ಕರ್ನಾಟಕ

karnataka

ETV Bharat / entertainment

ಮಹೇಶ್​ ಚಿತ್ರಕ್ಕೆ ಸಂಕಷ್ಟ: 'ಗುಂಟೂರು ಖಾರಂ' ಸಿನಿಮಾದಿಂದ ಸಂಗೀತ ಸಂಯೋಜಕ ತಮನ್ ಔಟ್​ - etv bharat kannada

Guntur Kaaram: ಸಂಗೀತ ಸಂಯೋಜಕ ತಮನ್ ಕೂಡ 'ಗುಂಟೂರು ಖಾರಂ' ಚಿತ್ರದಿಂದ ಹೊರನಡೆದಿದ್ದಾರೆ.

Guntur Kaaram
ಗುಂಟೂರು ಖಾರಂ

By

Published : Jul 23, 2023, 5:01 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ 'ಗುಂಟೂರು ಖಾರಂ'. ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಇದೀಗ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನಿಂದ ಸಂಗೀತ ಸಂಯೋಜಕ ತಮನ್ ಕೂಡ ಹೊರಗುಳಿದಿದ್ದಾರೆ. ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು. ಇದಕ್ಕೂ ಮೊದಲು ಶೂಟಿಂಗ್​​ ಡೇಟ್ಸ್ ಕೊರತೆ ಹಿನ್ನೆಲೆ ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರನಡೆದಿದ್ದರು. ಇತ್ತೀಚೆಗಷ್ಟೇ ಪಿ. ಎಸ್. ವಿನೋದ್ ಸಿನಿಮಾಟೋಗ್ರಫಿ ಬಿಟ್ಟು ಅವರ ಜಾಗಕ್ಕೆ ರವಿ ಕೆ ಚಂದ್ರನ್ ಆಗಮನವಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಇದಕ್ಕೂ ಮುನ್ನ, ಸಂಗೀತ ಸಂಯೋಜಕ ತಮನ್ ಕೂಡ ಚಿತ್ರತಂಡದಿಂದ ಹೊರಗುಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ವದಂತಿ ನಿಜವಾಗಿದೆ.

ತಮನ್​ ನೀಡಿದ ಯಾವ ಟ್ಯೂನ್​ ಕೂಡ ಮಹೇಶ್​ ಬಾಬುಗೆ ಇಷ್ಟವಾಗಿಲ್ಲ. ಆದರೆ ನಿರ್ದೇಶಕ ತ್ರಿವಿಕ್ರಮ್ ಅವರ ಸಲಹೆಯಂತೆ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದೀಗ ಚಿತ್ರದ ಬಿಡುಗಡೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ತಮನ್​ ಅವರನ್ನು ಪಕ್ಕಕ್ಕೆ ಇಡಲು ಚಿತ್ರತಂಡ ನಿರ್ಧರಿಸಿದೆ. ಅವರ ಸ್ಥಾನಕ್ಕೆ ಇಬ್ಬರು ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಅದಕ್ಕಾಗಿ ಮಾತುಕತೆ ನಡೆಯುತ್ತಿದೆ.

ಇದನ್ನೂ ಓದಿ:'Guntur Kaaram' ಶೂಟಿಂಗ್​ ಪೂರ್ಣಗೊಳಿಸಿದ ಮೀನಾಕ್ಷಿ ಚೌಧರಿ.. ಮಹೇಶ್​ ಬಾಬು ಬಗ್ಗೆ ನಟಿ ಹೇಳಿದ್ದೇನು?

ನಾಲ್ಕು ಹಾಡುಗಳಿಗೆ ಹೇಶಮ್​ ಅಬ್ದುಲ್​ ವಹಾಬ್​ ಮತ್ತು ಎರಡು ಮಾಸ್​ ಹಾಡುಗಳಿಗೆ ಭೀಮ್ಸ್​ ಸಿಸಿಲಿಯೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇವರೇ ಸರಿಯಾದ ಆಯ್ಕೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವಿಚಾರವನ್ನು ಮಹೇಶ್​ ಬಾಬು ಮುಂದೆ ಇಡಲಾಗಿದೆ ಎನ್ನಲಾಗಿದೆ. ಈ ಪ್ರಸ್ತಾವನೆಗೆ ನಟ ಓಕೆ ಹೇಳುತ್ತಾರಾ? ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ಇದು ನಿಜವಾಗಿದ್ದರೆ ಹೇಶಮ್ ಮತ್ತು ಭೀಮ್ಸ್ ಈ ಚಿತ್ರಕ್ಕೆ ಉತ್ತಮ ಆಯ್ಕೆಯಾಗುತ್ತಾರೆ. ಇಬ್ಬರೂ ಕೂಡ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ. ಈ ಜವಾಬ್ದಾರಿಯನ್ನು ಅವರಿಗೆ ವಹಿಸಿದರೆ ಚಿತ್ರ ಉತ್ತಮ ರೀತಿಯಲ್ಲಿ ಹಿಟ್​ ಆಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಇನ್ನು ಮಹೇಶ್​ ಬಾಬು ಅವರ 28ನೇ ಚಿತ್ರವಾಗಿರುವ ಗುಂಟೂರು ಖಾರಂ ಜನವರಿ 13, 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಆದರೆ ಚಿತ್ರತಂಡದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ಸಿನಿಮಾ ವಿಳಂಬವಾಗುವ ಸಾಧ್ಯತೆಯೂ ಇದೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಗುಂಟೂರು ಖಾರಂ ವೇಳಾಪಟ್ಟಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಮಹೇಶ್​ ಬಾಬು ಪರ್ಫೆಕ್ಟ್​: ಅವರ ಬ್ರೇಕ್​ಫಾಸ್ಟ್​ನಲ್ಲಿ ಏನಿರುತ್ತೆ ಗೊತ್ತಾ?

ABOUT THE AUTHOR

...view details