ಕರ್ನಾಟಕ

karnataka

ETV Bharat / entertainment

2023ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಬಾಲಿವುಡ್​​ ಸಿನಿಮಾಗಳ ಪಟ್ಟಿ ಹೀಗಿದೆ - ಸೂಪರ್ ಸ್ಟಾರ್ ನಟಿ ನಯನತಾರಾ

ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿರುವ ನೀವು ಹೊಸ ಸಿನಿಮಾಗಳನ್ನು ನೋಡುವ ಯೋಜನೆ ಹಾಕಿಕೊಂಡಿದ್ದೀರಾ? ತಡಮಾಡಬೇಡಿ. ಬಾಲಿವುಡ್​​ನಲ್ಲಿ ಹಲವು​ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧಗೊಂಡಿದ್ದು, ಅವುಗಳ ಬಗ್ಗೆ ಇಂದೇ ಮಾಹಿತಿ ಪಡೆದುಕೊಳ್ಳಿ. ಬೇರೆ ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ 2022ರಲ್ಲಿ ಬಾಲಿವುಡ್​ನಲ್ಲಿ ಅಷ್ಟು ಹೇಳಿಕೊಳ್ಳುವಂತಹ ಚಿತ್ರಗಳು ತೆರೆಕಾಣಲಿಲ್ಲ. ಆದರೆ, ಈ ವರ್ಷ ಹಲವು ಗೆಲ್ಲುವ ಸಿನಿಮಾಗಳು ಉತ್ಸಾಹದಿಂದ ತೆರೆಕಾಣಲು ಸಿದ್ಧಗೊಂಡಿವೆ. 2023ರ ಬಹು ನಿರೀಕ್ಷಿತ ಈ ಚಿತ್ರಗಳನ್ನು ಮಿಸ್​ ಮಾಡದೇ ನೋಡಿ.

most awaited movies of 2023 see list
ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ

By

Published : Jan 2, 2023, 5:56 PM IST

Updated : Jan 2, 2023, 6:03 PM IST

ಮುಂಬೈ(ಮಹಾರಾಷ್ಟ್ರ): ಹೊಸ ವರ್ಷ ಬಂದಿದೆ. 2023ರಲ್ಲಿ ಬಾಲಿವುಡ್‌ಗೆ ಕಳೆ ತಂದುಕೊಡುವಂತಹ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಕಾರ್ತಿಕ್ ಆರ್ಯನ್ ನಟನೆಯ 'ಶಹಜಾದಾ', ಶಾರುಖ್ ಖಾನ್ ಅವರ 'ಪಠಾಣ್' ಮತ್ತು 'ಜವಾನ್' ಸೇರಿದಂತೆ ಹಲವು ಸಿನಿಮಾಗಳು ಸಖತ್​ ಸೌಂಡ್​ ಮಾಡುತ್ತಿವೆ. ಶಾರುಖ್ ಖಾನ್​ ಅವರ ಮೂರು ಸಿನಿಮಾಗಳು ಮತ್ತು ಸಲ್ಮಾನ್ ಖಾನ್ ಅವರ ಎರಡು ಸಿನಿಮಾಗಳು ಈ ವರ್ಷ ತೆರೆ ಕಾಣುತ್ತಿರುವುದು ಇನ್ನೂ ವಿಶೇಷ ಎಂದು ಹೇಳಲಾಗುತ್ತಿದೆ. ಕೆಲವು ಚಿತ್ರಗಳು ಈಗಾಗಲೇ ಪ್ರಚಾರ ನಡೆಸಿವೆ. ಹಾಗಾಗಿ ಸಿನಿ ಪ್ರೇಕ್ಷಕರು ಯಾವಾಗ ಬಿಡುಗಡೆಯಾಗುತ್ತವೇ ಅಂತ ತಮ್ಮ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಇದಕ್ಕೊಂದು ಉದಾಹರಣೆ ಎಂದು ಹೇಳಬಹುದು.

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ

1. Pathaan: ‘ಬೇಷರಂ ರಂಗ್’ ಹಾಡಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದು. ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ನಾಲ್ಕು ವರ್ಷಗಳ ನಂತರ ಮತ್ತೆ ಜೊತೆಯಾಗಿ ತೆರೆ ಹಂಚಿಕೊಂಡಿರುವ ಚಿತ್ರ ಇದಾಗಿದ್ದು, ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್

2. Rocky Aur Rani Ki Prem Kahani: ನಟಿ ಆಲಿಯಾ ಭಟ್ ಮತ್ತು ನಟ ರಣವೀರ್ ಸಿಂಗ್ ಅಭಿನಯದ ಚಿತ್ರ ಇದಾಗಿದ್ದು, ಏಪ್ರಿಲ್ 28, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗಲ್ಲಿ ಬಾಯ್ ಜೋಡಿಯ ರೊಮ್ಯಾನ್ಸ್ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಲಿದ್ದಾರೆ. ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್

3. Kisi Ka Bhai Kisi Ki Jaan: ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಆ್ಯಕ್ಷನ್​ ಪ್ಯಾಕ್ಡ್ ಎಂಟರ್‌ಟೈನರ್‌ ಚಿತ್ರ ಕೂಡ ಆಗಿದೆ. ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿಜೇಂದರ್ ಸಿಂಗ್ ಕೂಡ ಚಿತ್ರದ ಭಾಗವಾಗಿದ್ದಾರೆ. ಚಿತ್ರ 2023ರ ಈದ್ ಮಿಲಾದ್ ವೇಳೆ ಬಿಡುಗಡೆ ಆಗಲಿದೆ.

ನಟ ಕಾರ್ತಿಕ್ ಆರ್ಯನ್

4. Shehzada: 'ಭೂಲ್ ಭುಲೈಯಾ 2' ನಟ ಕಾರ್ತಿಕ್ ಆರ್ಯನ್ 'ಶೆಹಜಾದಾ' ಚಿತ್ರದಲ್ಲಿ ಕೃತಿ ಸನೋನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರೊಂದಿಗೆ ನಟಿಯರಾದ ಮನೀಶಾ ಕೊಯಿರಾಲ, ಪರೇಶ್ ರಾವಲ್, ರೋನಿತ್ ಬೋಸ್ ರಾಯ್ ಮತ್ತು ಸಚಿನ್ ಖೇಡೇಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಶೆಹಜಾದಾ' ಫೆಬ್ರವರಿ 10, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್

5. Tu Jhoothi Main Makkaar: ರಣಬೀರ್ ಕಪೂರ್ ನಟನೆಯ ರೋಮ್ಯಾಂಟಿಕ್​ ಮತ್ತು ಕಾಮಿಡಿ ಚಿತ್ರ ಇದಾಗಿದ್ದು, ಮಾರ್ಚ್ 8, 2023 ರಂದು ಹೋಳಿ ಸಂದರ್ಭದಲ್ಲಿ ನೇರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದಾರೆ. ಲವ್​ ರಂಜನ್​ ಚಿತ್ರಕ್ಕೆ ನಿರ್ದೇಶನ ಹೇಳಿದ್ದು, ಯಶ್​ ರಾಜ್​ ಫಿಲಂ ನಿರ್ಮಾಣ ಮಾಡಿದೆ.

ರಣಬೀರ್ ಕಪೂರ್

6. Animal:ರಣಬೀರ್ ಕಪೂರ್ ಅವರ ಮತ್ತೊಂದು ಚಿತ್ರ ಇದು. ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ರಣಬೀರ್ ಕಪೂರ್ ಜೊತೆಗೆ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯ ಚಿತ್ರದ ತಯಾರಕರು ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

ಶಾರುಖ್ ಖಾನ್

7. Jawan: ಶಾರುಖ್ ಖಾನ್ ಮತ್ತು ದಕ್ಷಿಣದ ಸೂಪರ್ ಸ್ಟಾರ್ ನಟಿ ನಯನತಾರಾ ಜೊತೆಯಾಗಿ ಕಾಣಿಸಿಕೊಳ್ಳಲಿರುವ ಚಿತ್ರ ಇದಾಗಿದೆ. ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿದ್ದು, ಜೂನ್ 2, 2023 ರಂದು ನೇರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಅನಿರುದ್ಧ್​ ರವಿಚಂದರ್​ ಚಿತ್ರಕ್ಕೆ ಸಂಗೀತ ನಿರ್ದೇಶನ ಹೇಳಿದ್ದಾರೆ. ಮೊದಲ ನೋಡದಿಂದ ಚಿತ್ರವು ಈಗಾಗಲೇ ಹೆಸರು ಮಾಡಿದೆ.

ಪ್ರಭಾಸ್

8. Adipurush: ಪ್ರಭಾಸ್ ನಟನೆಯ ಅದ್ಧೂರಿ ವೆಚ್ಚದ ಚಿತ್ರ ಇದಾಗಿದ್ದು ಜೂನ್ 16, 2023 ರಂದು ಥಿಯೇಟರ್‌ಗಳಿಗೆ ಬರಲಿದೆ. ಈ ಚಿತ್ರವು ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ್ದು ಪ್ರಭಾಸ್ ಅವರು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವನನ ಪಾತ್ರವನ್ನು ನಿರ್ವಹಿಸಿದ್ದಾರೆ. ಕೃತಿ ಸನನ್ ಸೀತಾ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇಕಿಂಗ್​ನಿಂದ ಚಿತ್ರವು ಸಖತ್​ ಸೌಂಡ್​ ಮಾಡುತ್ತಿದೆ.

ಶಾರುಖ್ ಖಾನ್

9. Dunki:ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಚಿತ್ರ ಇದಾಗಿದ್ದು ತಾಪ್ಸಿ ಪನ್ನು ಮತ್ತು ಶಾರುಖ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಾರುಖ್​ ಖಾನ್​ ಮತ್ತು ತಾಪ್ಸಿ ಪನ್ನು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು ಅಭಿಮಾನಿಗಳ ಕಾತುರತೆ ಹೆಚ್ಚಾಗಿದೆ. 2023 ರಲ್ಲಿ ಬಿಡುಗಡೆಗೊಳ್ಳಲಿರುವ ಶಾರುಖ್​ ಖಾನ್ ಅವರ ಮೂರನೇ ಚಿತ್ರ ಇದಾಗಿದೆ. ವರ್ಷದ ಕೊನೆಯಲ್ಲಿ ಈ ಚಿತ್ರ (ಡಿಸೆಂಬರ್‌) ಬಿಡುಗಡೆಯಾಗಲಿದೆ.

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್

10. Tiger 3: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ. ಇದೆ ಮೊದಲ ಬಾರಿಗೆ ಇಮ್ರಾನ್ ಹಶ್ಮಿ ಬೇಹುಗಾರಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಏಪ್ರಿಲ್ 21, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತಗಳಿಂದ 2023ರ ದೀಪಾವಳಿ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಇವಷ್ಟೇ ಅಲ್ಲದೇ ಇನ್ನೂ ಹತ್ತು ಹಲವು ಸಿನಿಮಾಗಳು ಈ ವರ್ಷ ತೆರೆ ಕಾಣಲು ಸಿದ್ಧತೆ ಮಾಡಿಕೊಂಡಿವೆ. ಇದರ ನಡುವೆ ಕೆಲವರ ಹೊಸ ಸಿನಿಮಾಗಳು ಬರಲಿವೆ. ಕೊರೊನಾ ಬಳಿಕ ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಾಣಿಸಿಕೊಳ್ಳುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಕೊರೊನಾ ಸ್ವಲ್ಪ ತಗ್ಗಿದ್ದು ನೇರ ಚಿತ್ರಮಂದಿರಳಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ತರಿಸಿದೆ.

ಇದನ್ನೂ ಓದಿ:ಹೊಸ ಹುಮ್ಮಸ್ಸಿನಲ್ಲಿ ಕನ್ನಡ ಚಿತ್ರರಂಗ: 2023ರಲ್ಲಿ ಭರಪೂರ ಮನರಂಜನೆ ನೀಡುವ ಕನ್ನಡದ ಟಾಪ್​ ಸಿನಿಮಾಗಳ ಪಟ್ಟಿ

Last Updated : Jan 2, 2023, 6:03 PM IST

ABOUT THE AUTHOR

...view details