ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ಸಿನಿಮಾ ಮಾನ್ಸೂನ್ ರಾಗ. ಇದೇ ಡಿಸೆಂಬರ್ 9ರಿಂದ ಝೀ 5ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗಲಿದೆ ಈ ಚಿತ್ರ.
ಮಾನ್ಸೂನ್ ರಾಗ ಸಿನಿಮಾ ಸೆಪ್ಟೆಂಬರ್ 16ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಕೊಂಡಿತ್ತು. ಇದೀಗ ಝೀ 5 ಒಟಿಟಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.
ಡಿ. 9ರಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ ಮಾನ್ಸೂನ್ ರಾಗ ಸಿನಿಮಾ ಸಿನಿಮಾ ರಿಲೀಸ್ ಆಗುವ ಮೊದಲೇ, ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಹಾಡುಗಳು ಕಮಾಲ್ ಮಾಡಿದ್ದವು. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾ ಮಾಡಿದ್ದ ನಿರ್ದೇಶಕ ರವೀಂದ್ರನಾಥ್ ಹಾಗೂ ನಿರ್ಮಾಪಕ ವಿಖ್ಯಾತ್ ಕಾಂಬೋದಲ್ಲಿ ಈ ಸಿನಿಮಾ ಮೂಡಿ ಬಂಡಿದೆ. ಡಾಲಿ ಧನಂಜಯ್, ರಚಿತಾ ರಾಮ್ ಜೊತೆಗೆ ಅಚ್ಯುತ್ ಕುಮಾರ್, ಯಶ ಶಿವಕುಮಾರ್ ನಟಿಸಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಶಾರುಖ್ ಸಿನಿಮಾ ನಿರ್ಮಿಸಲಿದೆ ಹೊಂಬಾಳೆ ಫಿಲ್ಮ್ಸ್: ಕಿಂಗ್ ಖಾನ್ ಜೊತೆ ಸ್ಯಾಂಡಲ್ವುಡ್ ಶೆಟ್ರು
ಹಾಡುಗಳು, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗು ಕ್ಯಾಮರಾ ವರ್ಕ್‌ನಿಂದ ಎಲ್ಲರ ಗಮನ ಸೆಳೆದ ಮಾನ್ಸೂನ್ ರಾಗ ಈಗ ಝೀ 5ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗಲು ರೆಡಿಯಾಗಿದೆ. ಇನ್ನು ಮನೆಯಲ್ಲೇ ಕುಟುಂಬಸ್ಥರೆಲ್ಲರೂ ಒಟ್ಟಿಗೆ ಕುಳಿತು ಮಾನ್ಸೂನ್ ರಾಗ ಸಿನಿಮಾ ನೋಡಬಹುದಾಗಿದೆ.