ಹಿಂದಿ ಕಿರುತೆರೆ ನಟಿ ಮೌನಿ ರಾಯ್ ತಮ್ಮ ಅದ್ಭುತ ಲುಕ್ನಿಂದಲೇ ಸದಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ನಟನೆ, ಫ್ಯಾಷನ್ನಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ, ಕೆಲವು ದಿನಗಳಿಂದ ಇವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರಲಿಲ್ಲ. ಮೂರು ದಿನಗಳ ಹಿಂದೆ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದು ವೈಯಕ್ತಿಕವಲ್ಲದೇ, ವೃತ್ತಿಪರವಾಗಿತ್ತು. ಇದೀಗ ನಟಿ ಶೇರ್ ಮಾಡಿರುವ ಫೋಟೋ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ.
ಮೌನಿ ರಾಯ್ ಅವರು ಪತಿ ಸೂರಜ್ ನಂಬಿಯಾರ್ ಅವರೊಂದಿಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ನಟಿಯ ಕೈಗೆ ಡ್ರಿಪ್ ಸೆಟ್ ಸಿರಿಂಜ್ ಅನ್ನು ಹಾಕಲಾಗಿದೆ. ಇದನ್ನು ಕಂಡ ಅವರ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಮೌನಿ ರಾಯ್ ಈ ಪೋಸ್ಟ್‌ನೊಂದಿಗೆ ತಮ್ಮ ಆರೋಗ್ಯದ ಚೇತರಿಕೆ ಬಗ್ಗೆ ಹೇಳಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಮೌನಿ ರಾಯ್ ಪೋಸ್ಟ್:"9 ದಿನ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ನಾನು ಎಲ್ಲಕ್ಕಿಂತ ಆಂತರಿಕವಾಗಿ ಹೆಚ್ಚು ಸಂತೋಷವಾಗಿದ್ದೇನೆ. ನಾನು ಈಗ ಮನೆಗೆ ಮರಳಿದ್ದೇನೆ ಮತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂತೋಷದ ಆರೋಗ್ಯಕರ ಜೀವನ ಮುಖ್ಯ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ಇದ್ದು ಕಾಳಜಿ ವಹಿಸಿದ್ದಕ್ಕಾಗಿ ಮತ್ತು ನನ್ನೊಂದಿಗೆ ಇದ್ದ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಸೂರಜ್, ಜಗತ್ತಿನಲ್ಲಿ ನಿನ್ನಂತೆ ಯಾರೂ ಇಲ್ಲ, ನಾನು ನಿಮಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ, ಓಂ ನಮಃ ಶಿವಾಯ." ಎಂದು ಹೇಳಿದ್ದಾರೆ. ಆದರೆ ತನಗೇನಾಗಿತ್ತು ಎಂಬುದನ್ನು ನಟಿ ಬಹಿರಂಗಪಡಿಸಿಲ್ಲ.