ಕರ್ನಾಟಕ

karnataka

ETV Bharat / entertainment

72ರ ಸಂಭ್ರಮದಲ್ಲಿ ನಾದಬ್ರಹ್ಮ ಹಂಸಲೇಖ: ಇವರ ಸಂಗೀತ ಸಾಧನೆಗೆ ಸರಿಸಾಟಿ ಯಾರು?

ಇಂದು ನಾದಬ್ರಹ್ಮ ಹಂಸಲೇಖ ಅವರ 72ನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಸಂಗೀತ ಮಾಂತ್ರಿಕನ ಸಾಧನೆಯ ಕಿರು ಪರಿಚಯ ನಿಮಗಾಗಿ..

hamsaleka
ಹಂಸಲೇಖ

By

Published : Jun 23, 2023, 1:55 PM IST

Updated : Jun 23, 2023, 7:11 PM IST

ಸಂಗೀತ ಲೋಕದ ದೇವರು, ನಾದಬ್ರಹ್ಮ ಹಂಸಲೇಖ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1951ರ ಜೂನ್​ 23ರಂದು ಜನಿಸಿದ ಇವರು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಂಸಲೇಖ ಎಂದಾಕ್ಷಣ ನಮ್ಮ ಮುಂದೆ ಸುಂದರ ಸಂಗೀತ ಲೋಕವೇ ಅನಾವರಣಗೊಳ್ಳುತ್ತದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕದಲ್ಲಿ ಹಂಸಲೇಖ ಒಬ್ಬರು. ಇವರ ಸಂಗೀತಕ್ಕೆ ತಲೆದೂಗದವರಿಲ್ಲ.

ಸಂಗೀತ ಮಾಂತ್ರಿಕ ಜನನ: ಸಂಗೀತ ಲೋಕದ ಮಹಾಗುರು ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ವಿದ್ಯಾಭ್ಯಾಸ ಮುಗಿಸಿದ ಬಳಿಕ ಆರಂಭದಲ್ಲಿ ತನ್ನ ತಂದೆಯ ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಬಳಿಕ ತನ್ನ ಅಣ್ಣನ ಆರ್ಕೆಸ್ಟ್ರಾ ತಂಡವನ್ನು ಸೇರಿದರು. ಆರ್ಕೆಸ್ಟ್ರಾ ತಂಡ ಸೇರಿಕೊಂಡ ಬಳಿಕ ಹಂಸಲೇಖ ಅವರು ಕವನಗಳನ್ನು ಬರೆಯುವುದು, ಅದಕ್ಕೆ ರಾಗ ಸಂಯೋಜಿಸುವುದನ್ನು ಅಭ್ಯಾಸ ಮಾಡಿಕೊಂಡರು. ಇದು ಅವರ ಸಂಗೀತ ಪಯಣಕ್ಕೆ ಅಡಿಗಲ್ಲು ಹಾಕಿಕೊಟ್ಟಿತು.

ಪತ್ನಿಯೊಂದಿಗೆ ನಾದಬ್ರಹ್ಮ ಹಂಸಲೇಖ

ತಮ್ಮ ಗುರುಗಳಾದ ಲಾವಣಿ ನೀಲಕಂಠಪ್ಪ ನೀಡಿದ 'ಸ್ವಾನ್' (ಹಂಸ) ಕಂಪನಿಯ ಲೇಖನಿಯಿಂದ ಕವಿತೆಗಳನ್ನು ಬರೆಯುತ್ತಿದ್ದರಿಂದ ಸ್ವತಃ 'ಹಂಸಲೇಖನಿ' ಎಂದು ಹೆಸರು ಬದಲಿಸಿಕೊಂಡರು. ಕೆಲವು ದಿನಗಳ ನಂತರ ಅವರ ಗುರುಗಳು ಆ ಹೆಸರನ್ನು 'ಹಂಸಲೇಖ' ಎಂದು ಬದಲಿಸಿದರು. ಅಂದಿನಿಂದ ಇಂದಿನಿವರೆಗೂ ಗೋವಿಂದರಾಜು ಹಂಸಲೇಖ ಆಗಿಯೇ ಸಂಗೀತ ಪ್ರೇಮಿಗಳ ಮನಸಲ್ಲಿ ನೆಲೆಸಿದ್ದಾರೆ.

ನಾದಬ್ರಹ್ಮ ಸಂಗೀತ ಪಯಣ: ಹಂಸಲೇಖ ಅವರು ಕೇವಲ ಸಂಗೀತ ನಿರ್ದೇಶಕರು ಮಾತ್ರವಲ್ಲ, ಅವರೊಬ್ಬ ಅದ್ಭುತ ಪದಪುಂಜಗಳನ್ನು ಪೋಣಿಸುವ ಸಾಹಿತಿ ಕೂಡ ಆಗಿದ್ದಾರೆ. ಹಲವು ಚಿತ್ರಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. 1973 ರಲ್ಲಿ ನಿರ್ದೇಶಕ ಎಂ.ಎನ್​ ಪ್ರಸಾದ್ ಅವರು ಹಂಸಲೇಖ ಅವರಿಗೆ ಮೊಟ್ಟ ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡು ರಚಿಸುವ ಅವಕಾಶ ಕೊಟ್ಟರು. ತ್ರಿವೇಣಿ ಸಂಗಮ ಚಿತ್ರದ ನೀನಾ ಭಗವಂತ ಹಾಡು ಹಂಸಲೇಖ ಅವರು ಮೊದಲು ಸಂಗೀತ ಸಂಯೋಜಿಸಿದ ಹಾಡು.

ಪತ್ನಿಯೊಂದಿಗೆ ನಾದಬ್ರಹ್ಮ ಹಂಸಲೇಖ

1985ರಲ್ಲಿ ಬಿಡುಗಡೆಯಾದ ರವಿಚಂದ್ರನ್​ ಅಭಿನಯದ ನಾನು ನನ್ನ ಹೆಂಡ್ತಿ ಸಿನಿಮಾಗೆ ಸಂಭಾಷಣೆಗಾರ ಹಾಗೂ ಗೀತ ಸಾಹಿತಿಯಾಗಿ ಅವರು ಸಿನಿಮಾ ಕೆರಿಯರ್​ ಆರಂಭಿಸಿದರು. 1987 ರಲ್ಲಿ ಬಿಡುಗಡೆಯಾದ ಪ್ರೇಮಲೋಕ ಸಿನಿಮಾ ಅವರಿಗೆ ಖ್ಯಾತಿ ತಂದುಕೊಟ್ಟಿತು. ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ಕೂಡಾ ಗಾಯಕಿ. ದಂಪತಿಗೆ ಅಲಂಕಾರ್ ಎಂಬ ಪುತ್ರ ತೇಜಸ್ವಿನಿ ಹಾಗೂ ನಂದಿನಿ ಎಂಬ ಇಬ್ಬರು ಪುತ್ರಿಯರಿದ್ದಾರೆ.

ನಟ ಜಗ್ಗೇಶ್​ ಅವರೊಂದಿಗೆ ನಾದಬ್ರಹ್ಮ ಹಂಸಲೇಖ ದಂಪತಿ

'ಸ್ಪರ್ಶ', 'ಆಕಸ್ಮಿಕ' , 'ಹಾಲುಂಡ ತವರು', 'ನಾನು ನನ್ನ ಕನಸು', 'ರಸಿಕ', 'ಗಟ್ಟಿಮೇಳ', 'ರಾಜಾಹುಲಿ' 'ಗಾನಯೋಗಿ ಪಂಚಾಕ್ಷರಿ ಗವಾಯಿ' ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. 'ಶ್ರೀ ಮಂಜುನಾಥ', 'ಹಾಲುಂಡ ತವರು' ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಕೂಡಾ ರಚಿಸಿದ್ದಾರೆ. ಹಂಸಲೇಖ ಅವರು ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಮತ್ತು ತಮಿಳು ಸೇರಿ ಒಟ್ಟು 500 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿದೇರ್ಶನ ಮಾಡಿದ್ದಾರೆ. ಸಂಗೀತ ಲೋಕದ ಸಾಧನೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ಇವರನ್ನು ಅರಸಿ ಬಂದಿವೆ.

ಇದನ್ನೂ ಓದಿ:ಈ ಭೂಮಿ ಮೇಲಿರುವ ಅತ್ಯಂತ ಕ್ರೂರವಾದ ಸ್ಥಳವದು.. ಟೈಟಾನಿಕ್​ ಮುಳುಗಿದ್ದ ಸ್ಥಳಕ್ಕೆ 33 ಬಾರಿ ಭೇಟಿ ನೀಡಿದ್ದ ಜೇಮ್ಸ್ ಕ್ಯಾಮರೂನ್

Last Updated : Jun 23, 2023, 7:11 PM IST

ABOUT THE AUTHOR

...view details