ಕೆಜಿಎಫ್, ಕಾಂತಾರ ಚಿತ್ರದ ಬಳಿಕ ಭಾರತೀಯ ಚಿತ್ರದ ಕಣ್ಣು ಸ್ಯಾಂಡಲ್ವುಡ್ ಮೇಲೆ ನೆಟ್ಟಿದೆ. ಒಂದೊಳ್ಳೆ ಕಂಟೆಂಟ್ ಜೊತೆಗೆ ಅದ್ಧೂರಿ ಮೇಕಿಂಗ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಸದ್ಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ.
ಮಾರ್ಟಿನ್ ಸೆಕ್ಯೂರಿಟಿ ಗಾರ್ಡ್ಸ್:ಇತ್ತೀಚೆಗೆ ಮಾರ್ಟಿನ್ ಟೀಸರ್ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಜನರು ಟೀಸರ್ ಅನ್ನು ವೀಕ್ಷಿಸಿದ್ದಾರೆ. ಟೀಸರ್ ನೋಡಿದವ್ರು ಅಬ್ಬಬ್ಬಾ ಇದು ಹಾಲಿವುಡ್ ಸಿನಿಮಾವೇ ಎಂದು ಒಂದು ಕ್ಷಣಕ್ಕೆ ಗೊಂದಲಕ್ಕೊಳಗಾಗಿದ್ದರು. ಇನ್ನೂ ಟೀಸರ್ ಲಾಂಚ್ ಈವೆಂಟ್ನಲ್ಲಿ ಸೆಕ್ಯೂರಿಟಿಗೆ ನಿಂತಿದ್ದ ಬೆಡಗಿಯರು ಸಹ ಟೀಸರ್ನಷ್ಟೇ ಗಮನ ಸೆಳೆದಿದ್ದಾರೆ. ಹಾಗಾದ್ರೆ ಮಾರ್ಟಿನ್ ಧ್ರುವ ಸರ್ಜಾ ಅವರ ಬಾಡಿಗಾರ್ಡ್ ಆಗಿ ಬಂದಿದ್ದ ಆ ಬೆಡಿಗಿಯರು ಯಾರು? ಎಲ್ಲಿಂದ ಬಂದಿದ್ರು? ಅವರನ್ನ ಕರೆಸಿದ್ದು ಯಾರು? ಎಂಬುದರ ಬಗ್ಗೆ ಇಂಟ್ರೆಸ್ಟ್ರಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಮಾರ್ಟಿನ್ ಟೀಸರ್: 'ಪೊಗರು' ಧ್ರುವ ಸರ್ಜಾ ಅವರನ್ನು ಆ್ಯಕ್ಷನ್ ಪ್ರಿನ್ಸ್ ಅಂತಾ ಏಕೆ ಕರೆಯುತ್ತಾರೆ ಅನ್ನೋದಕ್ಕೆ ಮಾರ್ಟಿನ್ ಟೀಸರ್ ಉತ್ತರ ಕೊಟ್ಟಿದೆ. ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಾಣಿಸದ ದೈತ್ಯಾಕಾರದಲ್ಲಿ ಧ್ರುವ ಸರ್ಜಾ ಮಾರ್ಟಿನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ನ ಆ್ಯಕ್ಷನ್ ಅವತಾರವನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದಾರೆ.
ಮಾರ್ಟಿನ್ಗೆ ಸೆಕ್ಯೂರಿಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಧ್ರುವ ಸರ್ಜಾರ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು. ಫೆಬ್ರವರಿ 23ರ ಸಂಜೆ ಐದು ಗಂಟೆ ಐವೈತ್ತೈದು ನಿಮಿಷಕ್ಕೆ ಮಾರ್ಟಿನ್ ಟೀಸರ್ ಅಭಿಮಾನಿಗಳ ಅರಮನೆ ಸೇರಿದೆ. ಅಲ್ಲದೇ ಟೀಸರ್ ಲಾಂಚ್ಗಾಗಿ ಅದ್ಧೂರಿ ಈವೆಂಟ್ ಮಾಡಿದ್ದ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿದೆ. ಈ ಈವೆಂಟ್ನಲ್ಲಿ ಮಾರ್ಟಿನ್ನಷ್ಟೇ ಗಮನ ಸೆಳೆದಿದ್ದು ವೇದಿಕೆಯಲ್ಲಿ ನಿಂತಿದ್ದ ಬೆಡಗಿಯರು. ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿನ್ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ವಿದೇಶಿ ಸುಂದರಿಯರು, ಒಂದರ್ಥದಲ್ಲಿ ಸೆಕ್ಯೂರಿಟಿಗಳು. ಅವರು ಮಾರ್ಟಿನ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನು ಕೇಳುತ್ತಿರಲಿಲ್ಲ. ಇದು ಕಾರ್ಯಕ್ರಮದ ಹೈಲೆಟ್ ಆಗಿತ್ತು.