ಕರ್ನಾಟಕ

karnataka

ETV Bharat / entertainment

ಒಂದು ಸಿನಿಮಾ, ಎರಡು ಪ್ರತ್ಯೇಕ ಟ್ರೇಲರ್​: 'ಮೆರಿ ಕ್ರಿಸ್ಮಸ್'​ ತಂಡದಿಂದ ವಿಭಿನ್ನ ಪ್ರಯತ್ನ - etv bharat kannada

Merry Christmas trailer: 'ಮೆರಿ ಕ್ರಿಸ್ಮಸ್'​ ಚಿತ್ರತಂಡ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಪ್ರತ್ಯೇಕ ಟ್ರೇಲರ್​ ಬಿಡುಗಡೆ ಮಾಡಿದೆ.

Merry Christmas movie two trailers released
ಒಂದೇ ಸಿನಿಮಾ, ಎರಡು ಪ್ರತ್ಯೇಕ ಟ್ರೇಲರ್​: 'ಮೇರಿ ಕ್ರಿಸ್ಮಸ್'​ ತಂಡದಿಂದ ವಿಭಿನ್ನ ಪ್ರಯತ್ನ

By ETV Bharat Karnataka Team

Published : Dec 21, 2023, 5:30 PM IST

ತಮಿಳು ಚಿತ್ರರಂಗದ ಖ್ಯಾತ ನಟ, ಖಳನಾಯಕ ವಿಜಯ್​​ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಜವಾನ್​' ಸೂಪರ್​ ಹಿಟ್​ ಬಳಿಕ ಇತ್ತೀಚೆಗಷ್ಟೇ ಮತ್ತೊಂದು ಬಾಲಿವುಡ್​ ಸಿನಿಮಾಗೆ ಸಹಿ ಹಾಕಿದ್ದಾರೆ. 'ಬದ್ಲಾಪುರ್​', 'ಅಂಧದೂನ್'​ ಮುಂತಾದ ಬ್ಲಾಕ್​ ಬಸ್ಟರ್​ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀರಾಮ್​ ರಾಘವನ್​ ಅವರ 'ಮೆರಿ ಕ್ರಿಸ್ಮಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ನಾಯಕಿ. ಇವರಿಬ್ಬರ ಕಾಂಬೋದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಿದು.

ಈಗಾಗಲೇ ಅನಾವರಣಗೊಂಡಿರುವ ಟೈಟಲ್​ ಪೋಸ್ಟ​ರ್​​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆಯಷ್ಟೇ ಸಿನಿಮಾದ ಟ್ರೇಲರ್​ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಅದರೊಂದಿಗೆ 'ಮೆರಿ ಕ್ರಿಸ್ಮಸ್' ಬಿಡುಗಡೆ ದಿನಾಂಕವನ್ನೂ ಅನಾವರಣಗೊಳಿಸಿದ್ದಾರೆ. ತಮಿಳು ಮತ್ತು ಹಿಂದಿಯಲ್ಲಿ ಒಂದೇ ಕಂಟೆಂಟ್‌ನಲ್ಲಿ ಸಿನಿಮಾ ತಯಾರಾಗಿದ್ದರೂ ಚಿತ್ರತಂಡ ಪ್ರತ್ಯೇಕ ಟ್ರೇಲರ್​ ಬಿಡುಗಡೆ ಮಾಡಿದೆ. ಕ್ರೈಂ ಥ್ರಿಲ್ಲರ್​ ಕಾನ್ಸೆಪ್ಟ್​ನಲ್ಲಿ ಸಿದ್ಧಗೊಂಡಿರುವ ಈ ಚಿತ್ರದ ಎರಡು ಟ್ರೇಲರ್​ಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ನಿರ್ದೇಶಕ ಶ್ರೀರಾಮ್​ ರಾಘವನ್​ ಸಿನಿಮಾದಲ್ಲಿ ಫುಲ್​ ಟ್ವಿಸ್ಟ್​ ಮತ್ತು ಸರ್ಪ್ರೈಸ್​ ನೀಡಲಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಎರಡು ಟ್ರೇಲರ್​ಗಳು ಚಿತ್ರರಂಗದಲ್ಲಿ ಟಾಕ್​ ಆಫ್​ ದಿ ಟೌನ್​ ಆಗಿದೆ. ಏಕೆಂದರೆ ಒಂದೇ ಚಿತ್ರದಿಂದ ಎರಡು ಟ್ರೇಲರ್​ಗಳು ಒಮ್ಮೆಲೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನಬಹುದು. ಇದರೊಂದಿಗೆ ಸಿನಿಮಾ ರಂಗದಲ್ಲಿ ಹೊಸ ಟ್ರೆಂಡ್​ ಅನ್ನು ಚಿತ್ರತಂಡ ಸೃಷ್ಟಿಸಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಸೋಷಿಯಲ್​ ಮೀಡಿಯಾದಲ್ಲಿ ಟ್ರೇಲರ್​ ಟ್ರೆಂಡಿಂಗ್​ನಲ್ಲಿದೆ.

ಗಮನಾರ್ಹವಾಗಿ, 'ಮೆರಿ ಕ್ರಿಸ್ಮಸ್' ಸಿನಿಮಾದ ಮೂಲಕ ವಿಜಯ್​ ಸೇತುಪತಿ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ. ಹಿಂದಿಯಲ್ಲಿ ಅವರು ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ. ಆದರೆ ಅನಿವಾರ್ಯ ಕಾರಣಗಳಿಂದ ಶೂಟಿಂಗ್​ ವಿಳಂಬವಾಗಿದ್ದು, ಅವರ ನಟನೆಯ ಮೂರನೇ ಸಿನಿಮಾವಾಗಿ 'ಮೆರಿ ಕ್ರಿಸ್ಮಸ್' ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಮುಂಬೈಕರ್​ ಸಿನಿಮಾದಲ್ಲೂ ವಿಜಯ್​ ಸೇತುಪತಿ ನಟಿಸಿದ್ದರು. ಜೂನ್​ 2ರಂದು ತೆರೆ ಕಂಡ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಸ್ವೀಕರಿಸಿತ್ತು.

ಚಿತ್ರತಂಡ: 'ಮೆರಿ ಕ್ರಿಸ್ಮಸ್' ಶ್ರೀರಾಮ್, ಕತ್ರಿನಾ ಕೈಫ್​​ ಮತ್ತು ವಿಜಯ್ ಸೇತುಪತಿ ಕಾಂಬೋದ ಮೊದಲ ಸಿನಿಮಾ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು. ಎರಡು ಭಾಷೆಗಳಿಗೆ ವಿಭಿನ್ನ ಪೋಷಕ ಪಾತ್ರಗಳಿವೆ. ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ರಾಜೇಶ್ ವಿಲಿಯಮ್ಸ್, ಶಣ್ಮುಗರಾಜ, ಕೆವಿನ್ ಜೈ ಬಾಬು ಮತ್ತು ರಾಧಿಕಾ ಶರತ್​ ಕುಮಾರ್​ ತಮಿಳು ಆವೃತ್ತಿಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಮೆರಿ ಕ್ರಿಸ್ಮಸ್ ಟ್ರೇಲರ್​: ಕತ್ರಿನಾ, ವಿಜಯ್​​ ಸೇತುಪತಿ ಹೊಸ ಸಿನಿಮಾ ಕುತೂಹಲ

ABOUT THE AUTHOR

...view details