ಕೊಟ್ಟಾಯಂ (ಕೇರಳ): ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ವಿನೋದ್ ಥಾಮಸ್ (47) ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಟ್ಟಾಯಂನ ಪಂಬಾಡಿಯಲ್ಲಿ ಕಾರೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇವರು 'ಅಯ್ಯಪ್ಪನುಂ ಕೊಶಿಯುಂ', 'ನಾಥೋಲಿ ಒರು ಚೆರಿಯ ಮೀನಲ್ಲಾ' ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸದ್ಯ ವಿನೋದ್ ಥಾಮಸ್ ಮೃತದೇಹವನ್ನು ಕೊಟ್ಟಾಯಂ ಪಂಪಾಡಿ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಾಲಿವುಡ್ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ - ಈಟಿವಿ ಭಾರತ ಕನ್ನಡ
Vinod Thomas found dead: ಮಾಲಿವುಡ್ ನಟ ವಿನೋದ್ ಥಾಮಸ್ ಶವವಾಗಿ ಪತ್ತೆಯಾಗಿದ್ದಾರೆ.
![ಮಾಲಿವುಡ್ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ Mollywood actor Vinod Thomas was found dead](https://etvbharatimages.akamaized.net/etvbharat/prod-images/18-11-2023/1200-675-20058413-thumbnail-16x9-thanu.jpg)
ಮಾಲಿವುಡ್ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ
Published : Nov 18, 2023, 10:59 PM IST