ಕರ್ನಾಟಕ

karnataka

ETV Bharat / entertainment

ರಾಜಮೌಳಿಯವ್ರಿಗೆ ಕರೆ ಮಾಡಿದ್ರೆ ಫೋನ್​​ ಸ್ವಿಚ್ ಆಫ್: ಎಂ ಎಂ ಕೀರವಾಣಿ ಹೀಗಂದಿದ್ದೇಕೆ - Rajamouli mahesh movie

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ, ನಿರ್ದೇಶಕ ಎಸ್ ಎಸ್​ ರಾಜಮೌಳಿ ಅವರು ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ.

Rajamouli mahesh babu movie
ರಾಜಮೌಳಿ ಮಹೇಶ್​​ ಬಾಬು ಸಿನಿಮಾ

By ETV Bharat Karnataka Team

Published : Jan 9, 2024, 8:41 AM IST

ಭಾರತೀಯ ಚಿತ್ರರಂಗದ ದೂರದೃಷ್ಟಿಯ ನಿರ್ದೇಶಕ ಎಸ್ ಎಸ್​ ರಾಜಮೌಳಿ ಅವರ ಆರ್​​ಆರ್​ಆರ್​ ಸಿನಿಮಾ ತೆರೆಕಂಡು ಎರಡು ವರ್ಷ ಆಗುತ್ತಿದೆ. ಮಾರ್ಚ್​ 24ಕ್ಕೆ ಈ ಬ್ಲಾಕ್​ಬಸ್ಟರ್ ಸಿನಿಮಾ ಎರಡು ವರ್ಷ ಪೂರೈಸಲಿದೆ. ಆರ್​ಆರ್​ಆರ್ ಬಳಿಕ ರಾಜಮೌಳಿ ಅವರು ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲೊರಟಿರುವುದು ನಿಮಗೆ ತಿಳಿದೇ ಇದೆ. ಆದ್ರೆ ಈ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಚಿತ್ರತಂಡ ಮೌನ ಮುಂದುವರಿಸಿದೆ. ಅದಾಗ್ಯೂ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಎಂ ಎಂ ಕೀರವಾಣಿ ಸಂಗೀತ ಒದಗಿಸಿರುವ 'ನಾ ಸಾಮಿ ರಂಗ' ಇದೇ ಸಂಕ್ರಾಂತಿಗೆ ಚಿತ್ರಮಂದಿರ ಪ್ರವೇಶಿಸಲಿರುವ ಹಿನ್ನೆಲೆ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಮಾಧ್ಯಮಗಳೊಂದಿಗಿನ ಸಂವಾದದ ಸಂದರ್ಭ, ಅವರಿಗೆ ರಾಜಮೌಳಿ-ಮಹೇಶ್ ಬಾಬು ಸಿನಿಮಾದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ತಮ್ಮ ಬುದ್ಧಿವಂತಿಕೆಯ ಉತ್ತರ ನೀಡಿ ಪ್ರಶ್ನೆಗಳಿಂದ ತಪ್ಪಿಸಿಕೊಂಡರು.

ಈ ಚಿತ್ರದ ಬಗ್ಗೆ ಕೇಳಲು ರಾಜಮೌಳಿ ಅವರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. "ಮಹೇಶ್​ ಬಾಬು ಚಿತ್ರದ ಬಗ್ಗೆ ತಿಳಿಯಬೇಕಾದರೆ, ರಾಜಮೌಳಿಯವರಿಗೆ ಫೋನ್ ಮಾಡಿ ಕೇಳಬೇಕು. ಅವರಿಗೆ ಕರೆ ಮಾಡಿದರೆ ಫೋನ್​​ ಸ್ವಿಚ್ ಆಫ್ ಆಗಿದೆ. ಆ ಪ್ರೊಜೆಕ್ಟ್​ ಬಗ್ಗೆ ಇನ್ನೂ ಯಾವ ಮಾಹಿತಿ ನನ್ನವರೆಗೆ ಬಂದಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಎಂಗೇಜ್​ಮೆಂಟ್​ ಗಾಸಿಪ್​! ಸತ್ಯಾಂಶವೇನು?

ಪವನ್ ಕಲ್ಯಾಣ್ ನಟನೆಯ ಹರಿ ಹರ ವೀರ ಮಲ್ಲು ಸಿನಿಮಾ: ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಸಂಗೀತ ನಿರ್ದೇಶಕರು ಮಾತನಾಡಿದರು. ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಮಾಡುತ್ತಿರುವ ಸಿನಿಮಾ ಮುಂದೆ ಸಾಗುತ್ತಿದೆ. ಪವನ್ ಕಲ್ಯಾಣ್ ಹರಿ ಹರ ವೀರ ಮಲ್ಲು ಸಿನಿಮಾ ಕೆಲಸಗಳು ಕೂಡ ಸಾಗಿದೆ. ಈವರೆಗೆ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿದ್ದೇವೆ. ಇತ್ತೀಚೆಗಷ್ಟೇ ಚಿರಂಜೀವಿ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಅದಕ್ಕೆ ಸಂಗೀತದ ಕೆಲಸ ಕೂಡ ಆರಂಭವಾಗಿದೆ ಎಂದು ತಿಳಿಸಿದರು. ನಾಗಾರ್ಜುನ ಅವರ 'ನಾ ಸಾಮಿ ರಂಗ' ಚಿತ್ರದ ಸಂಗೀತ ತೃಪ್ತಿ ತಂದಿದೆ ಎಂದು ಕೀರವಾಣಿ ತಿಳಿಸಿದರು. ಸಿನಿಮಾ ಇದೇ ಜನವರಿ 14ರಂದು ತೆರೆಗಪ್ಪಳಿಸಲಿದೆ. ಸಂಕ್ರಾತಿ ವೇಳೆಗೆ ಕೆಲ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ:'ಬಿಗ್ ಬಾಸ್ ಸೀಸನ್ 10ರಲ್ಲಿ ಬೆಂಕಿ ಬಂತು': ತನಿಷಾಗಾಗಿ ಹಾಡು, ಅಭಿಮಾನಿ ಬಳಗ

ABOUT THE AUTHOR

...view details