ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೇ ತುಂಬಾ ಟ್ಯಾಲೆಂಟೆಂಡ್ ನಿರ್ದೇಶಕ ಕಮ್ ನಟ ಎಂದು ಫ್ರೂವ್ ಮಾಡಿದ್ದಾರೆ. ತರ್ಲೆನನ್ಮಗ, ಶ್, ಓಂ,ಅಂತ, ಸ್ವಸ್ತಿಕ್, ಎ, ಉಪೇಂದ್ರ, ಸೂಪರ್, ಉಪ್ಪಿ 2 ಹೀಗೆ ವಿವಿಧ ಸಿನಿಮಾಗಳಲ್ಲಿ ಅಭಿನಯಿಸಿ, ನಿರ್ದೇಶನವನ್ನು ಉಪ್ಪೇಂದ್ರ ಮಾಡಿದ್ದಾರೆ. ಇದೀಗ ಮತ್ತೆ ಏಳು ವರ್ಷಗಳ ಬಳಿಕ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಕುದುರೆ ಮುಖ ಆಕಾರದ ಫೋಸ್ಟರ್ನಲ್ಲಿ ಯು ಐ ಅಂತಾ ಟೈಟಲ್ ಇಟ್ಟಿರೋ ಚಿತ್ರದ ಮುಹೂರ್ತ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು.
ಉಪ್ಪಿಯ ವಿಚಿತ್ರ ಟೈಟಲ್ ಯು ಐ ಸಿನಿಮಾದ ಮುಹೂರ್ತಕ್ಕೆ ಶಿವರಾಜ್ ಕುಮಾರ್, ಸುದೀಪ್, ಧನಂಜಯ್ ಆಗಮಿಸಿ ಆಲ್ ದಿ ಬೆಸ್ಟ್ ಹೇಳಿದರು. ಬಳಿಕ ಮಾತನಾಡಿದ ಉಪೇಂದ್ರ, ನಾನು ಟೈಟಲ್ ಬಗ್ಗೆನೇ ಹೇಳಿಲ್ಲ. ಇನ್ನೂ ನಾನು ಸಿನಿಮಾ ಬಗ್ಗೆ ಹೇಳುತ್ತಿನಾ ಎಂದು ಮಾಧ್ಯಮವರಿಗೆ ಪ್ರಶ್ನೆ ಮಾಡಿದರು. ಈ ಸಿನಿಮಾದ ಟೈಟಲ್ ಏನು ಅಂತಾ ನೀವೆ ಹೇಳಿ ಎಂದು ಮಾಧ್ಯಮದವರನ್ನು ಕೇಳಿದರು.
ಕುದುರೆ ಮುಖ ಆಕಾರದ ಫೋಸ್ಟರ್ನಲ್ಲಿ ಯು ಐ ಅಂತಾ ಟೈಟಲ್ ಇಟ್ಟಿರೋ ಚಿತ್ರದ ಮುಹೂರ್ತ ಕುದುರೆ ಅನ್ನೋದು ರೇಸ್ನಲ್ಲಿರುವ ಪ್ರಾಣಿ. ಇನ್ನು ಕುದುರೆ ಅಂದ್ರೆ ಅಶ್ವಮೇಧ ಯಾಗ ಅಂತಾ ಕರೆಯುತ್ತಾರೆ. ಜನರಿಗೆ ಸತ್ಯ ಯಾವುದು ಎನ್ನುವುದಕ್ಕಿಂತ ಮುಂಚೆ ಕನ್ ಫ್ಯೂಜ್ ಆಗ್ತಾರೆ, ಅದೇ ರೀತಿ ನನ್ನ ಜೊತೆಯಲ್ಲಿರುವವರು, ಬೇರೆಯವರು ನನ್ನನ್ನ ಹೊಗಳುತ್ತಾರೆ. ಅದರೆ ಅದು ಅಲ್ಲಾ. ರಜನಿ ಸಾರ್ ಒಂದು ಮಾತು ಹೇಳುತ್ತಾರೆ. ಹೊಗಳಿಕೆ ನಮಗೆಲ್ಲ, ಅದನ್ನ ತಲೆಗೆ ಅಂಟಿಸಿಕೊಳ್ಳಬಾರದು. ಅದಕ್ಕೆ ನನ್ನ ತಲೆ ಯಾವಾಗಲೂ ಖಾಲಿ ಇರುತ್ತೆ ಎಂದು ಹೇಳಿದರು.
ಇದನ್ನೂ ಓದಿ:ನಿರ್ದೇಶಕ ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ!
ಈ ಕಥೆಯನ್ನ ನಾನು ತುಂಬಾ ಜನಕ್ಕೆ ಹೇಳಿದ್ದೀನಿ. ಇನ್ನು ಒಂದು ವರ್ಷದಲ್ಲಿ ಈ ಕಥೆ ನನ್ನದು ಅಂತಾ ಯಾರು ಬರ್ತೋರೋ ಗೊತ್ತಿಲ್ಲ. ನನಗೆ ಒಂದು ಆಸೆ ಇದೆ ಒಂದು ಸಿನಿಮಾದ ಕಥೆಯನ್ನ, ಲೈವ್ ಆಗಿ ಜನರಿಗೆ ಹೇಳಿ, ಅದೇ ಕಥೆಯನ್ನ ಸಿನಿಮಾ ಮಾಡಬೇಕು ಅನ್ನೋದು. ಅದಕ್ಕೆ ನಾನು ಅಸಿಸ್ಟೆಂಟ್ ಡೈರೆಕ್ಟರ್ನಿಂದ ಹಿಡಿದು, ಲೈಟ್ ಬಾಯ್ ವರೆಗೂ ಕಥೆ ಹೇಳಿರುತ್ತೀನಿ. ಅವ್ರಿಗೆ ಗೊತ್ತಿಲ್ಲ ಅರ್ಧ ಗಂಟೆಯೊಳಗೆ ಆ ಕಥೆ ಚೇಂಜ್ ಆಗಿರುತ್ತೆ ಅಂತಾ. ಆಗ ಸಿನಿಮಾ ಮಾಡುವಾಗ ಒಂದು ಜ್ಯೋಷ್ ಇರುತ್ತೆ ಎಂದರು.