ರಾಂಚಿ: ಮಾಡೆಲ್ ಒಬ್ಬರು ತಾವು ಕೆಲಸ ಮಾಡುವ ಸಂಸ್ಥೆಯ ಮಾಲೀಕನ ಮೇಲೆ ಲವ್ ಜಿಹಾದ್ ಆರೋಪ ಹೊರಿಸಿದ್ದಾರೆ. ತಮ್ಮ (ಆರೋಪಿ) ಹೆಸರನ್ನು ಬದಲಾಯಿಸುವ ಮೂಲಕ ತನ್ನ ಸಂಸ್ಥೆಯ ಮಾಲೀಕರು ಲವ್ ಜಿಹಾದ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದು, ತನ್ನನ್ನು ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ರಾಂಚಿಯ ಮಾಡೆಲಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮಾಡೆಲ್, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಕಂಪನಿಯ ಮಾಲೀಕರೊಬ್ಬರು ತಮ್ಮನ್ನು ಯಶ್ ಎಂದು ಪರಿಚಯಿಸಿಕೊಂಡು, ಲವ್ ಜಿಹಾದ್‌ಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರದಂದು ಯುವತಿ ಆತನ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ತನ್ವೀರ್ ತನಗೆ ಮತಾಂತರ ಮತ್ತು ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಮಾಡೆಲ್ ಹೇಳಿಕೊಂಡಿದ್ದಾರೆ.
ಮಾಲೀಕನ ಹೆಸರು ತಿಳಿದಾಗ, ಭಾಗಲ್ಪುರಕ್ಕೆ ಬಂದು ತನ್ನ ವೃತ್ತಿಜೀವನದ ಸಲುವಾಗಿ ಮುಂಬೈಗೆ ಪ್ರಯಾಣ ಬೆಳೆಸಿದೆ. ಆದರೆ, ಸಂಸ್ಥೆಯ ಮಾಲೀಕ ಮುಂಬೈಗೆ ಬಂದು ನನ್ನನ್ನು ಕೊಲ್ಲಲು ಪ್ರಯತ್ನಿಸಿದನು ಎಂದು ಸಹ ಆರೋಪಿಸಿದ್ದಾರೆ. ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅವರು, ''ನಾನು ಸಾಯುತ್ತೇನೆ ಆದರೆ ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳೇ ನನ್ನನ್ನು ಈ ರಾಕ್ಷಸನಿಂದ ರಕ್ಷಿಸಿ, ನಾಳೆ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ, ನಾನು ಹಿಂದೂ, ಎಂದಿಗೂ ಅನ್ಯ ಧರ್ಮದವರನ್ನು ಮದುವೆ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
ತಾನು ರಾಂಚಿಯ ಒಂದು ಸಂಸ್ಥೆಗೆ ಸೇರಿ ಒಂದೂವರೆ ವರ್ಷ ಕೆಲಸ ಮಾಡಿದ್ದು, ತನ್ವೀರ್‌ನಿಂದ ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿದ್ದೇನೆ. ಆ ಮಾಲೀಕ ತನ್ನ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ, ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಮಾಡೆಲ್ ಆರೋಪ ಮಾಡಿದ್ದಾರೆ.