ಕರ್ನಾಟಕ

karnataka

ETV Bharat / entertainment

'ಕಾಂತಾರ ಪ್ರೀಕ್ವೆಲ್'​​ ಸೇರಿದಂತೆ 2024ರಲ್ಲಿ ತೆರೆಕಾಣಲಿರುವ ಸಿನಿಮಾಗಳಿವು - 2024 ಸಿನಿಮಾಗಳು

2024ರಲ್ಲಿ ಬಿಡುಗಡೆ ಆಗಲು ಸಜ್ಜಾಗಿರುವ ಸಿನಿಮಾಗಳ್ಯಾವುವು? ಎಂಬುದನ್ನು ನೋಡೋಣ ಬನ್ನಿ.

2024 most awaited films
2024ರಲ್ಲಿ ತೆರೆಕಾಣಲಿರುವ ಸಿನಿಮಾಗಳು

By ETV Bharat Karnataka Team

Published : Dec 31, 2023, 5:18 PM IST

2023ಕ್ಕೆ ಬೈ ಹೇಳಿ 2024 ಸ್ವಾಗತಿಸಲು ಸರ್ವರೂ ಸಜ್ಜಾಗಿದ್ದಾರೆ. ಈ ಸಾಲಿನಲ್ಲಿ ಭಾರತೀಯ ಚಿತ್ರರಂಗ ಸಖತ್​​ ಸದ್ದು ಮಾಡಿದೆ. ಒಂದಾದ ಬಳಿಕ ಒಂದರಂತೆ ಚಿತ್ರಗಳು ತೆರೆಕಂಡಿವೆ. ಏಕಕಾಲಕ್ಕೆ ಬಹುನಿರೀಕ್ಷಿತ ಚಿತ್ರಗಳು ತೆರೆಕಂಡು ಬಾಕ್ಸ್ ಆಫೀಸ್​ನಲ್ಲಿ ಗದ್ದಲ ಸೃಷ್ಟಿಸಿದ ಉದಾಹರಣೆಗಳೂ ನಮ್ಮ ಮಂದಿವೆ. ಅದ್ಭುತ ಸಿನಿಮೀಯ ಅನುಭವವನ್ನು 2023 ನೀಡಿದ್ದು, 2024ರಲ್ಲೂ ಒಂದಾದ ಬಳಿಕ ಒಂದರಂತೆ ತೆರೆಗಪ್ಪಳಿಸಲು ಬಹುನಿರೀಕ್ಷಿತ ಚಿತ್ರಗಳು ಸಜ್ಜಾಗಿವೆ.

ಸಂಕ್ರಾಂತಿ, ಗಣರಾಜ್ಯೋತ್ಸವದಿಂದ ಹಿಡಿದು ಸ್ವಾತಂತ್ರ್ಯ ದಿನ, ದೀಪಾವಳಿ, ಕ್ರಿಸ್ಮಸ್​ವರೆಗೂ ಸಿನಿಮಾಗಳು ಬಿಡುಗಡೆ ಆಗಲಿವೆ. ಹಲವು ಸಿನಿಮಾಗಳ ರಿಲೀಸ್​ಗೆ ಈಗಾಗಲೇ ದಿನ ಕೂಡ ನಿಗದಿ ಆಗಿವೆ. ಹಾಗಾದ್ರೆ 2024ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳಾವುವು? ಯಾವ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿಯಾಗಲಿವೆ ಅನ್ನೋದನ್ನು ನೋಡೋಣ ಬನ್ನಿ.

  • 'ಕಾಂತಾರ: ಎ ಲೆಜೆಂಡ್-ಅಧ್ಯಾಯ 1': 2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಸಿನಿಮಾ 'ಕಾಂತಾರ'. ಇದರ ಪ್ರೀಕ್ವೆಲ್ ಪ್ರೀ ಪ್ರೊಡಕ್ಷನ್​ ಹಂತದಲ್ಲಿರೋದು ನಿಮಗೆ ತಿಳಿದಿರುವ ವಿಚಾರ. ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್​ ಶೆಟ್ಟಿ ಸಾರಥ್ಯದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, 2024ರಲ್ಲಿ ತೆರೆಕಾಣಲಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.
  • ಮೆರ್ರಿ ಕ್ರಿಸ್ಮಸ್:ಶ್ರೀರಾಮ್ ರಾಘವನ್ ನಿರ್ದೇಶನದ ಮೆರ್ರಿ ಕ್ರಿಸ್ಮಸ್ ಸಿನಿಮಾ ಹೊಸ ವರ್ಷಾರಂಭದಲ್ಲೇ ತೆರೆಕಾಣಲಿದೆ. ಬಾಲಿವುಡ್​ ಮತ್ತು ದಕ್ಷಿಣದ ಬಹುಬೇಡಿಕೆ ತಾರೆಯರಾದ ಕತ್ರಿನಾ ಕೈಫ್​ ಮತ್ತು ವಿಜಯ್​ ಸೇತುಪತಿ ಇದೇ ಮೊದಲ ಬಾರಿ ತೆರೆಹಂಚಿಕೊಂಡಿದ್ದು, ಈ ಕಾಂಬಿನೇಶನ್​ನ ಕೆಮಿಸ್ಟ್ರಿ ನೋಡಲು ವೀಕ್ಷಕರು ಉತ್ಸುಕರಾಗಿದ್ದಾರೆ. ರೊಮ್ಯಾಂಟಿಕ್​, ಸಸ್ಪೆನ್ಸ್ ಕಥೆಯಾಧಾರಿತ ಸಿನಿಮಾ 2024ರ ಜನವರಿ 12ರಂದು ತೆರೆಕಾಣಲಿದೆ.
  • ಫೈಟರ್: ಪಠಾಣ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನ ಫೈಟರ್​ ಸಿನಿಮಾ ಗಣರಾಜ್ಯೋತ್ಸವ ಸಂದರ್ಭ ತೆರೆಕಾಣಲಿದೆ. ವೈಮಾನಿಕ ಆ್ಯಕ್ಷನ್ ಮೂವಿ 2024ರ ಜನವರಿ 25ರಂದು ಬಿಡುಗಡೆ ಆಗಲಿದೆ. ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಇದೇ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿದ್ದು, ಅದ್ಭುತ ಆ್ಯಕ್ಷನ್​​ ಸೀಕ್ವೆನ್ಸ್​ ಅನ್ನು ಚಿತ್ರದಿಂದ ನಿರೀಕ್ಷಿಸಲಾಗಿದೆ.
  • ಮೇ ಅಟಲ್ ಹೂ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಕಥೆ ಜನವರಿ 19ರಂದು ರಿಲೀಸ್​ ಆಗಲಿದೆ. ರವಿ ಜಾಧವ್​​ ನಿರ್ದೇಶನದ ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ನಟಿಸಿದ್ದಾರೆ.
  • ಲವ್, ಸೆಕ್ಸ್ ಔರ್ ಧೋಖಾ 2:ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು ತಮ್ಮ 'ಲವ್, ಸೆಕ್ಸ್ ಔರ್ ಧೋಖಾ'ದ ಸೀಕ್ವೆಲ್​​ನೊಂದಿಗೆ ಬರಲು ಸಜ್ಜಾಗಿದ್ದಾರೆ. 2010ರಲ್ಲಿ ಮೊದಲ ಭಾಗ ತೆರೆಕಂಡಿತ್ತು. ಎರಡನೇ ಭಾಗ ಫೆಬ್ರವರಿ 16 ರಂದು ರಿಲೀಸ್​ ಆಗಲಿದೆ.
  • ಯೋಧ:ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಅಭಿನಯದ ಯೋಧ ಸಿನಿಮಾ ಮಾರ್ಚ್ 15ರಂದು ತೆರೆಕಾಣಲಿದೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರವನ್ನು ಪುಷ್ಕರ್ ಓಜಾ ಮತ್ತು ಸಾಗರ್ ಅಂಬ್ರೆ ನಿರ್ದೇಶಿಸಿದ್ದಾರೆ.
  • ಮೆಟ್ರೋ ಇನ್ ದಿನೋ: ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ನಟನೆಯ ಮೆಟ್ರೋ ಇನ್ ದಿನೋ ಸಿನಿಮಾ ಮಾರ್ಚ್ 29ರಂದು ತೆರೆಕಾಣಲಿದೆ. ಪ್ರಸ್ತುತ ರಿಲೇಶನ್​ಶಿಪ್​​ ಸುತ್ತ ಕಥೆ ಸಾಗುತ್ತದೆ ಎಂದು ಹೇಳಲಾಗಿದೆ.
  • ಬಡೇ ಮಿಯಾನ್ ಚೋಟೆ ಮಿಯಾನ್:ಅಲಿ ಅಬ್ಬಾಸ್ ಜಾಫರ್ ಅವರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಏಪ್ರಿಲ್​​ 10ರಂದು ತೆರಕಾಣಲಿದೆ. ಬಾಲಿವುಡ್​​ ಸೂಪರ್​ಸ್ಟಾರ್​​ಗಳಾದ ಅಕ್ಷಯ್ ಕುಮಾರ್, ಮಾನುಷಿ ಛಿಲ್ಲರ್, ಪೃಥ್ವಿರಾಜ್ ಸುಕುಮಾರನ್, ಸೋನಾಕ್ಷಿ ಸಿನ್ಹಾ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವರು ನಟಿಸಿದ್ದಾರೆ.
  • ತೇರೆ ಇಷ್ಕ್ ಮೇ: ಧನುಷ್​​, ಆನಂದ್​ ಎಲ್​​ ರೈ ಅವರ ತೇರೆ ಇಷ್ಕ್ ಮೇ ಜೂನ್​ 22 ರಂದು ತೆರೆಕಾಣಲಿದೆ.
  • ಚಂದು ಚಾಂಪಿಯನ್: ಕಬೀರ್ ಖಾನ್ ನಿರ್ದೇಶನದ ಚಂದು ಚಾಂಪಿಯನ್ ಜೂನ್​ 14ರಂದು ತೆರೆಕಾಣಲಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಗೋಲ್ಡ್​​ ಮೆಡಲ್​ ವಿನ್ನರ್ ಮುರಳಿಕಾಂತ್ ಪೆಟ್ಕರ್ ಅವರ ಜೀವನಾಧಾರಿತ ಕಥೆಯಾಗಿದೆ. ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯಲ್ಲಿದ್ದಾರೆ.
  • ಸ್ತ್ರೀ 2: ಹಾರರ್ ಕಾಮಿಡಿ ಸ್ತ್ರೀ ಸಿನಿಮಾದ ಸೀಕ್ವೆಲ್​​​ ಆಗಸ್ಟ್​​ನಲ್ಲಿ ತೆರೆಕಾಣಲಿದೆ. ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್, ಅಪರಶಕ್ತಿ ಖುರಾನಾ ಮತ್ತು ಪಂಕಜ್ ತ್ರಿಪಾಠಿ ನಟಿಸಿದ್ದಾರೆ.
  • ಸಿಂಗಮ್ ಎಗೈನ್​​: ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಆಗಸ್ಟ್​ನಲ್ಲಿ ತೆರೆಕಾಣಲಿದೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್​​, ಅಜಯ್ ದೇವಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಣ್​​​ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಸೇರಿದಂತೆ ಹಲವರು ನಟಿಸಿದ್ದಾರೆ.
  • ಪುಷ್ಪ 2: ದಕ್ಷಿಣದ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಆಗಸ್ಟ್ 15ರಂದು ತೆರೆಕಾಣಲಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರ ಒಂದು ನೋಟ ಈಗಾಗಲೇ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
  • ಭೂಲ್ ಭುಲೈಯಾ 3: 2024ರ ದೀಪಾವಳಿ ಸಂದರ್ಭ ಭೂಲ್ ಭುಲೈಯಾ 3 ಬಿಡುಗಡೆ ಆಗಲಿದೆ. ಕಾರ್ತಿಕ್ ಆರ್ಯನ್ ಚಿತ್ರದಲ್ಲಿದ್ದಾರೆ. ಅಕ್ಷಯ್ ಕುಮಾರ್ ನಟಿಸಿದ್ದಾರಾ ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ.
  • ಚಾವ: ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಕಥೆ ಡಿಸೆಂಬರ್​ನಲ್ಲಿ ತೆರೆಕಾಣಲಿದೆ. ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 7 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ: 'ಕಿರಿಕ್ ಪಾರ್ಟಿ' ಚೆಲುವೆಯ ಸಿನಿಪಯಣ

ಇದಲ್ಲದೇ 2024ರಲ್ಲಿ ಕಾಂತಾರ ಪ್ರೀಕ್ವೆಲ್​, ಎಮರ್ಜೆನ್ಸಿ, ಮೈದಾನ್, ಕಲ್ಕಿ 2898 ಎಡಿ ಅಂತಹ ಸಿನಿಮಾಗಳು ಬಿಡುಗಡೆ ಆಗಲಿದೆ. ಆದ್ರೆ ಈ ಚಿತ್ರಗಳ ಅಂತಿಮ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ABOUT THE AUTHOR

...view details