ಕರ್ನಾಟಕ

karnataka

ETV Bharat / entertainment

'ಅವಕಾಶ ನೀಡಿದಕ್ಕಾಗಿ ಥ್ಯಾಂಕ್ಯೂ..' ಬಹುನಿರೀಕ್ಷಿತ 'ಕಬ್ಜ' ಚಿತ್ರದ ಬಗ್ಗೆ ಶಿವಣ್ಣ ಹೀಗಂದ್ರು.. - ಈಟಿವಿ ಭಾರತ ಕನ್ನಡ

ಪ್ಯಾನ್​ ಇಂಡಿಯಾ ಸಿನಿಮಾ 'ಕಬ್ಜ'ದ ಡಬ್ಬಿಂಗ್​ ಕೆಲಸ ಶುರುವಾಗಿದೆ. ಸಿನಿಮಾದ ಟ್ರೇಲರ್​ ನೋಡಿದ ಶಿವಣ್ಣ ಹಾಡಿಹೊಗಳಿದ್ದಾರೆ.

ಶಿವಣ್ಣ
ಶಿವಣ್ಣ

By

Published : Mar 6, 2023, 4:42 PM IST

Updated : Mar 6, 2023, 5:10 PM IST

ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ 'ಕಬ್ಜ'

ಸ್ಯಾಂಡಲ್​ವುಡ್​ ಇದೀಗ ಯಶಸ್ಸಿನ ಉತ್ತುಂಗದಲ್ಲಿದೆ. ಇಡೀ ಭಾರತೀಯ ಚಿತ್ರರಂಗದ ಗಮನ ನಮ್ಮ ಕನ್ನಡ ಸಿನಿ ಲೋಕದ ಮೇಲಿದೆ. ಕೆಜಿಎಫ್​, ಕಾಂತಾರಗಳಂತಹ ಚಿತ್ರಗಳ ಬಳಿಕ ಸ್ಯಾಂಡಲ್​ವುಡ್​ ಲೆವೆಲ್​ ಶಿಖರಕ್ಕೇರಿದೆ. ಇದೀಗ ಈ ಸಿನಿಮಾಗಳ ಸಾಲಿಗೆ ಬಹುನಿರೀಕ್ಷಿತ 'ಕಬ್ಜ' ಚಿತ್ರ ಸೇರ್ಪಡೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಇಡೀ ಸೌತ್ ಚಿತ್ರರಂಗ ಎದುರು ನೋಡುತ್ತಿದ್ದ ಹೈ ವೋಲ್ಟೇಜ್ 'ಕಬ್ಜ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಮಿಲಿಯನ್​ಗಟ್ಟಲೆ ಸಿನಿಪ್ರಿಯರು ನೋಡಿ 'ವಾಹ್​' ಅಂತಿದ್ದಾರೆ.

ಕೇವಲ ಟೀಸರ್​ನಿಂದಲೇ ಕಿಚ್ಚು ಹಚ್ಚಿದ್ದ ಕಬ್ಜ, ಟ್ರೇಲರ್​ನಲ್ಲಿ ಮೈ ರೋಮಾಂಚನಗೊಳ್ಳುವಂತೆ ಮಾಡಿದೆ. ಜೊತೆಗೆ ರಿಯಲ್​​ ಸ್ಟಾರ್​ ಉಪೇಂದ್ರ ಅವರ ಸ್ಟೈಲು, ಗತ್ತು ನೆಕ್ಸ್ಟ್​ ಲೆವೆಲ್​ನಲ್ಲಿದೆ. ಕೆಲವು ದಿನಗಳ ಹಿಂದೆ ಸಿನಿಮಾದ ಟ್ರೇಲರ್​ ಅನ್ನು ಬಾಲಿವುಡ್​ನ ಬಿಗ್​ ಬಿ ಅಮಿತಾಬ್ ಬಚ್ಚನ್​ ಲಾಂಚ್​ ಮಾಡಿದ್ದು, ಅವರು ಕೂಡ ಮೆಚ್ಚಿಕೊಂಡಿದ್ದರು. ಇದೀಗ ಸಿನಿಮಾದ ಡಬ್ಬಿಂಗ್ ಕೆಲಸ​ ಶುರುವಾಗಿದೆ. ಉಪ್ಪಿಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.

ಹೌದು. ಶಿವರಾಜ್ ಕುಮಾರ್ ಮತ್ತು ಉಪೇಂದ್ರ ತಮ್ಮ ಪಾತ್ರಗಳಿಗೆ ಧ್ವನಿ ನೀಡುತ್ತಿದ್ದಾರೆ. ಮತ್ತೊಂದೆಡೆ ಕಬ್ಜ ಹಿಂದಿ ಟ್ರೇಲರ್​ ನೋಡಿದ ಬಾಲಿವುಡ್ ಸಿನಿಪ್ರಿಯರು ಫುಲ್​ ಖುಷ್​ ಆಗಿದ್ದಾರೆ. ಮೊದಲು ಹಿಂದಿ ಭಾಷೆಯಲ್ಲಿಯೇ ಟ್ರೇಲರ್​ ರಿಲೀಸ್​ ಆಗಿದ್ದು ಬಾಲಿವುಡ್ ಸಿನಿಪ್ರಿಯರ ಹೃದಯವನ್ನೇ ಕಬ್ಜ ಮಾಡಿದೆ.​ ಜೊತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಪ್ರೇಮಿಗಳ ಮನ ಗೆಲ್ಲುತ್ತಿದೆ. ಟ್ರೇಲರ್​ನಿಂದಲೇ ಸಿನಿಮಾದ ಕ್ರೇಜ್​ ನೋಡಿ ನಿರ್ದೇಶಕ ಆರ್ ಚಂದ್ರು ಅವರು ನಾವು ಜಗತ್ತನ್ನೇ 'ಕಬ್ಜ' ಮಾಡ್ಕೊಳ್ತೀವಿ ಅನ್ನೋ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:ಟಾಲಿವುಡ್​ಗೆ ಕಾಲಿಟ್ಟ ಬಿಟೌನ್​ ಬೆಡಗಿ; ಎನ್​ಟಿಆರ್​ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ

ಟ್ರೇಲರ್​ ರಿಲೀಸ್​ ಮಾಡಿದ ಬಿಗ್​ ಬಿ:ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರ ಹಸ್ತದಿಂದಲೇ ಕಜ್ಜ ಸಿನಿಮಾದ ಹಿಂದಿ ಟ್ರೇಲರ್​ ಮೊದಲಿಗೆ ರಿಲೀಸ್​ ಆಗಿದೆ. ನಿರ್ದೇಶಕ ಅರ್​ ಚಂದ್ರು ಅವರು ಬಿಗ್​ ಬಿ ಅವರ ದೊಡ್ಡ ಅಭಿಮಾನಿ. ಒಂದಿನ ಅವರ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅಂತಾ ಕನಸು ಕಂಡಿದ್ರಂತೆ. ಈ ವಿಷಯವನ್ನು ಈಟಿವಿ ಭಾರತ್​ ಜೊತೆ ಸ್ವತಃ ಆರ್​ ಚಂದ್ರು ಅವರೇ ಹೇಳಿಕೊಂಡಿದ್ದರು. ಅವರ ದೊಡ್ಡ ಮಟ್ಟದ ಕನಸು ಕೊನೆಗೂ ನನಸಾಗಿದೆ.

ಇವತ್ತು ಉಪೇಂದ್ರ ಅವರ ಜೊತೆ ಡಬ್ಬಿಂಗ್​ಗೆಂದು ಬಂದಿದ್ದ ಶಿವಣ್ಣ ಅವರು ಕಬ್ಜ ಚಿತ್ರದ ಟ್ರೇಲರ್​ ನೋಡಿ ಹಾಡಿಹೊಗಳಿದ್ದಾರೆ. "ನನಗೆ ಚಿತ್ರದಲ್ಲಿ ಅಭಿನಯಿಸಿರುವ ಬಗ್ಗೆ ಹೆಮ್ಮೆ ಇದೆ. ಇಂತಹ ಅವಕಾಶ ನೀಡಿದಕ್ಕೆ ಥ್ಯಾಂಕ್ಯೂ" ಎಂಬ ದೊಡ್ಡತನದ ಮಾತನ್ನು ಶಿವಣ್ಣ ಆಡಿದ್ದಾರೆ. "ಕಬ್ಜ ಚಿತ್ರದಲ್ಲಿ ನಟಿಸಿರುವ ಬಗ್ಗೆ ನಿಜಕ್ಕೂ ಖುಷಿ ಇದೆ" ಎಂದು ಹೇಳಿಕೊಂಡಿದ್ದಾರೆ.

ಚಿತ್ರತಂಡ ಹೀಗಿದೆ.. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಅಲ್ಲದೇ ಶಿವರಾಜ್​ ಕುಮಾರ್​ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನವಿದೆ.

ಇದನ್ನೂ ಓದಿ:ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್​​​​

Last Updated : Mar 6, 2023, 5:10 PM IST

ABOUT THE AUTHOR

...view details