ಕರ್ನಾಟಕ

karnataka

ETV Bharat / entertainment

"ಬನ್- ಟೀ" ಟ್ರೈಲರ್​ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್​; ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಮೆಚ್ಚುಗೆ

ಯುವ ಪ್ರತಿಭೆಗಳಿಂದ ಕೂಡಿರುವ ಬನ್​ ಟೀ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

"ಬನ್- ಟೀ" ಟ್ರೈಲರ್​ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್​; ಹೊಸ ಪ್ರತಿಭೆಯಗಳ ಪ್ರಯತ್ನಕ್ಕೆ ಮೆಚ್ಚುಗೆ
"ಬನ್- ಟೀ" ಟ್ರೈಲರ್​ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್​; ಹೊಸ ಪ್ರತಿಭೆಯಗಳ ಪ್ರಯತ್ನಕ್ಕೆ ಮೆಚ್ಚುಗೆ

By

Published : Mar 28, 2023, 3:14 PM IST

ಹೊಸ ಯುವ ಉತ್ಸಾಹಿ ತಂಡವೊಂದು ಸೇರಿ ನಿರ್ಮಾಣ ಮಾಡಿರುವ ಬನ್​- ಟೀ ಚಿತ್ರದ ಟ್ರೈಲರ್​ ಅನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಬಿಡುಗಡೆ ಮಾಡಿದರು. ನೈಜ ಘಟನೆ ಆಧಾರದ ಮೇಲೆ ಈ ಚಿತ್ರ ನಿರ್ಮಾಣ ಮಾಡಲಾಗಿದ್ದು, ಕೆಳ ಮಧ್ಯಮ ವರ್ಗದ ಬದುಕಿನ ಬವಣೆಗಳನ್ನು ತೋರಿಸುವ ಸಾಮಾಜಿಕ ಸಂದೇಶ ಹೊತ್ತಿರುವ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಈ ಹಿಂದೆ ಕಾರ್ಮೋಡ ಸರಿದು ಚಿತ್ರ ನಿರ್ದೇಶನ ಮಾಡಿದ್ದ ಉದಯ್​ ಕುಮಾರ್​ ಪಿಎಸ್​ ನಿರ್ದೇಶಿಸುತ್ತಿದ್ದಾರೆ. ಆನ್​ಲೈನ್​ ಎಡಿಟರ್​​ ಆಗಿ ಗುರುತಿಸಿಕೊಂಡಿರುವ ಉದಯ್​ ಅವರ ಎರಡನೇ ಸಿನಿಮಾ ಇದಾಗಿದೆ. ವಿಭಿನ್ನ ಶೀರ್ಷಿಕೆ ಮೂಲಕ ಈ ಚಿತ್ರ ಸಿನಿ ರಸಿಕರನ್ನು ಸೆಳೆಯುತ್ತಿದೆ.

ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಉದಯ್ ಹೇಳಿದ ಕಥೆ ಇಷ್ಟವಾಯಿತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ. ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಕ್ತಾರೆ ಅಂತಾ ಫ್ಯಾಷನ್​ಗೋಸ್ಕರ್ ಸಿನಿಮಾ ಮಾಡಿಲ್ಲ. ಆಳವಾಗಿ ತಾಂತ್ರಿಕವಾಗಿ ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳು ಸೇರಿ ಬನ್ ಟೀ ಚಿತ್ರ ಮಾಡಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ನಿರ್ದೇಶಕ ಉದಯ್ ಮಾತನಾಡಿ, ಬನ್ ಟೀ ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ. ಆನ್​ಲೈನ್ ಎಡಿಟರ್ ಆಗಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದು, ಬನ್ ಟೀ ಏಳು ವರ್ಷದ ಕನಸು. ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ಬನ್ ಟೀ ನಮ್ಮ ಊಟ.. ಟೈಟಲ್ ಡಿಫರೆಂಟಾಗಿದೆ. ಶೀರ್ಷಿಕೆ ವಿಭಿನ್ನವಾಗಿ ಇದ್ದರೇ ಕುತೂಹಲ ಮೂಡುತ್ತದೆ. ಟೈಟಲ್ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನೋದನ್ನು ಯಾಕೆ ಹೇಳುವುದಿಲ್ಲ ಅನ್ನೋದೇ ಚಿತ್ರದ ಒಟ್ಟಾರೆ ಸಾರಾಂಶ ಎಂದು ತಿಳಿಸಿದರು.

ನೈಜ ಘಟನೆ ಪ್ರೇರಣೆ: ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೂಪಿಸಿರುವ ಬನ್ ಟೀ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಕಲನ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ಸೇರಿದಂತೆ ಹಲವು ಕಲಾವಿದರಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಬ್ಯಾನರ್ ಆರ್ ಕೇಶವ ನಿರ್ಮಾಣ ಮಾಡಿದ್ದು, ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಬನ್ ಟೀ ಸಿನಿಮಾ ಏಪ್ರಿಲ್ ತಿಂಗಳಾಂತ್ಯಕ್ಕೆ ಬೆಳ್ಳಿ ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರ ತಂಡ ಇದೆ.

ಇದನ್ನೂ ಓದಿ: ಶಿವಣ್ಣನ 'ಘೋಸ್ಟ್'​ ಅಡ್ಡಕ್ಕೆ ಬಾಲಿವುಡ್​ ನಟ ಅನುಪಮ್​ ಖೇರ್​ ಎಂಟ್ರಿ

ABOUT THE AUTHOR

...view details