ಕರ್ನಾಟಕ

karnataka

ETV Bharat / entertainment

ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾ.. ಸ್ಯಾಮ್ ಮಾನೆಕ್ಷಾ ಪಾತ್ರಕ್ಕೆ ನಟ ಮಿಲಿಂದ್ ಸೋಮನ್ - actor Milind Soman

ನಟ ಮಿಲಿಂದ್ ಸೋಮನ್ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಸೇನೆಯ ಮಾಜಿ ಸೇನಾ ಮುಖ್ಯಸ್ಥ ಸ್ಯಾಮ್ ಮಾನೆಕ್ಷಾ ಪಾತ್ರವನ್ನು ಮಿಲಿಂದ್ ಸೋಮನ್ ನಿರ್ವಹಿಸಲಿದ್ದಾರೆ.

Milind Soman as Sam Manekshaw in Emergency movie
ಸ್ಯಾಮ್ ಮಾನೆಕ್ಷಾ ಪಾತ್ರಕ್ಕೆ ನಟ ಮಿಲಿಂದ್ ಸೋಮನ್

By

Published : Aug 25, 2022, 1:08 PM IST

ಭವ್ಯ ಭಾರತದ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಬಾಲಿವುಡ್​ ಕ್ವೀನ್, ನಟಿ​ ಕಂಗನಾ ರಣಾವತ್​ ನಟಿಸುತ್ತಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಗಳ ಚಿತ್ರೀಕರಣ ಚುರುಕುಗೊಂಡಿದೆ. ಇದೀಗ ನಟ ಮಿಲಿಂದ್ ಸೋಮನ್ ಎಮರ್ಜೆನ್ಸಿ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್ ಹಾಗೂ ಭಾರತದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿ ಸೇರಿದಂತೆ ಅಂದಿನ ರಾಜಕೀಯ ಇತಿಹಾಸದ ಮಹತ್ವದ ಕ್ಷಣಗಳನ್ನು ಹೊತ್ತು ತರುತ್ತಿರುವ ಚಿತ್ರಕ್ಕೆ ಇತ್ತೀಚೆಗೆ ನಟಿ ಮಹಿಮಾ ಚೌಧರಿ ಎಂಟ್ರಿ ಕೊಟ್ಟಿದ್ದರು. ಇಂದಿರಾ ಗಾಂಧಿ ಅವರ ಆಪ್ತರಾಗಿದ್ದ, ಲೇಖಕಿ ಪುಪುಲ್ ಜಯಕರ್ ಪಾತ್ರವನ್ನು ನಟಿ ಮಹಿಮಾ ಚೌಧರಿ ನಿರ್ವಹಿಸುತ್ತಿದ್ದಾರೆ. ಇದೀಗ ಸ್ಯಾಮ್ ಮಾನೆಕ್ಷಾ ಪಾತ್ರಕ್ಕೆ ನಟ ಮಿಲಿಂದ್ ಸೋಮನ್ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ನಟ ಮಿಲಿಂದ್ ಸೋಮನ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

ನಟ ಮಿಲಿಂದ್ ಸೋಮನ್ ಈ ಚಿತ್ರದಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಸ್ಯಾಮ್ ಮಾನೆಕ್ಷಾ ಪಾತ್ರ ನಿರ್ವಹಿಸಲಿದ್ದಾರೆ. ಕಂಗನಾ ರಣಾವತ್ ಚಿತ್ರದಲ್ಲಿ ನಟನ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಮಿಲಿಂದ್ ಸೋಮನ್ ಈ ಪಾತ್ರದಲ್ಲಿ ಸಖತ್ ಸ್ಟ್ರಾಂಗ್ ಆಗಿ ಕಾಣಿಸುತ್ತಿದ್ದಾರೆ.

ಅಂದಿನ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ಗಡಿಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು, ಸೇವೆ ಮತ್ತು ಸಮಗ್ರತೆಗೆ ಹೆಸರಾದವರು, ಯುದ್ಧ ವೀರ ಮತ್ತು ದೂರದೃಷ್ಟಿಯ ನಾಯಕ ಸ್ಯಾಮ್ ಮಾನೆಕ್ಷಾ ಪಾತ್ರಕ್ಕೆ ನಟ ಮಿಲಿಂದ್ ಸೋಮನ್ ಎಂದು ನಟಿ ಕಂಗನಾ ರಣಾವತ್ ಬರೆದಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಚಿತ್ರಕ್ಕೆ ನಟಿ ಮಹಿಮಾ ಚೌಧರಿ ಎಂಟ್ರಿ

ಈ ಎಮರ್ಜೆನ್ಸಿ ಸಿನಿಮಾ ಅನ್ನು ಸ್ವತಃ ಕಂಗನಾ ಬರೆದು, ನಿರ್ದೇಶಿಸಿದ್ದಾರೆ. ಜೊತೆಗೆ ಮಾಜಿ ಪ್ರಧಾನಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ನಟ ಅನುಪಮ್ ಖೇರ್ ಅವರು ಕ್ರಾಂತಿಕಾರಿ ನಾಯಕ ಜೆ ಪಿ ನಾರಾಯಣ್ ಮತ್ತು ಶ್ರೇಯಸ್ ತಲ್ಪಾಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ABOUT THE AUTHOR

...view details