ಎಂದಿನಂತೆ ಈ ವರ್ಷವೂ ಹಲವು ವಿಭಿನ್ನ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಿವೆ. ಹಲವು ಸಿನಿಮಾಗಳು ನಿರೀಕ್ಷೆಯನ್ನು ಮೀರಿದರೆ, ಮತ್ತೆ ಕೆಲವು ಪ್ರಭಾವ ಬೀರಲು ವಿಫಲವಾಗಿವೆ. ಈ ವರ್ಷ ಈವರೆಗೆ (2022 ಜನವರಿ-ಜೂನ್) ನೂರಾರು ಚಲನಚಿತ್ರಗಳು ಬಿಡುಗಡೆಯಾಗಿವೆ.
ಅವುಗಳಲ್ಲಿ 10 ಚಲನಚಿತ್ರಗಳನ್ನು ಪ್ರಮುಖ ಇಂಟರ್ನ್ಯಾಷನಲ್ ಮೂವಿ ಡೇಟಾಬೇಸ್ ಕಂಪನಿ(IMDB)ಯು 'ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು' ಎಂದು ಘೋಷಿಸಿದೆ.
ಈ ಪಟ್ಟಿಯಲ್ಲಿ ಕಮಲ್ ಹಾಸನ್ ಅಭಿನಯದ 'ವಿಕ್ರಮ್' 8.8 ರೇಟಿಂಗ್‌ನೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು'ಕೆಜಿಎಫ್ ಚಾಪ್ಟರ್ 2' ಪಡೆದುಕೊಂಡಿದೆ. ಈ ಚಿತ್ರಕ್ಕೆ 8.5 ರೇಟಿಂಗ್ ಸಿಕ್ಕಿದೆ. ಉಳಿದ ಸಿನಿಮಾಗಳ ವಿವರ ಈ ಕೆಳಗಿನಂತಿದೆ.
3.ದಿ ಕಾಶ್ಮೀರ್ ಫೈಲ್ಸ್ (ಹಿಂದಿ): 8.3
4. ಹೃದಯಂ(ಮಲಯಾಳಂ): 8.1
5. ಆರ್ಆರ್ಆರ್ (ತೆಲುಗು): 8.0