ಮುಂಬೈ: ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 16ರ ವಿಜೇತರಾಗಿ ಎಂಸಿ ಸ್ಟಾನ್ ಹೊರಹೊಮ್ಮಿದ್ದಾರೆ. ತಮ್ಮ ಉತ್ತಮ ಆಟ ಹಾಗೂ ವ್ಯಕ್ತಿತ್ವದಿಂದ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದ ಸ್ಟಾನ್ಗೆ ಕಾರ್ಯಕ್ರಮದ ನಿರೂಪಕ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಟ್ರೋಫಿ ಜೊತೆ 31 ಲಕ್ಷಕ್ಕೂ ಹೆಚ್ಚು ನಗದು ಮತ್ತು ಕಾರನ್ನು ನೀಡಿದರು.
ಅಕ್ಟೋಬರ್ 1, 2022 ರಂದು ಪ್ರಾರಂಭವಾದ ಬಿಗ್ ಬಾಸ್ ಸೀಸನ್ 16ರ ಕಾರ್ಯಕ್ರಮದಲ್ಲಿ ಫೈನಲ್ಗೆ ಪ್ರಿಯಾಂಕಾ ಚಾಹರ್ ಚೌಧರಿ, ಎಂಸಿ ಸ್ಟಾನ್, ಶಿವ ಠಾಕ್ರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಉಳಿದುಕೊಂಡಿದ್ದರು. ಇವರಲ್ಲಿ ಎಂಸಿ ಸ್ಟಾನ್ ಮೊದಲ ರನ್ನರ್ ಅಪ್ ಆಗಿದ್ದು, ಶಿವ ಠಾಕ್ರೆ ಎರಡನೇ ಸ್ಥಾನ ಪಡೆದುಕೊಂಡರು. ವಿಜೇತೆ ಎಂದು ಬಿಂಬಿಸಲಾಗಿದ್ದ ಜನಪ್ರಿಯ ಟಿವಿ ತಾರೆ ಪ್ರಿಯಾಂಕಾ ಚಾಹರ್ ಚೌಧರಿ ಮೂರನೇ ಸ್ಥಾನದಲ್ಲಿದ್ದಾರೆ. ರಾಜಕಾರಣಿ, ಮಾಡೆಲ್ ಅರ್ಚನಾ ಗೌತಮ್ ನಾಲ್ಕನೇ ಸ್ಥಾನ ಪಡೆದರು. "ಸಾತ್ ಫೇರೆ: ಸಲೋನಿ ಕಾ ಸಫರ್" ಮತ್ತು "ಡಿಲ್ ಮಿಲ್ ಗಯ್ಯೆ" ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ನಟ ಶಾಲಿನ್ ಭಾನೋಟ್ ಐದನೇ ಸ್ಥಾನ ಗಳಿಸಿದರು.
ಇದನ್ನೂ ಓದಿ:ಕಿರುಕುಳದ ಬಗ್ಗೆ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಹೇಳಿದ್ದೇನು?
ವೇದಿಕೆ ಮೇಲೆ ಮಾತನಾಡಿದ ಸ್ಟಾನ್ " ಸಲ್ಮಾನ್ ಖಾನ್ ಸರ್, ನೀವು ನನಗೆ ಅನೇಕ ವಿಚಾರಗಳ ಕುರಿತು ಕಲಿಸಿ ಕೊಟ್ಟಿದ್ದೀರಿ, ಇದೆಲ್ಲದಕ್ಕೂ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಿಮ್ಮದು ನಿಜವಾದ ವ್ಯಕ್ತಿತ್ವ, ಯಾವುದೇ ಮೋಸವಿಲ್ಲ. ನನ್ನ ಈ ಗೆಲುವಿನಿಂದ ತಂದೆ, ತಾಯಿ ಬಹಳ ಹೆಮ್ಮೆಪಡುತ್ತಾರೆ. ನನಗೆ ಬಹಳಷ್ಟು ಪ್ರೀತಿ ನೀಡಿ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.