ತೆಲುಗು ನಟ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಕಳೆದ ಕೆಲ ಸಮಯದಿಂದ ಸಖತ್ ಸುದ್ದಿಯಲ್ಲಿದ್ದಾರೆ. ವಿವಾದಗಳು, ಟ್ರೋಲ್, ಟೀಕೆ ಬಳಿಕ 'ಮತ್ತೆ ಮದುವೆ'ಗೆ ಸಜ್ಜಾಗಿದ್ದಾರೆ. ಚುಂಬನ, ಮದುವೆ, ಹನಿಮೂನ್ ಹೀಗೆ ಹಲವು ಫೋಟೋ, ವಿಡಿಯೋಗಳ ಮೂಲಕ ಹಾಟ್ ಟಾಪಿಕ್ ಆಗಿದ್ದಾರೆ. ಈ ಜೋಡಿ ಮದುವೆಯಾದರು ಎಂದು ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ನಂಬಿತ್ತು. ಮೂರನೇ ಪತ್ನಿಗೆ ವಿಚ್ಛೇದನ ನೀಡದೆಯೇ ಈ ಮದುವೆ ನಡೆದಿದೆ ಎಂದು ಆರೋಪಿಸಲಾಗಿತ್ತು.
ಈ ಸುದ್ದಿಗಳು ಹಾಟ್ ಟಾಪಿಕ್ ಆದ್ರೂ ಬಹು ಸಮಯ ಈ ಜೋಡಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಒಂದಿಷ್ಟು ದಿನಗಳಾದ ಬಳಿಕ ಇದು ಕಂಪ್ಲೀಟ್ ಸಿನಿಮಾ ಎಂಬುದು ಬಹಿರಂಗವಾಯಿತು. ಹೌದು, ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ತಮ್ಮ ನಿಜ ಕಥೆಯನ್ನೇ 'ಮತ್ತೆ ಮದುವೆ' ಎಂಬ ಶೀರ್ಷೆಯುಳ್ಳ ಸಿನಿಮಾ ಮೂಲಕ ತೆರೆಗೆ ತರಲು ಸಜ್ಜಾಗಿದ್ದಾರೆ. ಆದ್ರೂ ಅಧಿಕೃತ ಮಾಹಿತಿ ಈ ಜೋಡಿ ಬಾಯಿಂದ ಬಂದಿಲ್ಲ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ವಿಡಿಯೋಗಳು, ಫೋಟೋಗಳು ಮಾತ್ರ ಇದು ನರೇಶ್ ಪವಿತ್ರಾ ಕಥೆಯೆಂದೇ ಹೇಳಿದೆ.
ಇದೊಂದು ವಿಭಿನ್ನ ಪ್ರಚಾರ ಎಂದೇ ಹೇಳಬಹುದು. ಜನರ ಗಮನ ಸೆಳೆದಿರುವ 'ಮತ್ತೆ ಮದುವೆ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೌದು ಇದೇ ಮೇ 26ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಮತ್ತೊಂದು ಹಾಡು ನಾಳೆ ಬೆಳಗ್ಗೆ 11ಗಂಟೆಗೆ ರಿಲೀಸ್ ಆಗಲಿದೆ.
ಕಳೆದ ವಾರವಷ್ಟೇ ಚಿತ್ರದ ಚಿತ್ರದ ಮೊದಲ ಹಾಡು ರಿಲೀಸ್ ಆಗಿತ್ತು. ಉರುಳೋ ಕಾಲವೇ ದು ಶುರುವಾಗುವ ಹಾಡನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಸಜ್ಜಾಗಿದೆ. ಆ ಹಾಡು ನಾಳೆ ಬೆಳಗ್ಗೆ ಅನಾವರಣಗೊಳ್ಳಲಿದೆ.