ಕರ್ನಾಟಕ

karnataka

ETV Bharat / entertainment

ಶ್ರದ್ಧಾ ವಾಲ್ಕರ್​​ ಹತ್ಯೆ ಪ್ರಕರಣ: ಸಿನಿಮಾ ನಿರ್ಮಾಣ  ಘೋಷಿಸಿದ ನಿರ್ದೇಶಕ ಮನೀಶ್​ ಸಿಂಗ್​ - ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ

ವೃಂದಾವನ ಫಿಲಂಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಲಿದೆ. 'ಹು ಕಿಲ್ಡ್ ಶ್ರದ್ಧಾ ವಾಲ್ಕರ್​' ಎಂದು ಚಿತ್ರಕ್ಕೆ ಹೆಸರಿಡಲಾಗಿದೆಯಂತೆ.

movie-announced-on-shraddha-walker-murder-case
ಶ್ರದ್ಧಾ ವಾಲ್ಕರ್​​ ಹತ್ಯೆ ಪ್ರಕರಣ ಕುರಿತು ಸಿನಿಮಾ ಘೋಷಣೆ

By

Published : Nov 19, 2022, 6:24 PM IST

ಹೈದರಾಬಾದ್: ದೇಶವನ್ನೇ ಬೆಚ್ಚಿ ಬೀಳಿಸಿರುವ ಮುಂಬೈಯ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಕುರಿತು ಟ್ವೀಟ್​ ಮಾಡಿರುವ ಚಿತ್ರ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ಶ್ರದ್ಧಾಳನ್ನು ಹತ್ಯೆ ಮಾಡಿರುವ ಆರೋಪಿಗೆ ಅದಕ್ಕಿಂತ ಹೀನಾಯ ಸಾವು ಬರಲಿ ಎಂದು ಬರೆದು ಕೊಂಡಿದ್ದಾರೆ. ಇದೀಗ ಅದರ ಬೆನ್ನಲ್ಲೆ ನಿರ್ದೇಶಕರೊಬ್ಬರು ಈ ಘಟನೆ ಕುರಿತು ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ಹೌದು ನಿರ್ದೇಶಕ ಹಾಗೂ ನಿರ್ಮಾಪಕ ಮನೀಶ್​ ಸಿಂಗ್​ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರ ತಯಾರಿಸುವುದಾಗಿ ಹೇಳಿದ್ದಾರೆ. ಅವರೇ ಹೇಳಿರುವಂತೆ ಈಗಾಗಲೇ ಚಿತ್ರಕಥೆ ಕೆಲಸವನ್ನೂ ಪ್ರಾರಂಭಿಸಿದ್ದಾರಂತೆ.

ಚಿತ್ರದ ಕಥೆಯ ಬಗ್ಗೆ ಮಾತನಾಡಿರುವ ಮನೀಶ್​ ಅವರು, ಈ ಚಿತ್ರವು ಸಂಪೂರ್ಣವಾಗಿ ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣವನ್ನು ಆಧರಿಸಿದೆ. ಅದರ ಜೊತೆಗೆ ಚಿತ್ರದಲ್ಲಿ ಲವ್​ ಜಿಹಾದ್​ ಕುರಿತು ಹೇಳಲಾಗುವುದು. ಮದುವೆಯಾಗುವುದಾಗಿ ನಟಿಸಿ ಹೆಣ್ಣುಮಕ್ಕಳ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವ ಜಿಹಾದಿಗಳ ಕುರಿತು ಈ ಚಿತ್ರ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.

ಚಿತ್ರದ ಹೆಸರೇನು?:ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. 'ಹು ಕಿಲ್ಡ್ ಶ್ರದ್ಧಾ ವಾಲ್ಕರ್​' ಎಂದು ಚಿತ್ರಕ್ಕೆ ಹೆಸರಿಡಲಾಗಿದೆಯಂತೆ. ಈ ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ನಿರ್ಮಾಪಕರು ದೆಹಲಿಯ ಸುತ್ತಮುತ್ತಲಿನ ಕಾಡುಗಳ ವಿಡಿಯೋ ಕ್ಲಿಪ್‌ಗಳ ಮೇಲೆ ಸಂಶೋಧನೆ ಮಾಡಲು ತಂಡವನ್ನು ರಚಿಸಿದ್ದಾರೆ. ಇದರೊಂದಿಗೆ ಶೂಟಿಂಗ್​ಗಾಗಿ ಲೊಕೇಶನ್ ಹುಡುಕಾಟವೂ ನಡೆಯುತ್ತಿದೆ.

ಇದನ್ನೂ ಓದಿ:ಶ್ರದ್ಧಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಶಿವಸೇನೆಯ ಸಂಜಯ್ ರಾವತ್ ಆಗ್ರಹ

ABOUT THE AUTHOR

...view details