'ಗುಂಟೂರು ಖಾರಂ' ಸೌತ್ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿ ಬರುತ್ತಿರುವ 'ಗುಂಟೂರು ಖಾರಂ' ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್, ರಿಲೀಸ್ ಡೇಟ್, ಕಥೆ, ಸಂಗೀತ ನಿರ್ದೇಶಕ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸಿನಿಮಾದ ಬಗ್ಗೆ ಪಾಸಿಟಿವ್ ವೈಬ್ ಸಿಕ್ಕಿದೆ.
ತೆಲುಗು ನಟಿ ಮೀನಾಕ್ಷಿ ಚೌಧರಿ ಈ ಸಿನಿಮಾಗೆ ಅಧಿಕೃತ ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಸದ್ಯ ಅವರು 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದ ತಯಾರಕರು ಮೀನಾಕ್ಷಿ ಚೌಧರಿ ಅವರನ್ನು ಎರಡನೇ ನಾಯಕಿಯಾಗಿ ಸ್ವಾಗತಿಸಿದ್ದಾರೆ. ಮೊದಲ ಸುತ್ತಿನ ಶೂಟಿಂಗ್ ಮುಗಿಸಿರುವುದಾಗಿ ನಟಿ ತಿಳಿಸಿದ್ದಾರೆ. ಈ ಮೂಲಕ ಸಿನಿಮಾ ಅಪ್ಡೇಟ್ಗಾಗಿ ಕಾಯುತ್ತಿದ್ದ ಫ್ಯಾನ್ಸ್ ಮುಖದಲ್ಲಿ ಸಂತಸದ ಹೊನಲು ಹರಿದಿದೆ.
ವರದಿಗಳ ಪ್ರಕಾರ, ಮೀನಾಕ್ಷಿ ಛೌಧರಿ 'ಗುಂಟೂರು ಖಾರಂ' ತಂಡವನ್ನು ಸೇರಲಿದ್ದಾರೆ. ಆದರೆ ನಟಿ ಪೂಜಾ ಹೆಗ್ಡೆ ಸ್ಥಾನಕ್ಕೆ ಮೀನಾಕ್ಷಿ ಚೌಧರಿ ಬರುತ್ತಿಲ್ಲ. ಶ್ರೀಲೀಲಾ ಅವರಿಗೆ ಆಫರ್ ಮಾಡಿದ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು. ನಟಿ ಶ್ರೀಲೀಲಾ 'ಗುಂಟೂರು ಖಾರಂ'ನಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಶ್ರೀಲೀಲಾ ಜೀವ ತುಂಬಬೇಕೆಂದು ಚಿತ್ರ ತಯಾರಕರು ನಿರ್ಧರಿಸಿದ್ದಾರೆ. ಹಾಗಾಗಿ ಮೀನಾಕ್ಷಿ ಚೌಧರಿ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯಷ್ಟೇ ಈವರೆಗೆ ತಿಳಿದಿತ್ತು.
ಇದನ್ನೂ ಓದಿ:'ಅವಳು ಚಂಡಮಾರುತದ ಮೊದಲು ಬರುವ ಗುಡುಗು': 'ಜವಾನ್'ನಲ್ಲಿ ನಯನತಾರಾ ಲುಕ್ ಹೀಗಿದೆ ನೋಡಿ..