ಮಂಗಳೂರು (ದಕ್ಷಿಣ ಕನ್ನಡ): ವೀರು ಟಾಕೀಸ್ ಬ್ಯಾನರ್ನಡಿ ನಿರ್ಮಾಣವಾದ ಮಗನೇ ಮಹಿಷ ಎಂಬ ತುಳು ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ತೆರೆ ಕಾಣಲಿರುವ ಈ ಚಿತ್ರದ ಒಂದು ಹಾಡಿನಲ್ಲಿ ನೂರು ಜನ ಸೆಲೆಬ್ರಿಟಿಗಳನ್ನು ಸೇರಿಸುವ ಅಪರೂಪದ ಪ್ರಯತ್ನ ನಡೆದಿದೆ.
ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ 100ಕ್ಕೂ ಹೆಚ್ಚು ಸೆಲೆಬ್ರಿಟಿಗಳು ತುಳು ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಚಾಲಿಪೋಲಿಲು ಸಿನಿಮಾದ ನಿರ್ದೇಶಕ ವಿರೇಂದ್ರ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಎರಡನೇ ಸಿನಿಮಾ ಇದಾಗಿದೆ. ಕರಾವಳಿ ಜನರ ಮನಗೆದ್ದಿರುವ ಅರವಿಂದ ಬೋಳಾರ್ ಅಭಿನಯದ ಕುರಿತು ಪ್ರೇಕ್ಷಕರು ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಚಿತ್ರದ ವಿಶೇಷ ಎಂದರೆ, ಕನನ ನಿಜನ ಎಂಬ ಹಾಡಿನಲ್ಲಿ ತುಳು ಚಿತ್ರರಂಗದ 100ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಸಂಗೀತವಿದ್ದು, ಸಾಹಿತ್ಯ ರಚನೆಯನ್ನು ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾಡಿದ್ದರೆ, ಪ್ರಶಾಂತ್ ಕಂಕನಾಡಿ ಮತ್ತು ಆಕಾಂಕ್ಷ ಬಾದಾಮಿ ಹಾಡು ಹಾಡಿದ್ದಾರೆ. ತೆಲುಗು ಚಿತ್ರರಂಗದ ಕ್ಯಾಮರಮ್ಯಾನ್ ಮಹೀರೆಡ್ಡಿ ಪಂಡುಗುಲ ಅವರ ಕ್ಯಾಮರಾ ವರ್ಕ್ ಇದ್ದು, ಈ ಸಿನಿಮಾದ ಮೂಲಕ 50ಕ್ಕೂ ಅಧಿಕ ಹೊಸ ಪ್ರತಿಭೆಗಳು ತುಳುಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಸಿನಿಮಾ ಜೂನಿಯರ್ ಆರ್ಟಿಸ್ಟ್ ಕಷ್ಟ ಸುಖ ಬಿಚ್ಚಿಟ್ಟ ಅಧ್ಯಕ್ಷ ಶರಣ್
ಒಟ್ಟಾರೆ ನೂರು ಸೆಲೆಬ್ರಿಟಿಗಳನ್ನಿಟ್ಟುಕೊಂಡು ಸಾಂಗ್ ರೆಡಿ ಮಾಡುವ ಮೂಲಕ ವಿಶೇಷ ಪ್ರಯೋಗ ಮಾಡಿರುವ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.