ಕರ್ನಾಟಕ

karnataka

ETV Bharat / entertainment

ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹೊಸ ಚಲನಚಿತ್ರ ನಿರ್ಮಾಣ ನೀತಿ: ಸಚಿವ ಅನುರಾಗ್ ಠಾಕೂರ್​​ - etv bharat kannada

Anurag Thakur in IFFI 2023: ಶೀಘ್ರದಲ್ಲೇ ಕೇಂದ್ರ ಸರ್ಕಾರ ಹೊಸ ಚಲನಚಿತ್ರ ನಿರ್ಮಾಣ ನೀತಿ ಪ್ರಕಟಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ತಿಳಿಸಿದರು.

Minister Anurag Thakur said government will announce new film making policy
ಶೀಘ್ರದಲ್ಲೇ ಸರ್ಕಾರದಿಂದ ಹೊಸ ಚಲನಚಿತ್ರ ನಿರ್ಮಾಣ ನೀತಿ ಪ್ರಕಟ: ಸಚಿವ ಅನುರಾಗ್ ಠಾಕೂರ್​​

By PTI

Published : Nov 21, 2023, 11:15 AM IST

ಪಣಜಿ (ಗೋವಾ): ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹೊಸ ಚಲನಚಿತ್ರ ನಿರ್ಮಾಣ ನೀತಿಯನ್ನು ಪ್ರಕಟಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಹೇಳಿದ್ದಾರೆ. ಪ್ರತಿಷ್ಠಿತ 54ನೇ ವರ್ಷದ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ 2023ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ವಿದೇಶಿ ಸಿನಿಮಾಗಳ ನಿರ್ಮಾಣಕ್ಕೆ ಪ್ರೋತ್ಸಾಹ ಹೆಚ್ಚಿಸುವುದಾಗಿ ಘೋಷಿಸಿದರು.

"ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಯಾಗಲಿದೆ. ಈ ವರ್ಷ ಫಿಲ್ಮ್​ ಬಜಾರ್​ಗೆ ಚಲನಚಿತ್ರ ಆಯ್ಕೆಯು ಚೆನ್ನಾಗಿ ನಡೆದಿದೆ. ಫೀಚರ್​ ಫಿಲ್ಮ್ಸ್​, ಸಾಕ್ಷ್ಯಚಿತ್ರಗಳು, ಹಾರರ್​ ಸಿನಿಮಾಗಳು ಹೀಗೆ ಹಲವು ವೈವಿಧ್ಯಮಯ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿವೆ" ಎಂದು ಮಾಹಿತಿ ನೀಡಿದರು.

"ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ವಾರ್ಷಿಕ 20 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸವು ದೇಶದಲ್ಲಿ ವಿವಿಧ ರೀತಿಯ ಆಸಕ್ತಿಯನ್ನು ಸೃಷ್ಟಿಸುತ್ತಿದೆ. ಪ್ರಸಕ್ತ ಚಲನಚಿತ್ರೋತ್ಸವದಲ್ಲಿ 78 ದೇಶಗಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ವರ್ಷ ಶೇ.3ರಷ್ಟು ಹೆಚ್ಚು ಸಿನಿಮಾಗಳನ್ನು ಚಲನಚಿತ್ರೋತ್ಸವದಲ್ಲಿ ವೀಕ್ಷಿಸಬಹುದು" ಎಂದು ತಿಳಿಸಿದರು.

"ಐಎಫ್​ಎಫ್​ಐನಲ್ಲಿ 75ನೇ ಕ್ರಿಯೇಟಿವ್​ ಮೈಂಡ್ಸ್​ ಆಫ್​ ಟುಮಾರೊ ಸೆಕ್ಷನ್​ ಈ ವರ್ಷ ಮೂರನೇ ಆವೃತ್ತಿಯನ್ನು ಪ್ರವೇಶಿಸಲಿದೆ. ಈ ವಿಭಾಗದಲ್ಲಿ ಉದಯೋನ್ಮುಖ ಪ್ರತಿಭೆಗಳು ವಿಶ್ವದ ಅತ್ಯುತ್ತಮ ನಿರ್ದೇಶಕರು ನೀಡುವ ತರಬೇತಿಗಳಿಗೆ ಹಾಜರಾಗಲು ಮತ್ತು ಅವರ ಮಾರ್ಗದರ್ಶನದಲ್ಲಿ ಕಲಿಯಲು ಅವಕಾಶವನ್ನು ಪಡೆಯುತ್ತಾರೆ. ಈ ಬಾರಿ 600 ಯುವಕರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 75 ಮಂದಿ ಆಯ್ಕೆಯಾಗಿದ್ದಾರೆ" ಎಂದರು.

"ಕಳೆದ ವರ್ಷ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಕೇಂದ್ರ ಸರ್ಕಾರವು ಭಾರತದಲ್ಲಿ ವಿದೇಶಿ ಚಲನಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಿತು. ವಿದೇಶಿ ಚಲನಚಿತ್ರ ತಯಾರಕರಿಗೆ ಭಾರತವನ್ನು ನೆಚ್ಚಿನ ತಾಣವನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಿಸಲಾಗಿದೆ. ಭಾರತದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಮತ್ತು ದೊಡ್ಡ ಬಜೆಟ್ ಅಂತರರಾಷ್ಟ್ರೀಯ ಯೋಜನೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಭಾರತದಲ್ಲಿ ವಿದೇಶಿ ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಧನವನ್ನು ಹೆಚ್ಚಿಸುವುದಾಗಿ ತಿಳಿಸಲು ನನಗೆ ಸಂತೋಷವಾಗಿದೆ" ಎಂದು ಹೇಳಿದರು.

"ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಉತ್ತೇಜನೆಗೆ ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೊದಲ ಬಾರಿಗೆ ಐಎಫ್​ಎಫ್​ಐನಲ್ಲಿ ಅತ್ಯುತ್ತಮ ವೆಬ್​ಸರಣಿ ಓಟಿಟಿ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಕೋವಿಡ್​ 19 ಸಮಯದಲ್ಲಿ ಎಲ್ಲಾ ಥಿಯೇಟರ್​ಗಳು, ಸಿನಿಮಾ ಕೆಲಸಗಳು ನಿಂತಿದ್ದವು. ಈ ವೇಳೆ ಪ್ರೇಕ್ಷಕರನ್ನು ರಂಜಿಸಿದ ಓಟಿಟಿ ವೇದಿಕೆಗೆ ವಿಶೇಷ ಮಾನ್ಯತೆಯನ್ನು ನೀಡಲಾಗಿದೆ. ಓಟಿಟಿ ಪ್ರಸ್ತುತ ಶೇಕಡಾ 28ರ ದರದಲ್ಲಿ ಬೆಳೆಯುತ್ತಿದ್ದೇವೆ. ಹಾಗಾಗಿ ಈ ಬಾರಿ ಓಟಿಟಿಗೂ ಪ್ರಶಸ್ತಿಯನ್ನು ಕೊಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಾಧುರಿ ದೀಕ್ಷಿತ್​ಗೆ 'ವಿಶೇಷ ಮನ್ನಣೆ'

ABOUT THE AUTHOR

...view details