ಬಾಲಿವುಡ್ ಚಿತ್ರರಂಗದ ಕಿಂಗ್ ಶಾರುಖ್ ಖಾನ್ ಮತ್ತು ಪದ್ಮಾವತಿಯ ಬಹುನಿರೀಕ್ಷಿತ ಪಠಾಣ್ ಸಿನಿಮಾದ ಮೊದಲ ಟ್ರ್ಯಾಕ್ ''ಬೇಶರಂ ರಂಗ್'' ಬಿಡುಗಡೆ ಆಗಿ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕೆಮಿಸ್ಟ್ರಿ ಮಾತ್ರ ಸಖತ್ ವರ್ಕ್ ಔಟ್ ಆಗಿದೆ. ಈ ಜೋಡಿ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಹಾಟ್ ಸಾಂಗ್ ಅನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ವಿರೋಧಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ದೀಪಿಕಾರ ಹಾಟ್ ಅವತಾರ ಕಂಡ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಯ್ಕಾಟ್ ಪಠಾಣ್ ಟ್ರೆಂಡ್ ಕೂಡ ಜೋರಾಗಿದೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹಾಡಿನ ಬಗ್ಗೆ ತಮ್ಮ ಆಕ್ಷೇಪವನ್ನು ಟ್ವೀಟ್ ಮೂಲಕ ಹೊರಹಾಕಿದ್ದಾರೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡ ಸಚಿವರು, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಹಾಡಿನಲ್ಲಿ ಉಡುಗೆಗಳ ಆಯ್ಕೆ, ಕೇಸರಿ ಬಣ್ಣದ ಬಟ್ಟೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.