ಕರ್ನಾಟಕ

karnataka

ETV Bharat / entertainment

ಎಂ.ಜೆ ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಶರಣ್, ಸಪ್ತಮಿ ಗೌಡ - Saptami Gowda

ಉದ್ಯಮಿ ಅನಿಲ್ ಕುಮಾರ್ ಎಂಬುವವರು ಎಂ.ಜೆ ಪ್ರೊಡಕ್ಷನ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದು, ಶರಣ್ ಮತ್ತು ಸಪ್ತಮಿ ಗೌಡ ಉದ್ಘಾಟಿಸಿದರು.

MJ Production House inaugurated
ಎಂ.ಜೆ ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಶರಣ್, ಸಪ್ತಮಿ ಗೌಡ

By

Published : Mar 10, 2023, 1:15 PM IST

ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಅದ್ಧೂರಿ ಮೇಕಿಂಗ್ ಜೊತೆಗೆ ಉತ್ತಮ ಕಥಾಹಂದರವುಳ್ಳ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದೀಗ ಅನಿಲ್ ಕುಮಾರ್ ಎಂಬುವವರು ತಮ್ಮ ಸಾರಥ್ಯದ ಎಂ.ಜೆ ಪ್ರೊಡಕ್ಷನ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಬೆಂಗಳೂರಿನಲ್ಲಿ ಎಂ.ಜೆ ಪ್ರೊಡಕ್ಷನ್ ಸಂಸ್ಥೆಯನ್ನು ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್ ಹಾಗೂ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಉದ್ಘಾಟಿಸಿದರು. ಶರಣ್ ಮತ್ತು ಸಪ್ತಮಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್ ಸುಬ್ರಹ್ಮಣ್ಯ, ನಿರ್ದೇಶಕ ಹರಿಸಂತು,‌ ಮುಖೇಶ್ ಕುಮಾರ್, ಸತೀಶ್ ಕುಮಾರ್ ಸಾಥ್ ನೀಡಿದರು.

ಎಂ.ಜೆ ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಶರಣ್, ಸಪ್ತಮಿ ಗೌಡ

ಎಂ.ಜೆ ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ನಟ ಶರಣ್, ನನ್ನನ್ನು ಆಹ್ವಾನಿಸಲು ಎರಡು ಗಂಟೆ ಪ್ರಯಾಣ ಮಾಡಿಕೊಂಡು ಬರುವುದು ಬೇಡ ಎಂದೆ. ಆದರೂ ಅನಿಲ್ ಕುಮಾರ್ ಅವರು ಖುದ್ದಾಗಿ ಬಂದು ಸಮಾರಂಭಕ್ಕೆ ಆಹ್ವಾನಿಸಿದರು. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. ಅವರ ಅವ್ಯಾನಾ ರೆಸಾರ್ಟ್ ಬಹಳ ಚೆನ್ನಾಗಿದೆ. ಎಂ.ಜೆ ಪ್ರೊಡಕ್ಣನ್ ಮೂಲಕ ಕನ್ನಡ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ, ಎಲ್ಲವೂ ಒಳ್ಳೆಯದಾಗಲಿ ಎಂದರು.

ಕಾಂತಾರ ನಟಿ ಸಪ್ತಮಿ ಗೌಡ ಮಾತನಾಡಿ, ಅವ್ಯಾನಾ ರೆಸಾರ್ಟ್ ನೋಡಿ ಬಹಳ ಖುಷಿ ಆಯಿತು. ಅದರಲ್ಲೂ ನಾನು ಈಜುಗಾರ್ತಿ ಆಗಿರುವುದರಿಂದ, ಇಲ್ಲಿ ನಿರ್ಮಾಣವಾಗಿರುವ ವಾಟರ್ ಫಾಲ್ಸ್ ಬಹಳ ಹಿಡಿಸಿತು. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದರು.

'ಮಲಯಾಳಂ ಸಿನಿಮಾ ನಿರ್ಮಿಸಿದ್ದೇನೆ': ಸ್ಯಾಂಡಲ್​ವುಡ್​ನಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಕನಸು ಹೊತ್ತಿರುವ ಎಂ.ಜೆ ಪ್ರೊಡಕ್ಷನ್ ಮಾಲೀಕರಾದ ಅನಿಲ್‌ ಕುಮಾರ್ ಮಾತನಾಡಿ, ನಾನು ಮೂಲತಃ ಕೇರಳದವನು. ಮಲೆಯಾಳಂನಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ಎಂ.ಜೆ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಇದರ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುತ್ತೇನೆ ಎಂದರು.

ಅವ್ಯಾನಾ ರೆಸಾರ್ಟ್:ಬೆಂಗಳೂರಿನ ಆನೇಕಲ್ ಸಮೀಪ ಅವ್ಯಾನಾ ಎಂಬ ಸುಸಜ್ಜಿತ ರೆಸಾರ್ಟ್ ನಿರ್ಮಾಣ ಆಗಿದೆ. ಎಲ್ಲಾ ಅನುಕೂಲವಿರುವ ರೆಸಾರ್ಟ್ ಇದು. ನಮ್ಮ ಅವ್ಯಾನಾ ರೆಸಾರ್ಟ್​​ನಲ್ಲಿ ಆಡಂಬರ, ಅತುಲ್ಯಂ ಎಂಬ ಸಭಾಂಗಣವಿದೆ. ಸ್ವಾದಂ ಹೆಸರಿನ ರೆಸ್ಟೋರೆಂಟ್ ಇದೆ. ಏಷ್ಯಾದಲ್ಲೇ ಅತೀ ಉದ್ದವಾದ ವಾಟರ್ ಫಾಲ್ಸ್ ನಿರ್ಮಿಸಲಾಗಿದೆ. ಇಂಡಿಯಾದಲ್ಲೇ ದೊಡ್ಡದಾದ ಫುಟ್ಬಾಲ್ ಹಾಗೂ ಕ್ರಿಕೆಟ್ ಟರ್ಫ್ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ನಮ್ಮ "ಅವ್ಯಾನಾ" ರೆಸಾರ್ಟ್ ನಲ್ಲಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ವಿಶೇಷವಾಗಿ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಕೂಲವಿದ್ದು, ಚಿತ್ರರಂಗದವರು ಬಳಸಿಕೊಳ್ಳಬಹುದು ಎಂದು ಎಂ.ಜೆ ಪ್ರೊಡಕ್ಷನ್ ಹಾಗೂ ಅವ್ಯಾನಾ ರೆಸಾರ್ಟ್ ಫೌಂಡರ್ ಅನಿಲ್ ಕುಮಾರ್ ಮಾಹಿತಿ ನೀಡಿದರು. ಶೂಟಿಂಗ್ ಅಂತಾ ಹೊರರಾಜ್ಯ ಹಾಗೂ ಹೊರದೇಶಕ್ಕೆ ಹೋಗುವ ಬದಲು ಸದ್ಯ ಬೆಂಗಳೂರಿನಲ್ಲಿರುವ ಈ ಅವ್ಯಾನಾ ರೆಸಾರ್ಟ್​​ನಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿರೋದು ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗಲಿದೆ.

ಇದನ್ನೂ ಓದಿ:ಪ್ರತಿಷ್ಟಿತ ಆಸ್ಕರ್​ ಸಮಾರಂಭಕ್ಕೆ ಕ್ಷಣಗಣನೆ: ಅಮೆರಿಕಕ್ಕೆ ತೆರಳಿದ ದೀಪಿಕಾ ಪಡುಕೋಣೆ

ABOUT THE AUTHOR

...view details