ಸ್ಯಾಂಡಲ್ನಲ್ಲಿ ಸ್ಟಾರ್ ನಟರ ಸಿನಿಮಾ ಹಾಡುಗಳು ಮರು ಬಳಕೆ ಆಗೋದು ಹೊಸತೇನಲ್ಲ. ಹೊಸತನದಲ್ಲಿ ಹಳೇ ಹಾಡುಗಳು ಸಿನಿಪ್ರಿಯರ ಮನ ಗೆಲ್ಲುತ್ತಿವೆ. ಇದೀಗ ವರನಟ ಡಾ. ರಾಜ್ಕುಮಾರ್ ಹಾಗು ಲೀಲಾವತಿ ಅವರ ಅಭಿನಯದ ವೀರಕೇಸರಿ ಚಿತ್ರದ ಪ್ರಖ್ಯಾತ ಹಾಡು ಮೆಲ್ಲುಸಿರೆ ಸವಿಗಾನ ಹಾಡು ಮರು ಬಳಕೆ ಆಗಿದೆ.
ಹೌದು, ರಾಜ್ಕುಮಾರ್ ಕಾಲದ ಸೂಪರ್ ಹಿಟ್ ಗೀತೆಗೆ ಮನಸೋಲದವರಿಲ್ಲ. ಈ ಹಾಡನ್ನು ಇದೀಗ ಪ್ರೀಮಿಯರ್ ಪದ್ಮಿನಿ ಸಿನಿಮಾ ಖ್ಯಾತಿಯ ವಿವೇಕ್ ಸಿಂಹ ಹಾಗು ದಿಯಾ ಚಿತ್ರದ ದಿಯಾ ಖುಷಿ ಅಭಿನಯಿಸಿರೋ 'ಸ್ಪೂಕಿ ಕಾಲೇಜು' ಸಿನಿಮಾದಲ್ಲಿ ಮತ್ತೆ ಬಳಸಲಾಗಿದೆ.
ದಾಂಡೇಲಿ ದಟ್ಟ ಕಾಡಿನಲ್ಲಿ 250ಕ್ಕೂ ಅಧಿಕ ತಂತ್ರಜ್ಞರ ಸಹಾಯದಿಂದ ಅದ್ಭುತ ಸೆಟ್ನಲ್ಲಿ ಈ ಮೆಲ್ಲುಸಿರೆ ಸವಿಗಾನ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಕ್ಯಾಮರಾ ಮ್ಯಾನ್ ಮನೋಹರ್ ಜೋಷಿ ಈ ಸ್ಪೆಷಲ್ ಸಾಂಗ್ ಸೀನ್ಗಳನ್ನು ಸೆರೆ ಹಿಡಿದಿದ್ದಾರೆ. ನೃತ್ಯ ನಿರ್ದೇಶಕ ಭೂಷಣ್ ಈ ಹಾಡನ್ನು ಕೋರಿಯೋಗ್ರಾಫಿ ಮಾಡಿದ್ದಾರೆ. ಏಕ್ ಲವ್ ಯಾ ಸಿನಿಮಾ ಸುಂದರಿ ರೀಷ್ಮಾ ನಾಣಯ್ಯ ಈ ಹಾಡಿನಲ್ಲಿ ನಾಲ್ಕೈದು ಕಾಸ್ಟೂಮ್ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಸೊಂಟ ಬಳಕಿಸಿದ್ದಾರೆ. ನಾಲ್ಕೈದು ದಿನ ಈ ಹಾಡಿಗೆ ಅಭ್ಯಾಸ ಮಾಡಿದ ಬಳಿಕ ರೀಷ್ಮಾ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಟೀಸರ್ ಮೂಲಕ ಈಗಾಗಲೇ ಜನಮನ ಗೆದ್ದಿರುವ ಸ್ಪೂಕಿ ಕಾಲೇಜ್ ಚಿತ್ರ ಹಾರರ್ ಹಾಗು ಥ್ರಿಲ್ಲಿಂಗ್ ಕಂಟೆಂಟ್ಗೆ ಚಂದನವನದಲ್ಲಿ ಟಾಕ್ ಆಗುತ್ತಿರುವ ಚಿತ್ರ. ಹೊಸತನದ ಕಥೆ ಆಧರಿಸಿರೋ ಈ ಸಿನಿಮಾವನ್ನು ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ಬರೆದು ನಿರ್ದೇಶಕ ಭರತ್ ಜಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಧಾರವಾಡದ ಶತಕಕ್ಕೂ ಮೀರಿದ ಇತಿಹಾಸವಿರುವ ಪುರಾತನ ಕಾಲೇಜಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿರೋದು.