ಕರ್ನಾಟಕ

karnataka

ETV Bharat / entertainment

'ಮಾರ್ಟಿನ್' ಆಡಿಯೋ ರೈಟ್ಸ್ ಕೋಟ್ಯಂತರ ರೂಪಾಯಿಗೆ ಮಾರಾಟ; ಧ್ರುವ ಸರ್ಜಾ ಸಿನಿಮಾ ಕಾತರ - ಧ್ರುವ ಸರ್ಜಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್' ಸಿನಿಮಾದ ಆಡಿಯೋ ರೈಟ್ಸ್ ಬಹುಕೋಟಿ ರೂಪಾಯಿಗೆ ಮಾರಾಟವಾಗಿದೆ.

Martin
ಮಾರ್ಟಿನ್

By ETV Bharat Karnataka Team

Published : Jan 5, 2024, 6:55 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈ ವೋಲ್ಟೆಜ್ ಸಿನಿಮಾ 'ಮಾರ್ಟಿನ್'. 2024ರ ಬಹುನಿರೀಕ್ಷಿತ ಚಿತ್ರವೂ ಹೌದು. ಟೀಸರ್​ನಿಂದಲೇ ದಕ್ಷಿಣ ಭಾರತದಲ್ಲಿ ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿರುವ ಸಿನಿಮಾವಿದು. ಧ್ರುವ ಸರ್ಜಾ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿರುವ 'ಮಾರ್ಟಿನ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ಸಖತ್​ ಸೌಂಡ್ ಮಾಡುತ್ತಿದೆ. ಈ ಚಿತ್ರ ರಿಲೀಸ್​ಗೂ ಮುನ್ನ ಕೋಟಿ ಕೋಟಿ ವ್ಯವಹಾರ ನಡೆಸಿದೆ. ಅಷ್ಟಕ್ಕೂ ಮಾರ್ಟಿನ್ ಚಿತ್ರದ ಆಡಿಯೋ ರೈಟ್ಸ್ ಎಷ್ಟು ಕೋಟಿಗೆ ಮಾರಾಟ ಆಗಿದೆ? ಯಾವ ಆಡಿಯೋ ಸಂಸ್ಥೆ ಖರೀದಿಸಿದೆ? ಎಂಬುದನ್ನು ತಿಳಿದುಕೊಳ್ಳೋ ಮುಂಚೆ ಸಿನಿಮಾದ ಒಂದಿಷ್ಟು ಸ್ಪೆಷಾಲಿಟಿಗಳೇನೆಂಬುದನ್ನು ನೋಡೋಣ ಬನ್ನಿ.

ಮಾರ್ಟಿನ್

ಈ ಹೈವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಬಹುಭಾಷಾ ನಟ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. 'ಮಾರ್ಟಿನ್' ಔಟ್ ಅಂಡ್ ಔಟ್ ಸಾಹಸಮಯ ಸಿನಿಮಾ. ಚಿತ್ರದಲ್ಲಿ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸ್ಟೋರಿಯೂ ಇರಲಿದೆ. ಸದ್ಯ ರಿವೀಲ್ ಆಗಿರುವ ಟೀಸರ್​ನಲ್ಲಿ ಧ್ರುವ ಸರ್ಜಾ ದೇಶ ಕಾಯುವ ರಕ್ಷಕ ಅನ್ನೋದು ಗೊತ್ತಾಗುತ್ತದೆ. ಅಲ್ಲದೇ, ಧ್ರುವ ತಮ್ಮ ಎಡಗೈ ತೋಳಿನ ಮೇಲೆ ಇಂಡಿಯಾ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಕೆ.ಎಂ 232 ಹೆಸರಿನ ಮಿಷನ್ ಗನ್ ಹಿಡಿದು ಶತ್ರುಗಳನ್ನು ಸಂಹಾರ ಮಾಡುವ ಪೋಸ್ಟರ್ ಸಖತ್​ ವೈರಲ್​ ಆಗಿದೆ.

ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್‌, ನಿಕಿತೀನ್‌ ಧೀರ್‌ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಬೆಂಗಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರೀಕರಣವಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಮಾರ್ಟಿನ್ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ.

​ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ ಮಾರ್ಟಿನ್ ಚಿತ್ರದ ಆಡಿಯೋಗೆ ಬಾರಿ ಡಿಮ್ಯಾಂಡ್ ಬಂದಿದೆ. ಸದ್ಯ ನಿರ್ಮಾಪಕ ಉದಯ್ ಮೆಹ್ತಾ ಆಪ್ತರ ಪ್ರಕಾರ, ಬರೋಬ್ಬರಿ 10 ಕೋಟಿಗೆ ''sarigama pa audio company'' ಮಾರ್ಟಿನ್ ಚಿತ್ರದ ಧ್ವನಿ ಸುರುಳಿಯನ್ನು ಖರೀದಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಡಿಯೋ ರೈಟ್ಸ್ 10 ಕೋಟಿ ರೂ.ಗೆ ಮಾರಾಟ ಆಗಿರೋದು ಇದೇ ಮೊದಲು ಅಂತಾ ಹೇಳಲಾಗುತ್ತಿದೆ. ಈ ಮೂಲಕ ಮಾರ್ಟಿನ್ ಚಿತ್ರ ಆಡಿಯೋ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ ಎನ್ನಲಾಗಿದೆ.

ಮಾರ್ಟಿನ್ ಚಿತ್ರತಂಡ

ಇದನ್ನೂ ಓದಿ:'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್​ ಮನವಿ

ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನವಿದೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಬಹು ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಇಷ್ಟು ದೊಡ್ಡ ಮೊತ್ತಕ್ಕೆ ಆಡಿಯೋ ಮಾರಾಟ ಆಗಿರೋದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಿರ್ಮಾಪಕ ಉದಯ್ ಆಪ್ತರ ಪ್ರಕಾರ ಮಾರ್ಚ್ ತಿಂಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಲಂ ಹಾಗು ಹಿಂದಿಯಲ್ಲಿ 'ಮಾರ್ಟಿನ್' ಅಬ್ಬರ ಶುರುವಾಗಲಿದೆ.

ಇದನ್ನೂ ಓದಿ:ತಮ್ಮ ಡೀಪ್‌ಫೇಕ್ ಫೋಟೋ ಕಂಡರೂ ಮೌನ ವಹಿಸಿದ್ದ ಜಾಹ್ನವಿ: ರಶ್ಮಿಕಾ ನಡೆಗೆ ಮೆಚ್ಚುಗೆ

ABOUT THE AUTHOR

...view details