರಸಂಗ' ಅಪ್ಪಟ ಮನೋರಂಜನಾ ಚಿತ್ರ. ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆ ಈ ಚಿತ್ರದ ಕಥೆಯ ಒಂದು ಭಾಗ. ಆದರೆ, ಈ ಚಿತ್ರವನ್ನು ನೋಡಿದ ಪ್ರೇಕ್ಷಕ ನಗೆಗಡಲಲ್ಲಿ ತೇಲುವುದು ಖಚಿತ. ಅಷ್ಟು ಹಾಸ್ಯ ನಮ್ಮ ಈ ಚಿತ್ರದಲ್ಲಿದೆ. ಶಿರಸಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ಆಗಿದೆ. ಅಲ್ಲಿನ ಪ್ರಾಂತೀಯ ಭಾಷೆಯಲ್ಲೇ ಹೆಚ್ಚು ಸಂಭಾಷಣೆ ಇರುತ್ತದೆ.
ನಾನು ಈವರೆಗೆ ಕಮರ್ಷಿಯಲ್ ಚಿತ್ರಗಳನ್ನೇ ಮಾಡಿದ್ದೆ. ಆದರೆ, ಒಂದು ಪ್ರಾಂತ್ಯವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿರುವ ಮೊದಲ ಚಿತ್ರ ಇದು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ವಿ.ಮನೋಹರ್ ಹಾಗೂ ರವಿ ಮುರೂರ್ ಸಂಗೀತ ನೀಡಿದ್ದಾರೆ. ಸಂದೀಪ್ ನಾಗರಾಜ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕೃಷ್ಣ ಭಂಜನ್ ಈ ಚಿತ್ರದ ಛಾಯಾಗ್ರಾಹಕರು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ಇನ್ನು ಹೇಮಂತ್ ಹೆಗ್ಡೆ ಜೋಡಿಯಾಗಿ ಶೃತಿ ನಂದೀಶ್, ಶ್ರೇಯಾ ವಸಂತ್ ನಟಿಸಿದ್ದಾರೆ. ಇದರ ಜೊತೆಗೆ ರಾಜೇಶ್ ನಟರಂಗ, ಪದ್ಮಜಾ ರಾವ್, ಸುನೇತ್ರ ಪಂಡಿತ್, ಮಧು ಹೆಗ್ಡೆ, ರೇವಣ್ಣ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಇಂದೋರ್ ಮನೆಗೆ ವಿರಾಟ್ ಪತ್ನಿ ಭೇಟಿ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅನುಷ್ಕಾ ಶರ್ಮಾ
ಈ ಚಿತ್ರಕ್ಕೆ ಸಂಗೀತ ನೀಡಿರುವ ವಿ.ಮನೋಹರ್ ಮಾತನಾಡಿ, ನಾನು ಚಿತ್ರ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಇಂದು ಬಿಡುಗಡೆ ಆಗಿರುವ ಹಾಡಿಗೆ ರವಿ ಮುರೂರ್ ಸಂಗೀತ ನೀಡಿದ್ದಾರೆ. ನಾನು ಸಂಗೀತ ನೀಡಿರುವ ಹಾಡು ಸದ್ಯದಲ್ಲೇ ಬಿಡುಗಡೆ ಶಗಲಿದೆ ಎಂದರು. ಈ ಕಾಮಿಡಿ ಸಿನಿಮಾಗೆ ಸಂದೀಪ್ ನಾಗರಾಜ್ ಎಂಬ ಯುವ ನಿರ್ಮಾಪಕ ಬಂಡವಾಳ ಹೂಡಿದ್ದಾರೆ. ಏಪ್ರಿಲ್ 7ರಂದು ನಮ್ ನಾಣಿ ಮದ್ವೆ ಪ್ರಸಂಗ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ:ಗನ್ ಹಿಡಿದು ಬಂದ ತುಪ್ಪದ ಬೆಡಗಿ: 'ಬಿಂಗೊ' ರಾಗಿಣಿ ದ್ವಿವೇದಿ ಲುಕ್ ಅನಾವರಣ