ಬಿಗ್ ಬಾಸ್ ಶೋನಲ್ಲಿ ಮಿಂಚಿದ ಸೆಲೆಬ್ರಿಟಿಗಳು ಚಿತ್ರರಂಗಕ್ಕೆ ಬರೋದು ಹೊಸತೇನಲ್ಲ. ಇದೀಗ ಬಿಗ್ ಬಾಸ್ ಖ್ಯಾತಿಯ ಶಶಿ 'ಮೆಹಬೂಬ' ಚಿತ್ರದ ನಾಯಕನಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರೋದು ತಿಳಿರುವ ವಿಚಾರ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ಮೆಹಬೂಬ ಚಿತ್ರದ ಮತ್ತೊಂದು ಸುಮಧುರ ಹಾಡು ಝೆಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ವಿ. ರಘುಶಾಸ್ತ್ರಿ ಅವರ ಈ ಹಾಡನ್ನು "ಎದೆ ತುಂಬಿ ಹಾಡುವೆನು" ಖ್ಯಾತಿಯ ನದಿರಾ ಭಾನು ಇಂಪಾಗಿ ಹಾಡಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ. ಶಶಿ ಹಾಗೂ ಪಾವನ ಗೌಡ ಈ ಹಾಡಿನಲ್ಲಿ ರೊಮ್ಯಾನ್ಸ್ ಮಾಡಿದ್ದು, ಉಸಿರೇ...ಉಸಿರೇ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶಶಿ ಹಾಗು ಪಾವನ ಗೌಡ ಅಲ್ಲದೇ ಕಬೀರ್ ದುಹಾನ್ ಸಿಂಗ್, ಕಿರಿಕ್ ಪಾರ್ಟಿ ಸಲ್ಮಾನ್, ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ:'ಕಾಂತಾರ ನೋಡುವ ಕುತೂಹಲ ಹೆಚ್ಚಾಗಿದೆ': ಬಾಲಿವುಡ್ ನಟಿ ಕಂಗನಾ ರಣಾವತ್
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಹಾಗೂ ಸಂಭಾಷಣೆಯನ್ನು ರಘುಶಾಸ್ತ್ರಿ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸ್ಕಂದ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೇರಳದ ನೈಜಘಟನೆ ಆಧರಿಸಿರುವ ಕಥೆಯಾಗಿರೋ ಮೆಹಬೂಬ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಸಿನಿಮಾ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.