ಬೆಂಗಳೂರು: ಅಕ್ಟೋಬರ್ 6ರಂದು ಅಂದರೆ ಕಳೆದ ಶುಕ್ರವಾರ ಬಾಲಿವುಡ್ನಲ್ಲಿ ಬಹುನಿರೀಕ್ಷಿತ ಚಿತ್ರಗಳಾದ 'ಮಿಷನ್ ರಾಣಿಗಂಜ್' ಮತ್ತು 'ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರಗಳು ಬಿಡುಗಡೆಯಾಗಿದ್ದು, ಇದೀಗ ಎರಡು ಚಿತ್ರಗಳು ಭಾರಿ ಪೈಪೋಟಿ ನಡೆಸುತ್ತಿದೆ. ನೈಜ ಕಥೆ ಮತ್ತು ಯುವ ಪೀಳಿಗೆಯ ಕಥೆಯನ್ನು ಹೊಂದಿರುವ ಈ ಚಿತ್ರಗಳು ಸದ್ಯ ಗಲ್ಲ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಅಕ್ಷಯ್ ಕುಮಾರ್ ಅವರು 'ಮಿಷನ್ ರಾಣಿಗಂಜ್: ದಿ ಗ್ರೇಟ್ ರೆಸ್ಕ್ಯೂ' ಹಾಗೂ ಭೂಮಿ ಪಡ್ನೇಕರ್ ಅಭಿಯನದ 'ಥ್ಯಾಂಕ್ ಯು ಫಾರ್ ಕಮ್ಮಿಂಗ್' ಎರಡು ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
1989ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್ ಕಲ್ಲಿದ್ದಲ್ಲು ಗಣಿಯಲ್ಲಿ ನಡೆದ ನೈಜ ಕಥೆ ಹೊಂದಿರುವ 'ಮಿಷನ್ ರಾಣಿಗಂಜ್'ಗೆ ನಿರ್ದೇಶಕ ಟಿನು ಸುರೇಶ್ ದೇಸಾಯಿ ಆಕ್ಷ್ಯನ್ ಕಟ್ ಹೇಳಿದ್ದಾರೆ. ಈ ಚಿತ್ರವೂ ದೇಶಿಯ ಬಾಕ್ಸ್ ಆಫೀಸ್ನಲ್ಲಿ 2.8 ಕೋಟಿ ಗಳಿಕೆ ಕಂಡಿದೆ ಎಂದು ಇಂಡಸ್ಟ್ರಿ ಟ್ರಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಚಿತ್ರ ಬಿಡುಗಡೆಯಾದ ಆರನೇ ದಿನದಲ್ಲಿ 1.43 ಕೋಟಿ ಲಾಭ ಕಂಡಿದೆ ಎಂದು ವರದಿಯಾಗಿದೆ.