ಕರ್ನಾಟಕ

karnataka

ETV Bharat / entertainment

ಮೇಘಾ-ಕವೀಶ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಟೈಟಲ್​ ರಿವೀಲ್​ - After Operation London Cafe

ಮೇಘಾ ಶೆಟ್ಟಿ ಹಾಗೂ ಯುವ ನಟ‌ ಕವೀಶ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಶೀರ್ಷಿಕೆ ರಿವೀಲ್​ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ.

megha-shetty-new-movie-title-revealed
ಮೇಘಾ ಶೆಟ್ಟಿ, ಕವೀಶ್ ಶೆಟ್ಟಿ ಅಭಿನಯದ ಹೊಸ ಸಿನೆಮಾ ಟೈಟಲ್​ ರಿವೀಲ್​

By

Published : Jun 6, 2022, 7:12 PM IST

'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಜೊತೆ ಯುವ ನಟ‌ ಕವೀಶ್ ಶೆಟ್ಟಿ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಶೀರ್ಷಿಕೆಯನ್ನು ರಿವೀಲ್​ ಮಾಡಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಸ್ನೇಹಿತ ರಾಘವೇಂದ್ರ, ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸದ್ಯ ಟೈಟಲ್ ಪೋಸ್ಟರ್ ಅನಾವರಣ ಮಾಡಿ ಗೆಳೆಯನಿಗೆ ರಿಷಬ್ ಸಾಥ್ ನೀಡಿದ್ದಾರೆ.

ಚಿತ್ರಕ್ಕೆ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಎಂದು ಟೈಟಲ್ ಇಡಲಾಗಿದೆ. ಇದೊಂದು ದೊಡ್ಡಮಟ್ಟದ ಆ್ಯಕ್ಷನ್ ಹೊಂದಿರುವ ಸಿನಿಮಾ ಎಂಬುದು ಪೋಸ್ಟರ್​ನಲ್ಲೇ ತಿಳಿಯುತ್ತದೆ. ಹಾಲಿವುಡ್ ಶೈಲಿಯ ಪೋಸ್ಟರ್​ಲ್ಲಿ ನಾಯಕ ಕವೀಶ್ ಶೆಟ್ಟಿ ಮಿಂಚಿದ್ದಾರೆ.

ಸ್ನೇಹಿತ ರಾಘವೇಂದ್ರ ಜೊತೆ ನಿರ್ದೇಶಕ ರಿಷಬ್ ಶೆಟ್ಟಿ

ಈಗಾಗಲೇ ಸಾಕಷ್ಟು ಸುದ್ದಿಯಾಗಿರುವ ಈ ಚಿತ್ರವು ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ನುರಿತ ತಾಂತ್ರಿಕ ವರ್ಗ ಹಾಗೂ ಕನ್ನಡ, ಮರಾಠಿ ಮತ್ತು ಬಹುಭಾಷಾ ಕಲಾವಿದರನ್ನು ಹೊಂದಿರುವ ಲಂಡನ್ ಕೆಫೆಯ ಗುಟ್ಟು ಬಿಟ್ಟುಕೊಡದ ನಿರ್ದೇಶಕ ಸಡಗರ ರಾಘವೇಂದ್ರ, ಹೆಸರಿಗೆ ತಕ್ಕಂತೆ ಚಿತ್ರವು ಪ್ರೇಕ್ಷಕರ ನಿರೀಕ್ಷೆಗೆ ನಿರಾಸೆ ಮಾಡುವುದಿಲ್ಲ ಅಂತಾರೆ.

ಮರಾಠಿಗರ ಕನಸಿನ ಹುಡುಗಿ ಮೇಘಾ ಶೆಟ್ಟಿ ಹಾಗೂ ಕವೀಶ್, ಚಿತ್ರದಲ್ಲಿ ಶಿವಾನಿ - ಸುರ್ವೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ‌. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ಹೆಸರಾಂತ ಡ್ರೀಮರ್ಸ್ ಪ್ರೊಡಕ್ಷನ್​ನ ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸಿನೆಮಾ ಟೈಟಲ್ ಪೋಸ್ಟರ್​

ಒಟ್ಟಾರೆ, ಕನ್ನಡದ ಮತ್ತೊಂದು ಚಿತ್ರ ರಾಜ್ಯದ ಭಾಷೆ ಮೀರಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಚಿತ್ರದ ಶೀರ್ಷಿಕೆ ವಿಚಾರದಲ್ಲಿ ಮೊದಲಿನಿಂದಲೂ ಕುತೂಹಲ ಹುಟ್ಟಿಸಿದ್ದ ಸಿನಿಮಾ ತಂಡ ಕೊನೆಗೂ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಕ ಟೈಟಲ್ ಬಿಡುಗಡೆಗೊಳಿಸಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:ಚಾರ್ಲಿ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರು ಶ್ವಾನವನ್ನು ಪ್ರೀತಿಸುತ್ತಾರೆ : ರಕ್ಷಿತ್ ಶೆಟ್ಟಿ

ABOUT THE AUTHOR

...view details