ಕರ್ನಾಟಕ

karnataka

ETV Bharat / entertainment

ವಧುವಿನಂತೆ ಕಂಗೊಳಿಸುತ್ತಿರುವ ಮೃಣಾಲ್​ ಠಾಕೂರ್​; ಕ್ಯಾಪ್ಶನ್​ ನೋಡಿ ಫ್ಯಾನ್ಸ್​ ಶಾಕ್​! - ಈಟಿವಿ ಭಾರತ ಕನ್ನಡ

Mrunal Thakur: ನಟಿ ಮೃಣಾಲ್​ ಠಾಕೂರ್​ ಇತ್ತೀಚೆಗೆ ಶೇರ್​ ಮಾಡಿರುವ ಫೋಟೋದಲ್ಲಿ ವಧುವಿನಂತೆ ಕಂಗೊಳಿಸಿದ್ದಾರೆ.

Mrunal Thakur
ಮೃಣಾಲ್​ ಠಾಕೂರ್

By

Published : Jul 30, 2023, 6:04 PM IST

ತಮ್ಮ ನಟನೆಯಿಂದ ಅಷ್ಟೇ ಅಲ್ಲದೇ ಗ್ಲಾಮರ್‌ನಿಂದಲೂ ಯುವಜನತೆಯನ್ನು ಆಕರ್ಷಿಸುವ ಬೆಡಗಿ ಮೃಣಾಲ್ ಠಾಕೂರ್. ‘ಸೀತಾರಾಮಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಚೆಲುವೆ, ಬಾಲಿವುಡ್​ನಲ್ಲೂ ಮಿಂಚು ಹರಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಪರೀತ ಆಕ್ಟೀವ್​ ಆಗಿರುವ ಬೆಡಗಿಗೆ ಇನ್​ಸ್ಟಾದಲ್ಲಿ 9.5 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಹೊಸ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಸನಿಹವಾಗಿದ್ದಾರೆ. ಇವರು ಇತ್ತೀಚೆಗೆ ಶೇರ್​ ಮಾಡಿರುವ ಫೋಟೋದಲ್ಲಿ ವಧುವಿನಂತೆ ಕಂಗೊಳಿಸಿದ್ದಾರೆ.

ಮೃಣಾಲ್​ ಠಾಕೂರ್​ ಕೆಂಪು ಬಣ್ಣದ ಲೆಹಂಗಾದಲ್ಲಿ ವಧುವಿನಂತೆ ಕಂಗೊಳಿಸಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಡ್ರೆಸ್​ಗೆ ತಕ್ಕಂತೆ ಆಭರಣ ಧರಿಸಿ, ಮೆಹಂದಿ ಕೈಗಳಿಂದ ಮೋಹಕವಾಗಿ ಕಾಣುತ್ತಿದ್ದಾರೆ. ಅವರು ಫೋಟೋ ಹಂಚಿಕೊಂಡು, "ಬಿಗ್​ ಡೇ" ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಅಭಿಮಾನಿಗಳನ್ನು ಒಂದು ಕ್ಷಣ ಗೊಂದಲಕ್ಕೆ ದೂಡುವಂತೆ ಮಾಡಿತ್ತು. ನಟಿ ಮದುವೆಯಾಗುತ್ತಿದ್ದಾರೆ ಎಂದೇ ಅಂದುಕೊಂಡಿದ್ದರು. ಆದರೆ ಕ್ಯಾಪ್ಶನ್​ ಮತ್ತಷ್ಟು ಓದಿದಾಗ ವಿಚಾರ ತಾವು ನಿರೀಕ್ಷಿಸಿದಂತೆ ಅಲ್ಲ ಎಂಬುದು ಗೊತ್ತಾಗಿದೆ.

ಮೃಣಾಲ್​ ಅವರ ಈ ಫೋಟೋವು 'ಮೇಡ್ ಇನ್ ಹೆವನ್ ಸೀಸನ್ 2' ನಿಂದ ಹಂಚಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಎರಡನೇ ಸೀಸನ್​ನ ಪೋಸ್ಟರ್​ ಬಿಡುಗಡೆಯಾಗಿತ್ತು. ಇದರಲ್ಲಿ ಶೋಭಿತಾ ಧೂಳಿಪಾಲ, ಜಿಮ್ ಸರ್ಭ್, ಅರ್ಜುನ್ ಮಾಥುರ್, ಕಲ್ಕಿ ಕೋಚ್ಲಿನ್, ಶಶಾಂಕ್ ಅರೋರಾ, ವಿಜಯ್ ರಾಜ್ ಮತ್ತು ಶಿವಾನಿ ರಘುವಂಶಿ ನಟಿಸಿದ್ದಾರೆ. ‘ಸೀತಾರಾಮಂ’ ನಟಿ ಹಂಚಿಕೊಂಡ ಫೋಟೋಗೆ, "ಬಿಗ್​ ಡೇಯಿಂದ ನೋಡದ ಫೋಟೋಗಳು. 'ಮೇಡ್ ಇನ್ ಹೆವನ್ ಸೀಸನ್ 2' ಅಗಸ್ಟ್​ 10 ರಂದು ಪ್ರೈಮ್​ನಲ್ಲಿ ಮಾತ್ರ" ಎಂದು ಬರೆದಿದ್ದಾರೆ.

ಇದನ್ನೂ ಓದಿ:'ಸೈಫ್​ ಅಲಿ ಖಾನ್​ ಅವರಲ್ಲಿ ರಾಜಮನೆತನದ ವರ್ಚಸ್ಸಿದೆ': ಆರ್​ಆರ್​ಆರ್ ಸ್ಟಾರ್ ರಾಮ್ ​​ಚರಣ್​ ಗುಣಗಾನ

ಮೃಣಾಲ್​ ಅನ್ನು ಹೊರತುಪಡಿಸಿ, 'ಮೇಡ್ ಇನ್ ಹೆವನ್ ಸೀಸನ್ 2'ನಲ್ಲಿ ಇಶ್ವಾಕ್ ಸಿಂಗ್, ಮೋನಾ ಸಿಂಗ್ ಮತ್ತು ತ್ರಿನೇತ್ರ ಹಲ್ದಾರ್ ಅವರಂತಹ ಹೊಸ ಮುಖಗಳನ್ನು ಪರಿಚಯಿಸಿದ್ದಾರೆ. ಶೋ ತಯಾರಕರಾದ ಜೋಯಾ ಅಖ್ತರ್​ ಮತ್ತು ರೀಮಾ ಕಾಗ್ತಿ ಹಂಚಿಕೊಂಡಂತೆ, ಮೇಡ್​ ಇನ್​ ಹೆವೆನ್​ ಪ್ರಸ್ತುತ ಭಾರತದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತಿದೆ. ಇಬ್ಬರು ವಿವಾಹಿತರ ಮೂಲಕ ಕಥೆಯನ್ನು ನಿರೂಪಿಸಲಾಗಿದೆ. 'ಮೇಡ್ ಇನ್ ಹೆವನ್ ಸೀಸನ್ 2' ಆಗಸ್ಟ್​ 10 ರಿಂದ ಪ್ರೈಮ್​ ವಿಡಿಯೋದಲ್ಲಿ ಸ್ಟ್ರೀಮ್​ ಆಗಲಿದೆ.

ಇನ್ನು ಮೃಣಾಲ್​ ಠಾಕೂರ್​ ಸಿನಿಮಾ ವಿಚಾರವಾಗಿ ನೋಡುವುದಾದರೆ, ಸದ್ಯ ಇವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಎದುರು 'ಹಾಯ್ ನಾನ್ನ' ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೇ ನಿರ್ದೇಶಕ ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರಕ್ಕೆ VD13 ಎಂದು ಟೈಟಲ್​ ಇಡಲಾಗಿದೆ.

ಇದನ್ನೂ ಓದಿ:LGM movie: ಧೋನಿ ಅಭಿಮಾನಿಗಳಿಗೆ ನಿರಾಸೆ; ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್​ಜಿಎಂ'

ABOUT THE AUTHOR

...view details