ಕರ್ನಾಟಕ

karnataka

ETV Bharat / entertainment

ಹಿರಿಯ ನಟ ಮಿಥುನ್​ ಚಕ್ರವರ್ತಿಗೆ ಮೂತ್ರಪಿಂಡದಲ್ಲಿ ಕಲ್ಲು, ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ - ಮಿಥುನ್​ ಚಕ್ರವರ್ತಿಗೆ ಮೂತ್ರಪಿಂಡದಲ್ಲಿ ಕಲ್ಲು

ಬಾಲಿವುಡ್​ ಹಿರಿಯ ನಟ ಮಿಥುನ್​ ಚಕ್ರವರ್ತಿ ಅವರಿಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಕಾಣಿಸಿಕೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಯ ಬಳಿಕ ಮುಂಬೈಗೆ ವಾಪಸ್​ ಆಗಿದ್ದಾರೆ..

mithun-chakrabortys
ನಟ ಮಿಥುನ್​ ಚಕ್ರವರ್ತಿ

By

Published : May 2, 2022, 3:02 PM IST

Updated : May 2, 2022, 3:15 PM IST

ಬಾಲಿವುಡ್​ ಹಿರಿಯ ನಟ, ದಾದಾ ಖ್ಯಾತಿಯ ಮಿಥುನ್ ಚಕ್ರವರ್ತಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿವೆ. ಅಲ್ಲದೇ, ಇದು ಅವರ ಅಭಿಮಾನಿಗಳಲ್ಲಿ ಕಳವಳ ಹೆಚ್ಚಿಸಿದೆ.

80ರ ದಶಕದ ಡ್ಯಾನ್ಸಿಂಗ್​ ಸ್ಟಾರ್​ ಆಗಿದ್ದ ನಟ ಮಿಥುನ್​ ಚಕ್ರವರ್ತಿ ಅವರಿಗೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಅವರ ಪುತ್ರನೇ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಮಿಥುನ್ ಚಕ್ರವರ್ತಿ ಅವರ ಅನಾರೋಗ್ಯದ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅವರ ಪುತ್ರ ಮಿಮೋಹ್ ತಂದೆಯ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ತಮ್ಮ ತಂದೆ ಆರೋಗ್ಯವಾಗಿದ್ದಾರೆ. ಮೂತ್ರಪಿಂಡದಲ್ಲಿನ ಕಲ್ಲು ತೆಗೆಸಲು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಸಕ್ರಿಯ ರಾಜಕಾರಣಿಯಾಗಿರುವ ಮಿಥುನ್​ ಚಕ್ರವರ್ತಿ ಅವರ ಆರೋಗ್ಯ ಚೇತರಿಸಿಕೊಳ್ಳಲು ಪಕ್ಷದ ನಾಯಕರು ಶುಭ ಹಾರೈಸಿದ್ದಾರೆ. ಮುಖಂಡ ಸಂಜಯ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಅನುಪಮ್ ಹಜ್ರಾ ಬಂಗಾಳಿ ಭಾಷೆಯಲ್ಲಿ ಟ್ವೀಟ್​ ಮಾಡಿ, 'ಬೇಗ ಗುಣಮುಖರಾಗಿ ಮಿಥುನ್​ ದಾದಾ ಎಂದು ಬರೆದಿದ್ದಾರೆ. ಇನ್ನು ಮಿಥುನ್ ಚಕ್ರವರ್ತಿ ಅವರು ವಿವೇಕ್ ರಂಜನ್ ಅಗ್ನಿಹೋತ್ರಿಯವರ 'ದಿ ಕಾಶ್ಮೀರ್ ಫೈಲ್ಸ್'​ ಸಿನಿಮಾದಲ್ಲಿ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು.

ಓದಿ:ಸಾವಿರ ಕೋಟಿ ಕ್ಲಬ್​​ ಸೇರಿದ ಕೆಜಿಎಫ್​​ 2: ಹಿಂದಿ ಅವತರಣಿಕೆಯಲ್ಲೇ ₹416 ಕೋಟಿ ಗಳಿಕೆ

Last Updated : May 2, 2022, 3:15 PM IST

ABOUT THE AUTHOR

...view details