ಕರ್ನಾಟಕ

karnataka

ETV Bharat / entertainment

ರಜನಿಕಾಂತ್ ಭೇಟಿಯಾದ ದೊರೈ ವೈಕೋ

ಬುಧವಾರ ಸಂಜೆ ಚೆನ್ನೈನಲ್ಲಿ ನಟ ರಜನಿಕಾಂತ್ ಅವರನ್ನು ತಮಿಳುನಾಡು ಎಂಡಿಎಂಕೆ ನಾಯಕ ದೊರೈ ವೈಕೋ​ ಭೇಟಿಯಾದರು.

Dorai Vaiko and Rajinikanth
ದೊರೈ ವೈಕೋ ಮತ್ತು ರಜನಿಕಾಂತ್

By ETV Bharat Karnataka Team

Published : Jan 11, 2024, 8:25 PM IST

ಮುಂಬೈ:ತಮಿಳುನಾಡು ಎಂಡಿಎಂಕೆ ನಾಯಕ ದೊರೈ ವೈಕೋ ಅವರು ಸೌತ್​​ ಸೂಪರ್​​ ಸ್ಟಾರ್​​ ರಜನಿಕಾಂತ್​ ಅವರನ್ನು ಚೆನ್ನೈನ ಅವರ ನಿವಾಸದಲ್ಲಿ ಬುಧವಾರ ಭೇಟಿಯಾಗಿದ್ದಾರೆ. ಅವರಿಬ್ಬರ ಭೇಟಿಯ ಫೋಟೊಗಳನ್ನು ದೊರೈ ವೈಕೋ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್​ ಮಾಡಿರುವ ಫೋಟೋದಲ್ಲಿ ಇಬ್ಬರು ಸೋಪಾದಲ್ಲಿ ಕುಳಿತು ಮಾತಿನಲ್ಲಿ ಮಗ್ನವಾಗಿರುವುದನ್ನು ಗಮನಿಸಬಹುದು. ಹಂಚಿಕೊಂಡಿರುವ ಫೋಟೊಗಳಿಗೆ ಸೂಪರ್ ಸ್ಟಾರ್ ಶ್ರೀ ರಜನಿಕಾಂತ್ ಅ​ರೊಂದಿಗಿನ ಭೇಟಿ..! ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು (10.01.2024) ಸಂಜೆ ಚೆನ್ನೈನ ಬಾಯ್ಸ್ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದೆ. ರಜನಿಕಾಂತ್​ ಅವರು ನಮ್ಮ ತಂದೆ ವೈಕೋ ಅವರ ಆರೋಗ್ಯವನ್ನು ವಿಚಾರಿಸಿದರು ಎಂದು ಬರೆದಕೊಂಡಿದ್ದಾರೆ. ಭೇಟಿಯ ವೇಳೆ ರಜನಿಕಾಂತ್​ ಬಿಳಿ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ದೊರೈ ವೈಕೋ ಕಪ್ಪು ಪ್ಯಾಂಟ್​ಗೆ ಬಿಳಿ ಶರ್ಟ್​ ಧರಿಸಿದ್ದರು.

ಇದನ್ನೂ ಓದಿ:ಪರಭಾಷೆಯ ಸಿನಿಮಾಗಳ ದರ್ಬಾರ್: ಈ ವಾರ ಒಂದೂ ಕನ್ನಡ ಸಿನಿಮಾ ಬಿಡುಗಡೆ ಇಲ್ಲ

ಇನ್ನು ರಜನಿಕಾಂತ್​ ಹಿಂದಿನ ಚಿತ್ರ 'ಜೈಲರ್' ಆಗಿದ್ದು, ಯಶಸ್ಸಿ ಪ್ರದರ್ಶನ ಕಂಡಿತ್ತು. ಚಿತ್ರದಲ್ಲಿ ಅವರ ಮಗ ಪೋಲೀಸ್​ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜಕುಮಾರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ಮುಂದಿನ170ನೇ ಚಿತ್ರ ವೆಟ್ಟೈಯನ್​ ಅಮಿತಾಭ್ ಬಚ್ಚನ್ ಅವರೊಂದಿಗೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳಲಿದ್ದಾರೆ. ಟಿ.ಜೆ ಜ್ಞಾನವೆಲ್​ ಆ್ಯಕ್ಷನ್ ಕಟ್​ ಹೇಳಿರುವ ಈ ಚಿತ್ರದ ಶೂಟಿಂಗ್​ ಈಗಾಗಲೇ ಪ್ರಾರಂಭಗೊಂಡಿದೆ.

ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ತಲೈವಾ ಜನ್ಮದಿನದಂದು ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಗಿತ್ತು. ಅದಕ್ಕಾಗಿ ಒಂದು ಚಿಕ್ಕ ಟೀಸರ್​​ನ್ನು ಚಿತ್ರ ತಂಡ ಹಂಚಿಕೊಂಡಿದ್ದು ರಜನಿಕಾಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅದ್ಭುತ ಮನರಂಜನೆ ಜೊತೆಗೆ ಅರ್ಥಪೂರ್ಣ ಸಂದೇಶವನ್ನೂ ಒಳಗೊಂಡಿರಲಿದೆ ಎಂದು ನಂಬಲಾಗಿದೆ. ಚಿತ್ರದಲ್ಲಿ ರಜನಿ, ಬಿಗ್ ಬಿ ಅಲ್ಲದೇ, ದಕ್ಷಿಣದ ಬಹುಬೇಡಿಕೆ ತಾರೆಯರಾದ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಕೂಡ ಇದ್ದಾರೆ. ಇದಕ್ಕೂ ಮುನ್ನ ಅಮಿತಾಭ್​ ಬಚ್ಚನ್ ಮತ್ತು ರಜನಿಕಾಂತ್ ಕೊನೆಯದಾಗಿ 1991 ರಲ್ಲಿ ಮುಕುಲ್ ಆನಂದ್ ನಿರ್ದೇಶನದ 'ಹಮ್' ಎಂಬ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ABOUT THE AUTHOR

...view details