ಕರ್ನಾಟಕ

karnataka

By

Published : Jun 1, 2023, 7:02 AM IST

ETV Bharat / entertainment

7 ಹಾಡುಗಳನ್ನು ಹೊಂದಿರುವ 'ಮೆಲೋಡಿ ಡ್ರಾಮ' ತೆರೆಗೆ ಬರಲು ಸಿದ್ಧ

ಚಿತ್ರೀಕರಣ ಪೂರ್ಣಗೊಳಿಸಿರುವ 'ಮೆಲೋಡಿ ಡ್ರಾಮ' ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ.

Melody Drama movie
'ಮೆಲೋಡಿ ಡ್ರಾಮ'

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳು ನಿರ್ಮಾಣವಾಗುತ್ತಿವೆ. 2023 ರಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಯಾವುದೇ ಚಿತ್ರಗಳು ಕಂಡಿಲ್ಲ. ಹಾಗಂತ ಪ್ರೇಕ್ಷಕರನ್ನು ತಲುಪುವಲ್ಲಿ ಸಿನಿಮಾಗಳು ಸೋತಿಲ್ಲ. ಇದೀಗ ಸೂಪರ್ ಹಿಟ್ ನಿರೀಕ್ಷೆಯೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಸಿನಿಮಾ 'ಮೆಲೋಡಿ ಡ್ರಾಮ'.

ಸ್ಯಾಂಡಲ್​ವುಡ್​ನಲ್ಲಿ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಸಿನಿಮಾ‌ವೇ 'ಮೆಲೋಡಿ ಡ್ರಾಮ'. ವಿಭಿನ್ನ ಟೈಟಲ್​ ಹೊಂದಿರುವ ಚಿತ್ರದಲ್ಲಿ ಯುವ ‌ನಟ ಸತ್ಯ ಹಾಗೂ ಸುಪ್ರೀತ ಸತ್ಯನಾರಾಯಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಮಂಜು ಕಾರ್ತಿಕ್ ನಿರ್ದೇಶಿಸಿರುವ ಸಿನಿಮಾ ಹಾಡಿನಿಂದ ಗಮನ ಸೆಳೆಯುತ್ತಿದೆ.

1Mಗೂ ಅಧಿಕ ವೀಕ್ಷಣೆ: ವಿಭಿನ್ನ ಶೀರ್ಷಿಕೆಯ ಚಿತ್ರಕ್ಕಾಗಿ ಹೃದಯ ಶಿವ ಬರೆದಿರುವ "ಯಾರು ಬರೆಯದ ಕವಿತೆ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿ, ಜನಮನಸೂರೆಗೊಳ್ಳುತ್ತಿದೆ. ಈಗಾಗಲೇ ಒಂದು ಮಿಲಿಯನ್​​​ಗೂ (10 ಲಕ್ಷ) ಅಧಿಕ ವೀಕ್ಷಣೆ ಕಂಡು ಮುನ್ನುಗುತ್ತಿದೆ. ಕಿರಣ್ ರವೀಂದ್ರನಾಥ್ ಸಂಗೀತ ನೀಡಿರುವ ಹಾಡನ್ನು ಪಲಾಕ್ ಮುಚ್ಚಲ್ ಹಾಗೂ ವರುಣ್ ಪ್ರದೀಪ್ ಸೊಗಸಾಗಿ ಹಾಡಿದ್ದಾರೆ. 'ಮೆಲೋಡಿ ಡ್ರಾಮ'ದ ಮೊದಲ ಹಾಡು ಇದಾಗಿದೆ. ಒಟ್ಟು ಏಳು ಹಾಡುಗಳು ಚಿತ್ರದಲ್ಲಿದೆ. ಸೋನು ನಿಗಮ್, ಕೈಲಾಶ್ ಖೇರ್, ಪಲಾಕ್ ಮುಚ್ವಲ್ ಸೇರಿದಂತೆ ಮೊದಲಾದ ಖ್ಯಾತ ಗಾಯಕರ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.

'ಮೆಲೋಡಿ ಡ್ರಾಮ' ಸಿನಿಮಾದ ನಟಿ, ನಟ

ಶೀಘ್ರ ಬಿಡುಗಡೆಗೆ ತಯಾರಿ: ಯುವ ನಟ ಸತ್ಯ ಹಾಗು ಸುಪ್ರೀತ ಸತ್ಯನಾರಾಯಣ ಅಲ್ಲದೇ ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ನಿರ್ಮಾಣ ‌ಮಾಡಿದ್ದಾರೆ. ಸದ್ಯ ಹಾಡಿನಿಂದ ಗಮನ‌ ಸೆಳೆಯುತ್ತಿರುವ ಮೆಲೋಡಿ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಶೀಘ್ರ ಬಿಡುಗಡೆ ಮಾಡಲು ಚಿತ್ರತಂಡ ಭರದ ತಯಾರಿಗಳನ್ನು ನಡೆಸುತ್ತಿದೆ.

'ಮೆಲೋಡಿ ಡ್ರಾಮ' ಚಿತ್ರದ ಸನ್ನಿವೇಶ

ಇದನ್ನೂ ಓದಿ:ನೀವು ಎಷ್ಟು ದಿನ ದ್ವೇಷ ಹರಡುತ್ತೀರಿ?: 'ದಿ ಕೇರಳ ಸ್ಟೋರಿ' ಬಗ್ಗೆ ಪ್ರಸಿದ್ಧ ನಟ ಹೇಳಿದ್ದಿಷ್ಟು

ಭಾವನೆಗಳ ಸುತ್ತ ಕಥೆ...:ಈ ಸಿನಿಮಾಕ್ಕೆ ಟೈಟಲ್​ ಜೊತೆ "ನಿನ್ನ ಕಥೆ ನನ್ನ ಜೊತೆ" ಎಂಬ ಅಡಿ ಬರಹ ಇದೆ‌. ಭಾವನೆಗಳ ಸುತ್ತ ಸುತ್ತುವ ಕಥೆ ಇದು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲ ತಪ್ಪುಗಳನ್ನು ಮಾಡೇ ಮಾಡಿರುತ್ತಾರೆ. ಆದ್ರೆ ಸಂಬಂಧಗಳನ್ನು ಪ್ರೀತಿ ಭಾವನೆಗಳ ಜೊತೆಗೆ ಹೇಗೆ ಮುನ್ನಡೆಸಬೇಕು, ತಪ್ಪುಗಳನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಹೇಳುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಇದೀಗ ಸೆನ್ಸಾರ್ ಮಂಡಳಿ ಸಿನಿಮಾ ಮೆಚ್ಚುಕೊಂಡಿದ್ದು, ಇದೇ ತಿಂಗಳಲ್ಲಿ ಚಿತ್ರ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಸಿನಿಮಾಪ್ರಿಯರು ಕೂಡಾ ವೀಕ್ಷಣೆಗೆ ಕಾತುರರಾಗಿದ್ದಾರೆ.

ಇದನ್ನೂ ಓದಿ:'ಲವ್ ಜಿಹಾದ್​ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್

ABOUT THE AUTHOR

...view details