ಕರ್ನಾಟಕ

karnataka

ETV Bharat / entertainment

Project K: ಲಕೋಟೆಯಲ್ಲಿದೆ 'ಪ್ರಾಜೆಕ್ಟ್​ ಕೆ' ಹೆಸರು: ಶೀರ್ಷಿಕೆ ಇದಾಗಿರಬಹುದೆಂದು ಊಹಿಸಿದ ಸಿನಿಪ್ರೇಮಿಗಳು - ಈಟಿವಿ ಭಾರತ ಕನ್ನಡ

'ಪ್ರಾಜೆಕ್ಟ್​ ಕೆ' ಹೆಸರಿನ ಪೂರ್ಣ ಅರ್ಥ ತಿಳಿದುಕೊಳ್ಳಲು ಸಿನಿಪ್ರೇಮಿಗಳು ಉತ್ಸುಕರಾಗಿದ್ದಾರೆ. ನಾಗ್​ ಅಶ್ವಿನ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡುವ ಮೂಲಕ ಹೆಸರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

Project K
ಪ್ರಾಜೆಕ್ಟ್​ ಕೆ

By

Published : Jul 15, 2023, 5:42 PM IST

ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾದ 'ಆದಿಪುರುಷ್​' ಸಿನಿಮಾದ ನಂತರ ಅಭಿಮಾನಿಗಳ ಗಮನ ಪ್ರಭಾಸ್​ ಅವರ ಮುಂಬರುವ ಪ್ರಾಜೆಕ್ಟ್​ಗಳತ್ತ ನೆಟ್ಟಿದೆ. ಪ್ರಭಾಸ್ ನಟನೆಯ ಅನೇಕ ಸಿನಿಮಾಗಳು ಬಿಗ್​ ಬಜೆಟ್​ನಲ್ಲೇ ತಯಾರಾದವುಗಳಾಗಿವೆ. ಆದರೆ 'ಆದಿಪುರುಷ್​' ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಲಿಲ್ಲ. ಇದೀಗ ಅವರ ಮುಂಬರುವ 'ಪ್ರಾಜೆಕ್ಟ್​ ಕೆ' ಸಿನಿಮಾದ ಮೇಲೆ ಸಿನಿಪ್ರೇಮಿಗಳ ದೃಷ್ಟಿ ಕೇಂದ್ರಿಕೃತವಾಗಿದೆ. ಟಾಲಿವುಡ್​ ಸ್ಟಾರ್​ ನಿರ್ದೇಶಕ ನಾಗ್​ ಅಶ್ವಿನ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಈ ಸಿನಿಮಾ ಭಾರತದಲ್ಲಿ ಈವರೆಗೆ ನಿರ್ಮಾಣವಾದ ಪ್ರಾಜೆಕ್ಟ್​ಗಳ ಪೈಕಿ ಅತ್ಯಂತ ದುಬಾರಿ ಯೋಜನೆ ಎಂದು ಹೇಳಲಾಗುತ್ತಿದೆ. ಇದಲ್ಲದೇ 'ಪ್ರಾಜೆಕ್ಟ್​ ಕೆ' ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. ಜುಲೈ 19 ರಂದು ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್​- ಕಾನ್​ ಈವೆಂಟ್​ನಲ್ಲಿ (San Diego Comic-Con event) ಸಿನಿಮಾದ ಫಸ್ಟ್​ ಗ್ಲಿಂಪ್ಸ್​ ಅನಾವರಣಗೊಳ್ಳಲಿದೆ. ತಂಡವು ಇದು ಪ್ರಾಜೆಕ್ಟ್ ಕೆ: ಭಾರತದ ಮೈಥೋ-ಸೈನ್ಸ್-ಫಿಕ್ಷನ್ ಎಪಿಕ್‌ನ ಮೊದಲ ನೋಟ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಲಿದೆ.

ಚಿತ್ರದ ಪೂರ್ಣ ಶೀರ್ಷಿಕೆ, ಟೀಸರ್​ ಮತ್ತು ಬಿಡುಗಡೆ ದಿನಾಂಕವನ್ನು ಈ ಗ್ರ್ಯಾಂಡ್​ ಈವೆಂಟ್​ನಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ. ಆದರೆ 'ಪ್ರಾಜೆಕ್ಟ್​ ಕೆ' ಹೆಸರಿನ ಪೂರ್ಣ ಅರ್ಥ ತಿಳಿದುಕೊಳ್ಳಲು ಮತ್ತು ಚಿತ್ರದ ವಿಚಾರಗಳನ್ನು ಮತ್ತಷ್ಟು ಅರಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಿರ್ದೇಶಕ ನಾಗ್​ ಅಶ್ವಿನ್​ ಅವರು ತಮ್ಮ ಇನ್​ಸ್ಟಾದಲ್ಲಿ ಯೋಜನೆಯ ಬಗ್ಗೆ ನವೀಕರಣವನ್ನು ಹಂಚಿಕೊಂಡಿದ್ದಾರೆ. ಮುಚ್ಚಿದ ಲಕೋಟೆಯ ಫೋಟೋವನ್ನು ಶೇರ್​ ಮಾಡಿ, "ಈ ಕವರ್ ಒಂದು ಕಾಗದದ ಹಾಳೆಯನ್ನು ಒಳಗೊಂಡಿರುತ್ತದೆ ಮತ್ತು ಅದರ ಮೇಲೆ ಒಂದೇ ಪದವನ್ನು ಮುದ್ರಿಸಲಾಗಿದೆ. ಆದರೆ ಅದು ಹೊತ್ತಿರುವ ತೂಕ, ಕೆಲವೊಮ್ಮೆ ಇಡೀ ಜಗತ್ತೇ ಅನಿಸುತ್ತದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

ಪೋಸ್ಟ್​ ಅಪ್ಲೋಡ್​ ಆಗುತ್ತಿದ್ದಂತೆ ಚಿತ್ರದ ಶೀರ್ಷಿಕೆಯನ್ನು ಊಹಿಸಲು ಅಭಿಮಾನಿಗಳು ಪ್ರಯತ್ನಪಟ್ಟರು. ಅಭಿಮಾನಿಯೊಬ್ಬರು, 'ಪ್ರಾಜೆಕ್ಟ್​ ಕೆ ಎಂದರೆ ಕಾಲಚಕ್ರ' ಎಂದಿದ್ದಾರೆ. ಮತ್ತೊಬ್ಬರು, 'ಕರ್ಣ/ಕಲ್ಕಿ/ಕಾಲಚಕ್ರ' ಎಂಬ ಬಹು ಆಯ್ಕೆಯ ಉತ್ತರ ನೀಡಿದರು. ಕೆಲವರು ಕಮೆಂಟ್​ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ನಿರ್ದೇಶಕ ನಾಗ್​ ಅಶ್ವಿನ್​ ಅವರಿಗೆ ಆಲ್​ ದಿ ಬೆಸ್ಟ್​ ತಿಳಿಸಿದರು. "ಆಲ್ ದಿ ಬೆಸ್ಟ್, ನೀವು ಅದ್ಭುತ ತಂಡವನ್ನು ಹೊಂದಿದ್ದೀರಿ ಮತ್ತು ನೀವೆಲ್ಲರೂ ನಿಮ್ಮ ಹೃದಯ ಮತ್ತು ಆತ್ಮವನ್ನು ಇದರಲ್ಲಿ ಇರಿಸಿದ್ದೀರಿ ಎಂಬುದು ನಮಗೆ ತಿಳಿದಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಸೂಪರ್​ ಸ್ಟಾರ್ ಕಮಲ್ ಹಾಸನ್ ಅವರು ಚಿತ್ರದ ಭಾಗವಾಗಲಿದ್ದಾರೆ ಎಂದು ಚಿತ್ರ ತಯಾರಕರು ಘೋಷಿಸಿದಾಗಿನಿಂದ ಪ್ರಾಜೆಕ್ಟ್ ಕೆ ಸುತ್ತಲಿನ ಕುತೂಹಲ ದುಪ್ಪಟ್ಟಾಯಿತು. ಹಿರಿಯ, ಪ್ರತಿಭಾನ್ವಿತ, ಬಹುಬೇಡಿಕೆ ನಟರಾದ ಅಮಿತಾಭ್​ ಬಚ್ಚನ್ ಮತ್ತು ಕಮಲ್ ಹಾಸನ್ ಅವರು ಲಾಂಗ್​ ಬ್ರೇಕ್​ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂಬುದನ್ನರಿತ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಚಿತ್ರದಲ್ಲಿ ಇವರಲ್ಲದೇ, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ:Project K: ಪ್ರಭಾಸ್​, ದೀಪಿಕಾ, ಬಿಗ್​ ಬಿ ಜೊತೆ ನಟಿಸಲಿರುವ ಕಮಲ್ ಹಾಸನ್

ABOUT THE AUTHOR

...view details