ಕರ್ನಾಟಕ

karnataka

ETV Bharat / entertainment

ಬಾಕ್ಸ್ ಆಫೀಸ್ ಪೈಪೋಟಿ; ಕತ್ರಿನಾ, ವಿಜಯ್ ಸೇತುಪತಿ ಅಭಿನಯದ 'ಮೇರಿ ಕ್ರಿಸ್ಮಸ್' ಮುಂದೂಡಿಕೆ - ವಿಜಯ್ ಸೇತುಪತಿ

ಬಹುನಿರೀಕ್ಷಿತ 'ಮೇರಿ ಕ್ರಿಸ್ಮಸ್' ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

Merry Christmas release date
ಮೇರಿ ಕ್ರಿಸ್ಮಸ್ ಸಿನಿಮಾ ಬಿಡುಗಡೆ ದಿನಾಂಕ

By ETV Bharat Karnataka Team

Published : Nov 16, 2023, 5:13 PM IST

ಬಾಲಿವುಡ್​​ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಹಾಗೂ ಸೌತ್​ ಸ್ಟಾರ್ ನಟ ವಿಜಯ್ ಸೇತುಪತಿ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಮೇರಿ ಕ್ರಿಸ್ಮಸ್'. ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. ಆದರೆ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಪಕರು ಮುಂದೂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಂದು ಚಿತ್ರ ನಿರ್ಮಾಪಕರು ಸಿನಿಮಾದ ಹೊಸ ಪೋಸ್ಟರ್ ಜೊತೆಗೆ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ಮೇರಿ ಕ್ರಿಸ್ಮಸ್ ಸಿನಿಮಾ ಬಿಡುಗಡೆ ದಿನಾಂಕ? ಪೋಸ್ಟರ್ ಹಂಚಿಕೊಂಡ ಚಿತ್ರತಂಡ, "ಉತ್ಸಾಹದಿಂದ ಕಾಯುತ್ತಿರುವ ಕ್ಷಣ ಬಹುತೇಕ ಹತ್ತಿರದಲ್ಲಿದೆ. ಮೇರಿ ಕ್ರಿಸ್ಮಸ್ ನಿಮ್ಮ ಚಳಿಗಾಲದ ಋತುವನ್ನು ಹೆಚ್ಚು ಸಂತೋಷದಾಯಕವಾಗಿಸುತ್ತದೆ" ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಮೇರಿ ಕ್ರಿಸ್ಮಸ್​ ಅನ್ನು ಮುಂದಿನ ತಿಂಗಳು ಡಿಸೆಂಬರ್ 8 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಬಿಡುಗಡೆ ದಿನಾಂಕ ಬದಲಾಗಿದ್ದು, 2024 ರ ಜನವರಿ 12 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಚಿತ್ರ ತಯಾರಕರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ತಂಡ ಈ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಪ್ರೋಜೆಕ್ಟ್ ಮೇಲಿನ ಒಲವು, ಅಸಾಧಾರಣ ಸಿನಿಮೀಯ ಅನುಭವ ನೀಡುವುದರಿಂದ ತಮ್ಮ ಅಚಲ ಬದ್ಧತೆಯನ್ನು ತಿಳಿಸಿದೆ ಎಂದು ಹೇಳಿದ್ದಾರೆ. ಪ್ರತೀ ಫಿಲ್ಮ್​​ಮೇಕರ್​ಗಳಂತೆ ನಾವು ಅಪಾರ ಶ್ರದ್ಧೆಯಿಂದ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ, ಒಂದಾದ ಬಳಿಕ ಒಂದರಂತೆ ಚಿತ್ರಗಳು ಬಿಡುಗಡೆಯಾಗಲಿವೆ. ಈ ಎರಡು ತಿಂಗಳಲ್ಲಿ ಅನೇಕ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಕಾರಣದಿಂದ ನಾವು ಚಿತ್ರವನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದ್ದೇವೆ. ಮುಂದಿನ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ಮೇರಿ ಕ್ರಿಸ್ಮಸ್​ ಬಿಡುಗಡೆಯಾಗಲಿದೆ.

ಇದನ್ನೂ ಓದಿ:200 ಕೋಟಿಯತ್ತ ಸಲ್ಮಾನ್​​ ಕತ್ರಿನಾ ನಟನೆಯ 'ಟೈಗರ್ 3': ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ

ಶ್ರೀರಾಮ್ ರಾಘವನ್ ನಿರ್ದೇಶನದ 'ಮೇರಿ ಕ್ರಿಸ್ಮಸ್' ಎರಡು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಕತ್ರಿನಾ ಕೈಫ್, ವಿಜಯ್ ಸೇತುಪತಿ ಅಲ್ಲದೇ ಹಲವು ಪೋಷಕ ನಟರು ಕಾಣಿಸಿಕೊಳ್ಳಲಿದ್ದಾರೆ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಜನವರಿ 12 ರಂದು ಥಿಯೇಟರ್​ಗಳಲ್ಲಿ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:'ಈ ದೃಶ್ಯ ನಮ್ಮ ಚಿತ್ರದ ಒಂದು ಭಾಗ': ಅಭಿಮಾನಿಗೆ ಹೊಡೆದ​ ವಿಡಿಯೋಗೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್

ನಟಿ ಕತ್ರಿನಾ ಕೈಫ್ ಅವರ ಟೈಗರ್ 3 ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸೂಪರ್ ಸ್ಟಾರ್ ಸಲ್ಮಾನ್​ ಖಾನ್​ ಜೊತೆ ಸ್ಕ್ರೀನ್​ ಶೇರ್ ಮಾಡಿರುವ ಟೈಗರ್ 3 ದೀಪಾವಳಿ ಉಡುಗೊರೆಯಾಗಿ ಭಾನುವಾರದಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು. ನಾಲ್ಕು ದಿನದಲ್ಲಿ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 169.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಟೈಗರ್​ 3ರ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿದ್ದು, ನಟಿಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಮೇರಿ ಕ್ರಿಸ್ಮಸ್' ಜನವರಿಯಲ್ಲಿ ತೆರೆಕಾಣಲಿದೆ.

ABOUT THE AUTHOR

...view details