ರೇಮೊ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿರುವ ಯುವ ಪ್ರತಿಭೆ ಇಶಾನ್ಗೆ ಸಿನಿಮಾ ಲೋಕದ ದಿಗ್ಗಜರಿಂದ ಶುಭ ಹಾರೈಕೆಗಳು ಸಿಗುತ್ತಿವೆ. ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್, ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೆ ಅನೇಕರು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಬ್ಲೆಸ್ಸಿಂಗ್ಸ್ ಕೂಡ ಸಿಕ್ಕಿದೆ.
‘ರೇಮೊ’ ನವೆಂಬರ್ 25ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಯಕ ನಟ ಇಶಾನ್, ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಇಶಾನ್ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಚಿರಂಜೀವಿ ಸಿನಿಮಾ ಯಶಸ್ಸು ಕಾಣಲೆಂದು ಮನದುಂಬಿ ಹಾರೈಸಿದ್ದಾರೆ. ಚಿರಂಜೀವಿ ಭೇಟಿಯಾದ ಪೋಟೋವನ್ನು ಇಶಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.