ಕರ್ನಾಟಕ

karnataka

ETV Bharat / entertainment

ಪ್ಯಾನ್​ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಜಮೀರ್​ ಪುತ್ರನ ಎಂಟ್ರಿ..ಚೊಚ್ಚಲ ಚಿತ್ರದಲ್ಲೇ ಭರವಸೆ - MLA Zameer son Zaid

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್​ ಬಿಡುಗಡೆ ಆಗಿದೆ.

Banaras movie released
ಬನಾರಸ್​ ಸಿನಿಮಾ ಬಿಡುಗಡೆ

By

Published : Nov 4, 2022, 6:37 PM IST

ಸ್ಯಾಂಡಲ್​ವುಡ್​ಗೆ ರಾಜಕಾರಣಿಗಳ ಮಕ್ಕಳ ಎಂಟ್ರಿ ಆಗುತ್ತಿದೆ. ಈಗಾಗಲೇ ಹೆಚ್​.ಡಿ. ಕುಮಾರಸ್ವಾಮಿ, ರೇವಣ್ಣ, ಚೆಲುವರಾಯಸ್ವಾಮಿ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್, ಬೆಲ್ ಬಾಟಂ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ.

ಹೌದು, ಝೈದ್ ಖಾನ್ ನಾಯಕನಾಗಿ ನಟಿಸಿರುವ 'ಬನಾರಸ್' ಚಿತ್ರ ಇಂದು ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ‌ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಝೈದ್ ಖಾನ್, ಸೋನಲ್​, ಸುಜಯ್ ಶಾಸ್ತ್ರಿ, ದೇವರಾಜ್​, ಅಚ್ಯುತ್ ಕುಮಾರ್ ಮೊದಲಾದವರ ತಾರಾ ಬಳಗ ಗೊಂದಿರುವ ಬನಾರಸ್​ ಸಿನಿಮಾವನ್ನು ಜಯತೀರ್ಥ ನಿರ್ದೇಶಿಸಿದ್ದು, ಅಜನೀಶ್ ಬಿ. ಲೋಕನಾಥ್ ಸಂಗೀತವಿದೆ.

ಬನಾರಸ್​ ಸಿನಿಮಾ ಬಿಡುಗಡೆ

ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ್ ಸಿಂಹಗೆ (ಝೈದ್ ಖಾನ್) ತಂದೆ ಅಜಯ್ ಸಿಂಹನೇ (ದೇವರಾಜ್​) ಜಗತ್ತು. ಈ ಜಗತ್ತಿಗೆ ದನಿ (ಸೋನಲ್) ಎಂಟ್ರಿ ಆಗುತ್ತಾರೆ. ಬಳಿಕ ಸಿದ್ದಾರ್ಥ್ ಜಗತ್ತು ಬದಲಾಗುತ್ತದೆ. ಟೈಮ್ ಟ್ರಾವೆಲಿಂಗ್ ಥೀಮ್​ ಉಳ್ಳ ಈ ಸಿನಿಮಾ ವಿಭಿನ್ನವಾಗಿದ್ದು ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬೆಳಕಿನ ಕವಿತೆ, ಮಾಯಾ ಗಂಗೆ, ಟ್ರೋಲ್​ ಸಾಂಗ್​ಗಳು ಪ್ರೇಕ್ಷಕರ ಮನ ಗೆದ್ದಿದ್ದು, ಚಿತ್ರ ಎಷ್ಟೆ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:'ಉತ್ತರಕಾಂಡ'ದಲ್ಲಿ ಡಾಲಿ ಜೊತೆ ಮೋಹಕ ತಾರೆ ರಮ್ಯಾ ರೊಮ್ಯಾನ್ಸ್

ABOUT THE AUTHOR

...view details